‘ಮಣಿಕಂಠ’ ಸಿನಿಮಾದ ‘ಮನಸೊಳಗೆ ಗುಡಿಯ ಕಟ್ಟಿ’ – ಹಾಡು ಬಿಡುಗಡೆ.
ಬೆಂಗಳೂರ ನ.16




ಅಶ್ವಿನಿ ಪ್ರೊಡಕ್ಷನ್ಸ್ ಬೆಂಗಳೂರ ಅವರ ಅಯ್ಯಪ್ಪಸ್ವಾಮಿ ಕುರಿತಾದ ಭಕ್ತಿ ಪ್ರಧಾನ ಕನ್ನಡ ಚಲನ ಚಿತ್ರ ‘ಮಣಿಕಂಠ’ ಚಲನ ಚಿತ್ರದ ಮೂರನೆಯ ಹಾಡು ಬಿಡುಗಡೆ ಕಾರ್ಯಕ್ರಮ ಮಹಾಲಕ್ಷ್ಮಿ ಲೇ ಔಟ್‌ನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲ್ಲಿ ನೆರವೇರಿತು.
ಗಾಯಕರಾದ ಆರಾಧ್ಯರಾವ್ ಹಾಡಿರುವ ‘ಮನಸೊಳಗೆ ಗುಡಿಯ ಕಟ್ಟಿ” ಹಾಡನ್ನು ಮ್ಯೂಸಿಕ್ ಲೇಬಲ್ ಆನಂದ್ ಆಡಿಯೋ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಭರ್ಜರಿ ಸದ್ದು ಮಾಡುತ್ತಿದೆ.

ಹಾಡಿನಲ್ಲಿ ಗುರುಜೀವನ ಸಿಂಹ, ತನುಶ್ರೀ ಸಿಂಹ ಅವರ ಅಭಿನಯ ವಿಶೇಷವಾಗಿದೆ. ಚಿತ್ರದ ನಿರ್ದೇಶಕರು, ನಾಯಕ ನಟರಾದ ಸಂತೋಷ್ ಸಿಂಹ, ನಿರ್ಮಾಪಕರಾದ ಶ್ರೀಮತಿ ಅಶ್ವಿನಿ, ಸಂಗೀತ ನಿರ್ದೇಶಕ ಸ್ವರೂಪ್, ಬಾಲನಟ ಗುರು ಜೀವನ್, ವಿಶ್ವನಾಥ ಎಸ್,ರಾಜು ಗುರುಸ್ವಾಮಿ, ಕೃಷ್ಣಮೂರ್ತಿ ಗುರುಸ್ವಾಮಿ, ನಾರಾಯಣ, ಶರತ್, ಕಬಾಬ್ ಮಂಜು, ಮಂಜುಳಾ ಬಿಎಲ್, ಸುನೀಲ, ರಾಘವೇಂದ್ರ, ನೀಲಪ್ಪ ಮುಳಿಮಾನಿ, ಚೇತನ್, ತಿಲಕ್ ಆರ್, ದೇವರಾಜ್ ಕೇಸರಿ ಮತ್ತು ಚಿತ್ರ ತಂಡದ ಸದಸ್ಯರು, ನೂರಾರು ಅಯ್ಯಪ್ಪಸ್ವಾಮಿ ಭಕ್ತರು ಭಾಗವಹಿಸಿದ್ದರು.

ಬೆಂಗಳೂರು, ಶಬರಿಮಲೆ, ಪಂಪ, ದೊಡ್ಡಪಾದ ಮೊದಲಾದೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಗುರು ಜೀವನ್‌ಸಿಂಹ, ತನುಶ್ರೀ ಸಿಂಹ, ಬಿ.ಎಸ್.ಮಂಜುಳಾ, ವೈಷ್ಣವಿ.ಎಸ್.ಡಿ, ಶರತ್. ಎಸ್.ಎಂ, ಲೋಕೇಶ ವಿದ್ಯಾಧರ, ಮಮತಾ, ಶಿವಣ್ಣ ಮೊದಲಾದವರು ಅಭಿನಯಿಸಿದ್ದಾರೆ. ಚೇತನ್‌ಕುಮಾರ್ ಸಾಹಿತ್ಯದ ಐದು ಗೀತೆಗಳಿಗೆ ಸ್ವರೂಪ್.ಆರ್ ಸಂಗೀತ ಸಂಯೋಜಿಸಿದ್ದಾರೆ.

ಛಾಯಾಗ್ರಹಣ-ಸಂಕಲನ ವರ್ಷಿತ್.ಎಸ್.ಎನ್, ಸಾಹಸ ಗಣೇಶ್, ಕಲೆ ಶರತ್.ಎಸ್ ಎಂ, ವರ್ಣಾಲಂಕಾರ ನಾರಾಯಣಸ್ವಾಮಿ, ಪಿ.ಆರ್.ಓ ಚಂದ್ರಶೇಖರ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಅಶ್ವಿನಿ ಸಂತೋಷ ಸಿಂಹ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಧ್ಯ ಬಿಡುಗಡೆ ಯಾದ ಹಾಡು ಎಲ್ಲೆಡೆ ವೈರಲ್ ಆಗುತ್ತಿದೆ.
ವಿಶೇಷವಾಗಿ ಅಯ್ಯಪ್ಪಸ್ವಾಮಿ ಭಕ್ತರ ಮನ ಮುಟ್ಟುತ್ತಿದೆ ಎಂದು ನಿರ್ಮಾಪಕಿ ಅಶ್ವಿನಿ ಮತ್ತು ನಿರ್ದೇಶಕ ಸಂತೋಷ ಸಿಂಹ ಹೇಳಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ
