ಪಟ್ಟಣ ಪಂಚಾಯತಿ ಕಾರ್ಯಾಲಯ ನರೇಗಲ್. -: ಸಾರ್ವಜನಿಕ ಪ್ರಕಟಣೆ:-

ಯಾವತ್ತು ನರೇಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರಿಗೆ ಈ ಪ್ರಕಟಣೆ ಮೂಲಕ ತಿಳಿಯ ಪಡಿಸುವುದೆನೆಂದರೆ ನರೇಗಲ್ ಪಟ್ಟಣದಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದ ರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆ ಉಂಟಾಗುತ್ತಿದ್ದು. 1964 (CONSTRUCTION AND DEMOLITION WASTE MANAGEMENT RULES 2016) ರೀತ್ಯಾ ದಂಡಕ್ಕೆ ಅರ್ಹವಾದ ಕೃತ್ಯವಾಗಿರುತ್ತದೆ. ಅದರಿಂದ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ ಎಸೆಯದೆ/ಹಾಕದೆ ತಾತ್ಕಾಲಿಕವಾಗಿ ನರೇಗಲ್ ಪಟ್ಟಣ ಪಂಚಾಯತಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಾಗವನ್ನು ನಿಗಧಿ ಪಡಿಸಿದ್ದು, ನಿಗದಿತ ಶುಲ್ಕ ಪಾವತಿಸಿ ವಾಹನವನ್ನು ಅಗತ್ಯವಿದ್ದಲ್ಲಿ ಪಡೆಯಬಹುದು ಅಥವಾ ಪುರಸಭೆಯಲ್ಲಿ ನೋಂದಾಯಿಸಿ ತಮ್ಮ ಸ್ವಂತ ವೆಚ್ಚದಲ್ಲಿ ಖಾಸಗಿ ವಾಹನವನ್ನು ಉಪಯೋಗಿಸಿ ಕೊಂಡು ನಿಗಧಿತ ಸ್ಥಳದಲ್ಲಿ ವಿಲೇವಾರಿ ಮಾಡುವುದು. ಸದರಿ ಆದೇಶವನ್ನು ಉಲ್ಲಂಘಿಸಿ ಪಟ್ಟಣ ವ್ಯಾಪ್ತಿಯಲ್ಲಿಯ ಸಾರ್ವಜನಿಕ ಸ್ಥಳ ಅಥವಾ ರಸ್ತೆಗಳಲ್ಲಿ ಹಾಕಿದಲ್ಲಿ ಪುರಸಭೆ ಬೈಲಾ ರೀತ್ಯಾ ರೂ. 1000/- ವರೆಗೆ ದಂಡ ವಿಧಿಸಲಾಗುವುದು ಹಾಗೂ ಸೂಕ್ತ ಕಾನೂನು ಅಡಿ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತಿಯ ಆರೋಗ್ಯ ಶಾಖೆಯಲ್ಲಿ ಪಡೆಯ ಬಹುದಾಗಿದೆ.
“ಪಟ್ಟಣವನ್ನು ಸ್ವಚ್ಛವಾಗಿಡಲು ಹಾಗೂ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕಾಗಿ ಈ ಮೂಲಕ ಕೋರಿದೆ”