೭೧ ನೇ. ಕನ್ನಡ ರಾಜ್ಯೋತ್ಸವವನ್ನು – ಕನ್ನಡ ಕೌಸ್ತುಭದಲ್ಲಿ ಕನ್ನಡ ಕಲರವ ನಿಲಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಚಳ್ಳಕೆರೆ ನ.02

ಕನ್ನಡ ಕೌಸ್ತುಭದಲ್ಲಿ ಕನ್ನಡ ಕಲರವ-೪ ಕನ್ನಡ ರಾಜ್ಯೋತ್ಸವವನ್ನು ಮನೆಯಲ್ಲಿಯೇ ಆಚರಿಸುತ್ತಾ ಬಂದಿರುವ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ದಂಪತಿಗಳು ಈ ಬಾರಿಯ ೭೧ ನೇ. ಕನ್ನಡ ರಾಜ್ಯೋತ್ಸವವನ್ನು ತಮ್ಮ ಕನ್ನಡ ಕೌಸ್ತುಭ ನಿಲಯದಲ್ಲಿ ತುಂಬಾ ಅರ್ಥ ಪೂರ್ಣವಾಗಿ ಆಯೋಜಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿ ಗೀತಾ ನಾಗರಾಜ ವಹಿಸಿದ್ದರು. ಉದ್ಘಾಟನೆಯನ್ನು ಸಾಹಿತಿ ಕೊರ್ಲಕುಂಟೆ ತಿಪ್ಪೇಸ್ವಾಮಿ ನೆರೆವೆರಿಸಿದರು. ಪ್ರಾಸ್ತಾವಿಕ ನುಡಿಗಳನ್ನು ಡಿ.ಶಬ್ರಿನಾ ಮಹಮದ್ ಅಲಿ ಆಡಿದರು.

ಮುಖ್ಯ ಅತಿಥಿಗಳಾಗಿ ಮಹಮದ್ ಅಲಿ,ಯತೀಶ ಎಂ ಸಿದ್ದಾಪುರ ಆಗಮಿಸಿದ್ದರು. ಕವಿತೆ ವಾಚನ & ಗೀತ ಗಾಯನದಲ್ಲಿ ಹಾಲೇಶ್. ಕೆ,ವಿಜಯಲಕ್ಷ್ಮೀ ಜಿ. ಶಿವಲೀಲಾ, ಪಗಡಲಬಂಡೆ ನಾಗೇಂದ್ರಪ್ಪ, ಮನುಶ್ರೀ ಸಿದ್ದಾಪುರ, ಕೆಂಚರಾಜ್, ಯೋಗೇಶ್ವರಿ, ತಿಪ್ಪೇರುದ್ರಪ್ಪ, ಶಿವುಕುಮಾರ್, ಲಕ್ಷ್ಮೀದೇವಿ, ಗೀತಾಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button