ಮಾಜಿ ಸಂಸದ ಬಿ.ವಿ ನಾಯಕ ಅವರ 59 ನೇ. – ಹುಟ್ಟು ಹಬ್ಬ ಆಚರಣೆ.
ಮಾನ್ವಿ ನ.16




ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಡೆದ ಮಾಜಿ ಸಂಸದ ಬಿ.ವಿ.ನಾಯಕ ಅವರ 59 ನೇ ಹುಟ್ಟು ಹಬ್ಬದ ಅಂಗವಾಗಿ ನಡೆದ ಉಚಿತ ಆರೋಗ್ಯ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಗಳು ಮಾಜಿ ಸಂಸದರಾದ ಬಿ.ವಿ.ನಾಯಕ ರವರು ಅತ್ಯಂತ ಸರಳವಾದ ವ್ಯಕ್ತಿಯಾಗಿದ್ದು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರ ಜನ್ಮದಿನವಾಗಿ ವೈಭವದಿಂದ ಆಚರಿಸಿ ಕೊಳ್ಳದೆ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅತ್ಯಂತ ಸರಳವಾಗಿ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಸೇರಿದಂತೆ ತಾಲೂಕಿನ ಆನಾಥರಿಗೆ. ವಿಶೇಷ ಚೇತನರಿಗೆ ಆಹಾರ ಹಾಗೂ ಹಣ್ಣುಗಳನ್ನು ವಿತರಿಸುವ ಮೂಲಕ ಸಮಾಜ ಮುಖಿಯಾಗಿ ಇತರರಿಗೆ ಮಾದರಿಯಾಗುವಂತೆ ಆಚರಿಸಿ ಕೊಂಡಿದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆಯನ್ನು ಕೈಗೊಳ್ಳಲಿ ಎಂದು ತಿಳಿಸಿದರು.
ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ನವಲಕಲ್ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಉಟಕನೂರು ಮರಿಬಸವ ತಾತಾನ ಮಠದ ಶ್ರೀ.ಷ.ಬ್ರ ಮರಿಬಸವಲಿಂಗ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಅಡವಿ ಅಮರೇಶ್ವರ ಸುವರ್ಣಗಿರಿ ಮಠದ ಶ್ರೀ ತೋಂಟಾದರ್ಯ ಮಹಾಸ್ವಾಮಿಗಳು, ಕಲ್ಲೂರು ಮಠದ ಶಂಭುಲಿಂಗ ಮಹಾಸ್ವಾಮಿಗಳು, ಮುಂಡರಗಿ ಮುದುಕಣ್ಣ ತಾತಾ ನವರು ಆರ್ಶಿವಚನ ನೀಡಿದರು.

ಮಾಜಿ ಸಂಸದ ಬಿ.ವಿ.ನಾಯಕ ಅವರ 59 ನೇ. ಹುಟ್ಟು ಹಬ್ಬದ ಅಂಗವಾಗಿ ಬಿ.ವಿ.ನಾಯಕ ರವರನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿವಿಧ ಸಮುದಾಯಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು. ಪಟ್ಟಣದ ಆಶ್ವನಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಯಿತು. ದೇವದುರ್ಗ ರಕ್ತನಿಧಿ ಕೇಂದ್ರದಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಪಟ್ಟಣದ ನೆರಳು ಆನಾಥಶ್ರಮ, ಶ್ರೀ ಚನ್ನಬಸವೇಶ್ವರ ಅಂಧಮಕ್ಕಳ ಶಾಲೆ ಹಾಗೂ ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹಾಲು ಹಣ್ಣು ವಿತರಣೆ ಮಾಡಲಾಯಿತು.
ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಮಾನ್ವಿ ಮಂಡಲ ಬಿಜೆಪಿ ಅಧ್ಯಕ್ಷರಾದ ವೀರಭದ್ರಗೌಡ ಭೋಗವತಿ, ಕೆ.ನಾಗಲಿಂಗಸ್ವಾಮಿ, ಶರಣಪ್ಪನಕ್ಕುಂದಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ದೋರೆಬಾಬು, ಕೆ.ನಾಗಕಲಿಂಗಸ್ವಾಮಿ, ಹನುಮೇಶನಾಯಕ ಸಾದಪುರ್, ಮಲ್ಲಿಕಾರ್ಜುನಗೌಡ ಸಂಗಪುರ್, ನರಸಿಂಹನಾಯಕ, ವಿರೇಶನಾಯಕ ಬೆಟ್ಟದೂರು, ರವಿಕುಮಾರ ಅಲ್ದಾಳ್, ವೀರನಗೌಡ ವಕೀಲರು, ನಾಗರಾಜ ಜಲ್ಲಿ, ಶರಣಪ್ಪಗೌಡ ಸುರೇಶಗೌಡ, ಶರಣಬಸವನಾಯಕ, ಜಯಪ್ಪನಾಯಕ, ಶಿವಲಿಂಗಯ್ಯಸ್ವಾಮಿ, ಶಿವಕುಮಾರಸ್ವಾಮಿ, ಮಂಜುನಾಥ ನಾಯಕ, ಅಯ್ಯಪ್ಪ ನಾಯಕ ಮ್ಯಾಕಲ್, ಅಮರೇಶ ನಾಯಕ ಜಾನೇಕಲ್, ದುರುಗಪ್ಪ ತಡಕಲ್ ಜಗದೀಶ ಓತ್ತೂರು, ಶರಣಯ್ಯಸ್ವಾಮಿ, ಜಯರಾಜ್, ರಾಹುಲ್, ಗುರುಗೌಡ ಕಣ್ಣೂರು. ವಿಜಯ ಸುಂಕೇಶ್ವರ, ನವೀನ್ ಕುಮಾರ, ಭೀಮಣ್ಣ ಹರವಿ,ಕುಮಾರಸ್ವಾಮಿ, ಚಂದ್ರುನಾಯಕ ಸೇರಿದಂತೆ ಇನ್ನಿತರರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

