ಡಿಸೆಂಬರ್ 6 ಮತ್ತು 20 ರಂದು – ಗೀತಾ ಕಂಠ ಪಾಠ ಸ್ಪರ್ಧೆ ಆಯೋಜಿಸಿದೆ.
ಚಳ್ಳಕೆರೆ ನ.09




ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಆವರಣದಲ್ಲಿ ಶ್ರೀ ನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟೀಸ್ ನ ಸಹಯೋಗದಲ್ಲಿ “ಗೀತಾ ಜಯಂತಿ” ಯ ಪ್ರಯುಕ್ತ “ಶ್ರೀಮದ್ ಭಗವದ್ಗೀತಾ ಕಂಠ ಪಾಠ ಸ್ಪರ್ಧೆ” ಯನ್ನು ಡಿಸೆಂಬರ್ 6 ರ ಭಾನುವಾರ ಬೆಳಿಗ್ಗೆ 10 ಗಂಟೆ ಯಿಂದ ಶ್ರೀಮದ್ ಭಗವದ್ಗೀತೆಯ ನಾಲ್ಕನೇ ಅಧ್ಯಾಯದ ಜ್ಞಾನ ಯೋಗದ ಮೊದಲ ಇಪ್ಪತ್ತು ಶ್ಲೋಕಗಳ ಕಂಠ ಪಾಠ ಸ್ಪರ್ಧೆಯು ಮಹಿಳಾ ಭಕ್ತರಿಗೆ ಮತ್ತು ಡಿಸೆಂಬರ್ 20 ರ ಭಾನುವಾರ ಬೆಳಿಗ್ಗೆ 10 ಗಂಟೆ ಯಿಂದ ಆಯೋಜಿಸಿದೆ.
ಶ್ರೀಮದ್ ಭಗವದ್ಗೀತೆಯ ನಾಲ್ಕನೇ ಅಧ್ಯಾಯ ಜ್ಞಾನ ಯೋಗದ ಮೊದಲ ಹತ್ತು ಶ್ಲೋಕಗಳು 1 ರಿಂದ 4 ನೇ. ತರಗತಿ ವಿದ್ಯಾರ್ಥಿಗಳಿಗೆ, ಮೊದಲ ಹದಿನೈದು ಶ್ಲೋಕಗಳು 5 ರಿಂದ 7 ನೇ. ತರಗತಿ ವಿದ್ಯಾರ್ಥಿಗಳಿಗೆ, ಮೊದಲ ಇಪ್ಪತ್ತು ಶ್ಲೋಕಗಳು 8 ರಿಂದ 10 ನೇ. ತರಗತಿ ವಿದ್ಯಾರ್ಥಿಗಳಿಗೆ ಕಂಠ ಪಾಠ ಸ್ಪರ್ಧೆ ನಡೆಯಲಿದ್ದು ವಿಭಾಗವಾರು ಮೂರು ಬಹುಮಾನಗಳನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.
ಈ ಸ್ಪರ್ಧೆಗೆ ನೋಂದಾಯಿಸಲು ಇದೇ ನವೆಂಬರ್ 30 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆಗೆ ಕರೆ ಮಾಡುವಂತೆ ಶ್ರೀ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಯತೀಶ್ ಎಂ ಸಿದ್ದಾಪುರ-7204351903.
