ಅನಾಹುತ ಸಂಭವಿಸುವ ಮುನ್ನ ಗ್ಯಾಸ್ ಗೋದಾಮು – ಸ್ಥಳಾಂತರಿಸಿಲು ರಾಜಾ ಸುಭಾಷ್ ಚಂದ್ರ ನಾಯಕ ಆಗ್ರಹ.

ಮಾನ್ವಿ ನ.02

ಪಟ್ಟಣದ ವಾರ್ಡ್ ನಂ.5 ರ ಜನ ವಸತಿ ಪ್ರದೇಶದಲ್ಲಿರುವ ಶ್ರೀನಿಧಿ ಭಾರತ್ ಗ್ಯಾಸ್ ಸಂಸ್ಥೆಯ ಗೋದಾಮನ್ನು ಪಟ್ಟಣದ ಹೊರ ವಲಯದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲೂಕು ಅಧ್ಯಕ್ಷ ರಾಜಾ ಸುಭಾಷ್ ಚಂದ್ರ ನಾಯಕ ಆಗ್ರಹಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಅವರು, ಜನವಸತಿ ಪ್ರದೇಶದ ಮಧ್ಯಭಾಗದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿರುವುದು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಗ್ಯಾಸ್ ಸೋರಿಕೆ ಅಥವಾ ಅಗ್ನಿ ಅವಘಡ ಸಂಭವಿಸಿದರೆ ಭಾರೀ ಅನಾಹುತ ಸಂಭವಿಸುವ ಆತಂಕವಿದೆ ಎಂದು ಹೇಳಿದರು.

ಗೋದಾಮಿನ ಸುತ್ತಮುತ್ತ ಆಸ್ಪತ್ರೆಗಳು, ಜನ ವಸತಿ ಪ್ರದೇಶಗಳು, ವಿಶ್ವ ಚೇತನ ಹಿರಿಯ ಪ್ರಾಥಮಿಕ ಶಾಲೆ, ಬಿ.ವಿ.ಆರ್. ಶಾಲೆ ಹಾಗೂ ಬಿ.ವಿ.ಆರ್. ವಸತಿ ಶಾಲೆಗಳು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿವೆ. ಪ್ರತಿದಿನ ನೂರಾರು ವಿದ್ಯಾರ್ಥಿಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದು, ಗ್ಯಾಸ್ ಸಿಲಿಂಡರ್‌ಗಳಿಂದ ಯಾವುದೇ ಅನಾಹುತ ಸಂಭವಿಸಿದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗಲಿದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಗೋದಾಮನ್ನು ಪಟ್ಟಣದ ಹೊರ ವಲಯದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸ ಬೇಕು ಎಂದು ಒತ್ತಾಯಿಸಿದರು.

ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಯಚೂರು ಜಿಲ್ಲಾಕಾರ್ಯಾಧ್ಯಕ್ಷ ಆನಂದಸ್ವಾಮಿ ಹಿರೇಮಠ ಮಾತನಾಡಿ, ಅಡುಗೆ ಅನಿಲ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಜನವಸತಿ ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಬಾರದು ಎಂಬ ನಿಯಮವಿದ್ದರೂ, ವಾರ್ಡ್ ನಂ. 5ರ ಜನವಸತಿ ಪ್ರದೇಶದಲ್ಲಿ ಗೋದಾಮು ಕಾರ್ಯನಿರ್ವಹಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಲ್ಲಿಂದಲೇ ನಿತ್ಯ ನೂರಾರು ಗ್ರಾಹಕರಿಗೆ ವಾಹನಗಳ ಮೂಲಕ ಅಡುಗೆ ಅನಿಲ ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸಲ್ಲಿಕೆಯಲ್ಲಿ ಭಾಗವಹಿಸಿದವರು:–

ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಚನ್ನಬಸವಗೌಡ ಗವಿಗಟ್ಟು, ಜಿಲ್ಲಾ ಉಪಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ತಾಲೂಕು ಅಧ್ಯಕ್ಷ ಭೀಮಣ್ಣ ಮುದುಗಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಬಸವ ನಾಯಕ ಗೊಲ್ಲದಿನ್ನಿ, ಕೆ. ಶಿವಕುಮಾರ್, ಎಚ್. ಶರಫುದ್ದೀನ್ ಪೋತ್ನಾಳ್, ಎಚ್. ಮುಕ್ತಾರ್ ಅನೀಫ್, ಕುರ್ಮಾ, ಶೇಖ್ ಫರೀದ್ ಉಮ್ರಿ, ರಾಜು ತಾಳಿಕೋಟಿ, ಅನಿಲ್ ಕುಮಾರ್ ಹೆಚ್., ಓಂ ಮಂಡಳಿ ಶಿವಶಕ್ತಿ ಸಂಚಾಲಕರಾದ ಅಕ್ಕಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ಗಿರಿ ನಾಯಕ, ನಾಗರಾಜ ಮೇಟಿ, ಅಫ್ರೋಜ್, ಮನೋಹರ ಆಚಾರಿ, ಸುನಿಲ್ ಬೆಟ್ಟದೂರು, ಲಿಂಗರಾಜ ತಡಕಲ್, ಹುಸೇನಿ, ಹನುಮೇಶ ನಾಯಕ, ಅಮರೇಗೌಡ ಮುಟ್ಟೂರು, ಮರಿಸ್ವಾಮಿ ಶಾಂತಗೆಲ್, ವಿಶ್ವಚೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಂ. ಹಿರೇಮಠ್, ಕಾರ್ಯದರ್ಶಿ ಗೀತಾ ಹಿರೇಮಠ್, ಪಾಲಕರಾದ ಈರಣ್ಣ ಚಲ್ಮಲ್ ಸೇರಿದಂತೆ 5ನೇ ವಾರ್ಡಿನ ನಿವಾಸಿಗಳು, ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button