ಬ್ರಹ್ಮಾಂಡ ಪುರಾಣದಲ್ಲಿ ಶ್ರೀಲಲಿತಾ ಸಹಸ್ರನಾಮ ಸ್ತೋತ್ರ ಬರುತ್ತದೆ – ಪುಷ್ಪಲತಾ ವಿಜಯ್.

ಚಳ್ಳಕೆರೆ ನ.09

ಹದಿನೆಂಟು ಮಹಾ ಪುರಾಣಗಳಲ್ಲಿ ಒಂದಾದ ಬ್ರಹ್ಮಾಂಡ ಪುರಾಣದಲ್ಲಿ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಬರುತ್ತದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಿಜಯ್ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀ ಲಲಿತಾ ಸಹಸ್ರನಾಮದ ಅರ್ಥ ಚಿಂತನೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಅವರು ಐದು ಶ್ಲೋಕಗಳ ಬಗ್ಗೆ ಮಾತನಾಡಿದರು.

ಶ್ರೀ ಲಲಿತಾ ಸಹಸ್ರನಾಮವನ್ನು ಪೂರ್ವ ಪೀಠಿಕಾ ಭಾಗ ಸಹಸ್ರನಾಮಗಳ ಸ್ತುತಿ ಭಾಗ ಮತ್ತು ಫಲ ಶ್ರುತಿಯ ಭಾಗಗಳಾಗಿ ವಿಂಗಡಿಸಲಾಗಿದೆ‌.

ಭಂಡಾಸುರನೆಂಬ ರಾಕ್ಷಸನ ಸಂಹಾರಕ್ಕಾಗಿ ದೇವಿ ಲಲಿತೆಯ ಆವಿರ್ಭಾವವಾಗುತ್ತದೆ.ಶ್ರೀಲಲಿತಾ ಸಹಸ್ರನಾಮದಲ್ಲಿ ದೇವಿಯನ್ನು ವಿವಿಧ ನಾಮಗಳಿಂದ ಸ್ತುತಿ ಮಾಡಲಾಗಿದ್ದು ಇದರಲ್ಲಿ ಒಟ್ಟು 184 ಶ್ಲೋಕಗಳಿವೆ. ಇದರ ನಿತ್ಯ ಪಠಣದಿಂದ ಉತ್ತಮ ಫಲಪ್ರಾಪ್ತಿ ಉಂಟಾಗುತ್ತದೆ ಎಂದು ಅವರು ಹೇಳಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ದಿವ್ಯತ್ರಯರಿಗೆ ಪೂಜೆ ಮತ್ತು ಪ್ರಾರ್ಥನೆ, ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್ ಅವರಿಂದ ಶ್ರೀ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಪಾರಾಯಣ, ಎಂ ಗೀತಾ ನಾಗರಾಜ್, ತಿಪ್ಪಮ್ಮ, ಶೋಭಾ ರಮೇಶ್, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ, ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಪ್ರೇಮಾ, ಜಯಮ್ಮ, ಎಂ ಲಕ್ಷ್ಮೀದೇವಮ್ಮ, ದಾಕ್ಷಾಯಣಿ, ರಾಘವೇಂದ್ರ, ಸೌಮ್ಯ ಪ್ರಸಾದ್, ಸುವರ್ಣ ಹಾಜರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button