ಎಂ.ಸಿ.ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ರಾಮೇಗೌಡ ಆಯ್ಕೆ.
ತರೀಕೆರೆ ಆಗಷ್ಟ. 4

ನನಗೆ ಎರಡು ಜನ ಶಾಸಕರ ಬೆಂಬಲ ದೊರಕ್ಕಿದ್ದು ಎರಡು ಜನ ಶಾಸಕರ ಸಹಕಾರದಿಂದ ಎಂ ಸಿ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ನೂತನವಾಗಿ ಆಯ್ಕೆಯಾದ ಎನ್ ರಾಮೇಗೌಡರು ಹೇಳಿದರು. ಅವರು ಇಂದು ನಡೆದ ಎಂ ಸಿ ಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಂಟು ಮತಗಳ ಅಂತರದಿಂದ ಜಯಗಳಿಸಿದ ನಂತರ ಸಾರ್ವಜನಿಕರನ್ನು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ತರೀಕೆರೆ ಶಾಸಕರಾದ ಜಿ ಎಚ್ ಶ್ರೀನಿವಾಸ್ ರವರಿಂದ ಪಂಚಾಯಿತಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸಗಳೊಂದಿಗೆ ಅರ್ಧಕ್ಕೆ ನಿಂತಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಪೂರ್ಣಗೊಳಿಸಿ,ಎಲ್ಲಾ ಸದಸ್ಯರನ್ನು ಸಹ ವಿಶ್ವಾಸದಿಂದ ಎಲ್ಲಾ ಗ್ರಾಮಗಳಿಗೂ ಯಾವುದೇ ತಾರತಮ್ಯ ಮಾಡದೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಊರಿನ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಜಿಎಚ್ ಶ್ರೀನಿವಾಸ್ ರವರ ಪತ್ನಿ ವಾಣಿ ಶ್ರೀನಿವಾಸರವರು ಅಧ್ಯಕ್ಷರಾದ ರಾಮೇಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಲುಮೇಲು ರವರಿಗೆ ಅಭಿನಂದಿಸಿ ಗ್ರಾಮದ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸ ಗಳಿಸಿ ಉತ್ತಮ ಕೆಲಸ ಮಾಡಿ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು. ಭದ್ರಾವತಿ ಶಾಸಕರಾದ ಬಿಕೆ ಸಂಗಮೇಶ್ವರವರ ಸಹೋದರ ಎಂ ಸಿ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ ಕೆ ಶಿವಕುಮಾರ್ ರವರು ಮಾತನಾಡಿ ರಾಮೇಗೌಡರು ಮತ್ತು ಅಲುಮೇಲಮ್ಮ ರವರಿಗೆ ಅಭಿನಂದಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತಂದು ಹೊಸ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಎಲ್ಲಾ ಸದಸ್ಯರ ಜನರ ಪ್ರೀತಿ ವಿಶ್ವಾಸ ಗಳಿಸಿರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಈ ಧನಂಜಯ, ಮುಹಿದ್ದಿನ್, ಅಣ್ಣೇಗೌಡ,ಗ್ರಾಮದ ಮುಖಂಡರಾದ ಡಿಎಸ್ ಕುಮಾರಸ್ವಾಮಿ,ಎಮ್ ಎಚ್ ರಾಮಚಂದ್ರ, ಸುಬ್ಬು, ಪ್ರಶಾಂತ್, ಎಂಪಿ ವಿಶ್ವನಾಥ್,ಎಚ್ ಬಿ ನಾಗೇಶ್, ಏಳುಮಲೈ, ದೇವೇಗೌಡ, ಮಹೇಶ, ಹಾಗೂ ಪಂಚಾಯಿತಿ ಸದಸ್ಯರಾದ ಪ್ರೇಮಲತಾ, ರಂಗಸ್ವಾಮಿ,ಎಂ ರಾಜಪ್ಪ, ಪ್ರದೀಪ್, ಶೋಭಾ, ಸಿದ್ದರಾಮಯ್ಯ ಉಪಸ್ಥಿತರಿದ್ದು, ಚುನಾವಣಾ ಅಧಿಕಾರಿಯಾದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವರಾಜ್ ಕುಮಾರ್, ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು, ಪಿಡಿಒ ರಮೇಶ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ