💥ಬ್ರೇಕಿಂಗ್ ನ್ಯೂಸ್💥 💥ಸಾಸ್ತಾನ ಪಡಿತರ ಅಕ್ಕಿ ವಿವಾದ, ನಕಲಿ ಮಾಧ್ಯಮ ಹೆಸರು ಹೇಳಿಕೊಂಡು ಸುಲಿಗೆ ನಡೆಸುತ್ತಿದ್ದ – ಸಚಿನ್ ಸಿರಿಯನ್ ಪೋಸ್ಟರ್ ವೈರಲ್..!💥
ಉಡುಪಿ/ಬ್ರಹ್ಮಾವರ ನ.01




ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ (ಕೋಟ ಪೊಲೀಸ್ ಠಾಣಾ ವ್ಯಾಪ್ತಿ) ಪ್ರದೇಶದಲ್ಲಿ ನಡೆದ ಸರ್ಕಾರಿ ಪಡಿತರ (ಅನ್ನಭಾಗ್ಯ/PDS) ಅಕ್ಕಿ ಅಕ್ರಮ ದಾಸ್ತಾನು ಹಾಗೂ ಬೆದರಿಕೆ-ಸುಲಿಗೆ ಪ್ರಕರಣವು ಇದೀಗ ಮತ್ತೊಂದು ಪ್ರಮುಖ ತಿರುವು ಪಡೆದುಕೊಂಡಿದೆ.
ಘಟನೆಯ ಸಂಪೂರ್ಣ ಹಿನ್ನೆಲೆ:-
ಸಾಸ್ತಾನ ಸಮೀಪದ ನಿವಾಸಿಯೊಬ್ಬರ ಆವರಣದಲ್ಲಿ ಸರ್ಕಾರದಿಂದ ಬಡವರಿಗಾಗಿ ವಿತರಿಸಲಾಗುವ ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಈ ಅಕ್ಕಿಯ ಸಂಗ್ರಹಣೆ ಹಾಗೂ ವಿಲೇವಾರಿ ವಿಚಾರವಾಗಿ ಸ್ಥಳೀಯವಾಗಿ ವ್ಯಾಪಕ ಅನುಮಾನ ಹಾಗೂ ವಿವಾದ ಸೃಷ್ಟಿಯಾಗಿತ್ತು.
ನಕಲಿ ಪತ್ರಕರ್ತನ ಅವತಾರ ಮತ್ತು ಜೀವ ಬೆದರಿಕೆ, ಸುಲಿಗೆ ಆರೋಪ:-
ಪ್ರಕರಣದ ಪ್ರಮುಖ ಸಚಿನ್ ಸಿರಿಯನ್ ತಾನು ಮಾಧ್ಯಮದವನು / ಪತ್ರಕರ್ತ ಎಂದು ಸುಳ್ಳು ಹೇಳಿ ಕೊಂಡು ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಯಾವುದೇ ಅಧಿಕೃತ RNI (Registrar of Newspapers for India) ನೋಂದಣಿ ಹೊಂದಿದ ಪತ್ರಿಕೆಯಾಗಲಿ:-
ನೋಂದಾಯಿತ ನ್ಯೂಸ್ ಚಾನೆಲ್‌ಗಳಲ್ಲಾಗಲಿ ಕರ್ತವ್ಯ ನಿರ್ವಹಿಸದೆ, ಕೇವಲ ಸಾಮಾಜಿಕ ಜಾಲತಾಣ ಯೂಟ್ಯೂಬ್‌ಗಳಲ್ಲಿ ತಾನೇ ಪತ್ರಕರ್ತನಂತೆ ಬಿಂಬಿಸಿ ಕೊಂಡು ಬೇರೆಯವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಎನ್ನಲಾಗಿದೆ.
ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡಿ ಕೊಂಡು:-
ಪಡಿತರ ಅಕ್ಕಿ ದಾಸ್ತಾನು ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಅಸಭ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿ, ಪ್ರಾಣ ಬೆದರಿಕೆ ಒಡ್ಡಲಾಗಿತ್ತು. ಅಲ್ಲದೆ, ಬೆದರಿಸಿ ಹಣ ನೀಡುವಂತೆ ಬೇಡಿಕೆ ಇಟ್ಟು ಸುಲಿಗೆಗೆ ಯತ್ನಿಸಿದ ಗಂಭೀರ ಆರೋಪ ಈತನ ಮೇಲಿದೆ.
ಕೋಟ ಪೊಲೀಸರಿಂದ ಬಂಧನ ಹಾಗೂ ಕಾನೂನು ಕ್ರಮ:-
ಸಂತ್ರಸ್ತ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ತನಿಖೆ ಚುರುಕು ಗೊಳಿಸಿದ ಕೋಟ ಪೊಲೀಸರು ನಿಂದನೆ, ಜೀವ ಬೆದರಿಕೆ ಹಾಗೂ ಸುಲಿಗೆ ಯತ್ನದ ಆರೋಪ ದಡಿಯಲ್ಲಿ ಸಚಿನ್ ಸಿರಿಯನ್ ನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಪ್ರಕರಣ ಬೆನ್ನಲ್ಲೇ ಸಚಿನ್ ಸಿರಿಯನ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಪೋಸ್ಟರ್‌ಗಳು ಭಾರಿ ಸದ್ದು ಮಾಡುತ್ತಿವೆ. “ಅಕ್ಕಿ ಕಳ್ಳನಿಗೆ ಬೇರೆಯವರ ಬಗ್ಗೆ ಮಾತನಾಡಲು ನೈತಿಕತೆ ಇದೆಯೋ? ಸಾರ್ವಜನಿಕ ವಲಯಗಳಲ್ಲಿ ಬಾರಿ ಚರ್ಚೆ?” ಎಂದು ಬರೆದಿರುವ ಪೋಸ್ಟರ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ನಕಲಿ ಪತ್ರಕರ್ತರ ಹಾವಳಿ ಹಾಗೂ ಅಕ್ರಮ ಜಾಲದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
