💥ಕೋಟ: ಅಭಿಜಿತ್ @ ಅಭಿ ಮೇಲಿನ ಆರೋಪಗಳ ಹಿಂದಿನ ಸತ್ಯಾಸತ್ಯತೆ, ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಸಹಿಸದ – ಕಿಡಿಗೇಡಿಗಳ ಷಡ್ಯಂತ್ರ ಹಾಗೂ ಮಾಧ್ಯಮ ವರದಿಗಳ ನೈಜ ಚಿತ್ರಣ..!💥

ಕೋಟ ನ.02

ಇತ್ತೀಚಿನ ದಿನಗಳಲ್ಲಿ ಕೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ಕಿಡಿಗೇಡಿಗಳು ನಡೆಸಿದ ವ್ಯವಸ್ಥಿತ ರಾಜಕೀಯ ಹಾಗೂ ವೈಯಕ್ತಿಕ ದ್ವೇಷದ ಷಡ್ಯಂತ್ರವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಗೊಂದಲಕ್ಕೆ ಕಾರಣವಾಗಿತ್ತು. ಮಾಧ್ಯಮಗಳ ದಿಕ್ಕು ತಪ್ಪಿಸುವ ದುರುದ್ದೇಶದಿಂದ ಕೆಲವರು ಪೊಲೀಸ್ ಠಾಣೆಗೆ ನೂರಾರು ಸುಳ್ಳು ಅರ್ಜಿಗಳನ್ನು ಸೃಷ್ಟಿಸಿ ನೀಡಿ, ಆ ಮೂಲಕ ಸ್ಥಳೀಯ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳು ಪ್ರಕಟವಾಗುವಂತೆ ಮಾಡಿದ್ದಾರೆ ಎಂಬ ಗಂಭೀರ ವಿಚಾರ ಇದೀಗ ಬೆಳಕಿಗೆ ಬಂದಿದೆ.

ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಸಹಿಸದ ಕಿಡಿಗೇಡಿಗಳ ಕೃತ್ಯ:ಸ್ಥಳೀಯವಾಗಿ ಗೌರವಯುತವಾಗಿ ಬದುಕುತ್ತಿರುವ ಅಭಿಜಿತ್ @ ಅಭಿ, ಬಾರಿಕೆ ಅವರು ದಿನದಿಂದ ದಿನಕ್ಕೆ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಪ್ರಭಾವಶಾಲಿಯಾಗಿ ಮುಂಚೂಣಿಗೆ ಬರುತ್ತಿದ್ದಾರೆ. ಸಮಾಜದಲ್ಲಿ ಅವರು ಗಳಿಸುತ್ತಿರುವ ಜನಮನ್ನಣೆ ಹಾಗೂ ಬೆಳವಣಿಗೆಯನ್ನು ಕಂಡು ಸಹಿಸಲಾರದೆ, ಅವರ ವಿರೋಧಿಗಳು ಹಾಗೂ ಕೆಲವು ಕುತಂತ್ರಿ ಕಿಡಿಗೇಡಿಗಳು ತೆರೆಮರೆಯಲ್ಲಿ ನಿಂತು ಈ ಕೃತ್ಯ ಎಸಗಿದ್ದಾರೆ. ಅಭಿಜಿತ್ ಅವರ ರಾಜಕೀಯ ಹಾಗೂ ಸಾಮಾಜಿಕ ಭವಿಷ್ಯಕ್ಕೆ ಕಳಂಕ ತರುವ ಮತ್ತು ಅವರ ಹೆಸರನ್ನು ಸಾರ್ವಜನಿಕವಾಗಿ ಕೆಡಿಸುವ ಏಕೈಕ ದುರುದ್ದೇಶದಿಂದ ಈ ವ್ಯವಸ್ಥಿತ ಸುಳ್ಳು ಕಥೆಯನ್ನು ಸೃಷ್ಟಿಸಲಾಗಿದೆ.

ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಪೊಲೀಸ್ ಠಾಣೆಗೆ ಸಲ್ಲಿಕೆಯಾದ ನಕಲಿ ಅರ್ಜಿಗಳನ್ನೇ ಬಂಡವಾಳ ಮಾಡಿಕೊಂಡು ಕೆಲವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳು ಪ್ರಕಟಗೊಂಡಿವೆ. ಆದರೆ, ಪ್ರಾಥಮಿಕ ತನಿಖೆ ಮತ್ತು ವಾಸ್ತವಿಕ ನೆಲೆಯಲ್ಲಿ ಅಭಿಜಿತ್ @ ಅಭಿ ಅವರ ಮೇಲಿನ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಹಾಗೂ ಕಲ್ಪಿತ ಕಥೆ ಎಂಬುದು ಸ್ಪಷ್ಟವಾಗಿದೆ.

ಮಾಧ್ಯಮಗಳ ಪಾತ್ರ ಹಾಗೂ ನೈತಿಕ ಹೊಣೆಗಾರಿಕೆ:-

ಮಾಧ್ಯಮಗಳು ಸಮಾಜದ ಕನ್ನಡಿಯಾಗಿದ್ದು, ಸತ್ಯವನ್ನು ಜನರಿಗೆ ತಲುಪಿಸುವುದು ಅವುಗಳ ಕರ್ತವ್ಯ. ಆದರೆ, ಕೆಲ ಕಿಡಿಗೇಡಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಮಾಧ್ಯಮದವರ ಚೀಲದಲ್ಲಿ ಸುಳ್ಳು ದೂರುಗಳನ್ನು ತುರುಕಿ, ಪತ್ರಿಕೆಗಳನ್ನು ಹಾಗೂ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡಿರುವುದು ಖಂಡನೀಯ. ಈ ಕುರಿತು ಎಚ್ಚೆತ್ತ ಮಾಧ್ಯಮದವರು ಮತ್ತು ಜಾಗೃತ ನಾಗರಿಕರು, ಇದು ಯಾವುದೇ ನೈಜ ಘಟನೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಕಿಡಿಗೇಡಿಗಳ ಹುನ್ನಾರ ಎಂಬ ಸತ್ಯವನ್ನು ಅರಿತುಕೊಳ್ಳಬೇಕಿದೆ. ಮಾಧ್ಯಮದವರಿಗೆ ಅಥವಾ ಈ ಸುದ್ದಿಯನ್ನು ಹಂಚಿಕೊಂಡವರಿಗೆ ಯಾವುದೇ ಕಾನೂನು ಅಥವಾ ನೈತಿಕ ತೊಂದರೆ ಆಗದಂತೆ, ಸಂಪೂರ್ಣ ಎಚ್ಚರಿಕೆಯಿಂದ ಈ ಸ್ಪಷ್ಟನೆಯನ್ನು ನೀಡಲಾಗಿದೆ.

ಸಾರ್ವಜನಿಕರಿಗೆ ಮತ್ತು ಅಭಿಜಿತ್ ಪರ ವಿನಂತಿ:-

ಯಾವುದೇ ರೀತಿಯ ಅಧಿಕೃತ ಸಾಕ್ಷ್ಯಗಳಿಲ್ಲದೆ, ಕೇವಲ ಕಿಡಿಗೇಡಿಗಳ ಪ್ರಚೋದನೆಗೆ ಅಥವಾ ಗಾಳಿ ಸುದ್ದಿಗೆ ಸಾರ್ವಜನಿಕರು ಕಿವಿಗೊಡಬಾರದು. ಅಭಿಜಿತ್ @ ಅಭಿ ಹಾಗೂ ಅವರ ಆಪ್ತರ ಮೇಲಿನ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಎಂಬುದು ಸಾಬೀತಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಮಾಧ್ಯಮಗಳೊಂದಿಗೆ ಸಹಕರಿಸಿ, ಸತ್ಯದ ಪರವಾಗಿ ನಿಲ್ಲುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button