ಕಾನೂನು ಬದ್ಧವಾಗಿ ವಿದ್ಯುತ್ ಪಡೆದು – ವಿದ್ಯುತ್ ನಿಯಮ ಪಾಲನೆ ಮಾಡಿ ಎಂದು ಹೆಸ್ಕಾಂ ಶಾಖಾಧಿಕಾರಿ ಉಮೇಶ ಸೋಲಾಪುರ ಕರೆ ನೀಡಿದರು.

ಅರ್ಜುಣಗಿ ಬಿ.ಕೆ ನ.08

ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದವರ ವಿರುದ್ಧ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಬಳಕೆ ಮಾಡಲಾಗುತ್ತಿದ್ದ ನೀರಿನ ಮೋಟಾರ್, ವಾಟರ್ ಹೀಟರ್ ಹಾಗೂ ವಿದ್ಯುತ್ ಒಲೆ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳನ್ನು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ.

ಗ್ರಾಮದಲ್ಲಿ ಅಕ್ರಮ ವಿದ್ಯುತ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಂಡ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.

ಸಾರ್ವಜನಿಕರು ವಿದ್ಯುತ್ ಸಂಪರ್ಕವನ್ನು ಕಾನೂನು ಬದ್ಧವಾಗಿ ಪಡೆದು, ವಿದ್ಯುತ್ ಅನ್ನು ಸುರಕ್ಷಿತವಾಗಿ ಹಾಗೂ ನಿಯಮಾನುಸಾರ ಬಳಸುವಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿ ಹೇಳಿದರು.

ವಿದ್ಯುತ್ ಕಳ್ಳತನ ಹಾಗೂ ಅನಧಿಕೃತ ವಿದ್ಯುತ್ ಬಳಕೆ ಯಿಂದ ಇಲಾಖೆಗೆ ಆಗುವ ನಷ್ಟವನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಇಂತಹ ಕಾರ್ಯಾಚರಣೆಗಳು ಮಹತ್ವದ್ದಾಗಿವೆ.

ಸಾರ್ವಜನಿಕರು ವಿದ್ಯುತ್ ಸಂಪರ್ಕವನ್ನು ಕಾನೂನು ಬದ್ಧವಾಗಿ ಪಡೆದು, ವಿದ್ಯುತ್ ನಿಯಮಗಳನ್ನು ಪಾಲಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸ ಬೇಕು ಎಂದು ಈ ಕಾರ್ಯಾಚರಣೆ ಸಂದೇಶ ನೀಡಿದೆ.

ಕಾರ್ಯಚರಣೆಯಲಿ ಹೆಸ್ಕಾಂ ಇಲಾಖೆಯ ಶಾಖಾಧಿಕಾರಿ ಉಮೇಶ ಸೊಲಾಪುರ ನೇತೃತ್ವದಲ್ಲಿ ಶಾಖೆಯ ಎಲ್ಲಾ ಸಿಬ್ಬಂದಿ ಒಗ್ಗೂಡಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಿ.ಎಸ್ ಮಾನೆ, ಎ.ಆ‌ರ್ ರೆಹಮಾನ, ಮಹಾಂತೇಶ ಇಂಡಿ, ಶಿವಲಿಂಗ ತೆಗ್ಗಿಹಳ್ಳಿ, ಸಂತೋಷ ರಾವೂರ, ಬಸವರಾಜ ಹೂನಳ್ಳಿ, ಸಾಹೇಬಗೌಡ ತಾವರಖೇಡ, ಮಲ್ಲು ಮನಗೂಳಿ, ಮೊಹಮ್ಮದ ಅರೀಫ ಇನಾಮದಾರ, ಶರಣು ಹೊಸೂರ, ಗೌಡಪ್ಪ ಬಿರಾದಾ‌ರ ಸೇರಿದಂತೆ ಇತರರು ಇದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button