ಖಂಡನ ಭವ ಬಂಧನ ಶ್ರೀರಾಮಕೃಷ್ಣರ ಜೀವನ ಚರಿತ್ರೆ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ನ.07




ಸ್ವಾಮಿ ವಿವೇಕಾನಂದರು ನೀಲಾಂಬರ ಬಾಬುಗಳ ತೋಟದ ಮನೆಯಲ್ಲಿ ರಚಿಸಿದ ಶ್ರೀರಾಮಕೃಷ್ಣ ಮಹಾ ಸಂಘದ ಆರಾತ್ರಿಕ ಭಜನೆಯಾದ ಖಂಡನ ಭವ ಬಂಧನವು ಶ್ರೀರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಯಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ದಿವ್ಯತ್ರಯರಿಗೆ ಆರತಿ ನಡೆಸಿಕೊಟ್ಟು ಖಂಡನ ಭವ ಬಂಧನ ಪದ್ಯದ ಭಾವಾರ್ಥ ವಿವರಣೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಏಕಾದಶಿಯ ಪ್ರಯುಕ್ತ ವನಜಾಕ್ಷಿ ಮೋಹನ್ ಮತ್ತು ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ರಾಮನಾಮ ಸಂಕೀರ್ತನೆ, ನಾಮಾವಳಿಗಳು, ಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗದಲ್ಲಿ ಎಂ ಗೀತಾ ನಾಗರಾಜ್, ಜಿ ಯಶೋಧಾ ಪ್ರಕಾಶ್, ಚೇತನ್, ಬಿ.ಸುಮನಾ, ಅಂಬುಜಾ, ಡಿ.ಕಾವೇರಿ ಸುರೇಶ್, ಪಂಕಜಾ, ಮಾನ್ಯ, ಪ್ರವಲ್ಲಿಕಾ, ಭೂಮಿಕ ಸೇರಿದಂತೆ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
