ಯಾರೇ ಅಧಿಕಾರಕ್ಕೆ ಬಂದರೂ ಯಾರಿಂದಲೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ – ಎಂ.ಎಸ್.ಎಸ್.ಕೆ ಡಾ. ಕೆ.ಎಂ.ಸಂದೇಶ್.

ಹಿರೇಹಳ್ಳಿ ಜೂನ್.11

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಹಿರೇಹಳ್ಳಿ ಗ್ರಾಮದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇಯಜಯಂತಿ ಹಾಗೂ ಬಾಬು ಜಗಜೀವನ್ ರಾಂ ರವರ 117 ನೇ ಜಯಂತಿ ಹಾಗೂ ಪ್ರೊ.ಬಿ. ಕೃಷ್ಣಪ್ಪ ರವರ ಜಯಂತಿ ಆಚರಣೆಯನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು, ಈ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲೆಯ ದಲಿತರ ಫೈರ್ ಬ್ರಾಂಡ್ ಎಂದೇ ಖ್ಯಾತಿ ಗಳಿಸಿರುವ ಎ.ಎಸ್ ಎಸ್.ಕೆ. ಸಂಸ್ಥಾಪಕ ರಾಜ್ಯಾಧ್ಯಕ್ಷರು, ದಲಿತರ ಆಶಾ ಕಿರಣ, ಬಡವರ ಬಂಧು, ದಲಿತರ ಕಣ್ಮಣಿ, ನೊಂದ ಜೀವಗಳ ಬೆಳಕು, ರಾಜ್ಯ ದಲಿತ ಹೋರಾಟಗಾರರು ಹಾಗೂ ದ ರೊಲರ್ಸ್ ಚಲನ ಚಿತ್ರದ ನಾಯಕ ನಟರಾದ ಡಾ.ಕೆ.ಎಂ.ಸಂದೇಶ್ ರವರು ಈ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಉತ್ಸವದಲ್ಲಿ ಭಾಗಿಯಾಗಿ ರಾಜ್ಯದಲ್ಲಿ ಸಂವಿಧಾನ ಬದಲಾವಣೆಯ ಚರ್ಚೆ ತುಂಬಾ ನಡೆಯುತ್ತಿದೆ ಅಷ್ಟು ಸುಲಭವಾಗಿ ಯಾರೂ ಕೂಡ ಅದರ ಒಂದು ತುದಿಯನ್ನು ಮುಟ್ಟಲು ಸಾಧ್ಯವಿಲ್ಲ ಹಾಗಾಗಿ ಬಾಬಾ ಸಾಹೇಬರು ನಮಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಎಂಬ ಆಯುಧವನ್ನು ನಮಗೆ ಕೊಟ್ಟು ಹೋಗಿದ್ದಾರೆ ಅದನ್ನು ನಾವು ಯಾವ ಕಾರಣಕ್ಕೂ ಆಸೆ ಆಕಾಂಕ್ಷೆ, ಆಮಿಷಗಳಿಗೆ ಬಲಿಯಾಗದೆ ಮತದಾನದ ಮಹತ್ವ ತಿಳಿದು ನಾವು ಒಗ್ಗಟ್ಟಾಗಿ ಮತ ಚಲಾಯಿಸಿದ್ದಲ್ಲಿ ನಾವು ಆ ಯುದ್ದಲ್ಲಿ ಗೆಲ್ಲುತ್ತೇವೆ.

ಈ ನಮ್ಮ ಭಾರತ ದೇಶದಲ್ಲಿ ದಲಿತ ಸಮುದಾಯವು ಎಲ್ಲಾ ಸಮುದಾಯಗಳಿಗೆ ಹೋಲಿಸಿದರೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಆದರೂ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ ಯಾಕೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ ಹಾಗಾಗಿ ನಮ್ಮ ಎಲ್ಲಾ ದಲಿತ ಸಮುದಾಯದ ಎಲ್ಲಾ ಹಿರಿಯರಿಗೆ ಮತ್ತು ಯುವ ಜನತೆಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬ ಪ್ರಜ್ಞಾವಂತರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.” ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ” ಎಂಬ ಅಂಬೇಡ್ಕರ್ ರವರ ಮಾತು ನಾವೆಲ್ಲರೂ ಇಲ್ಲಿ ಸ್ಮರಿಸಿ ಕೊಳ್ಳಬೇಕು ಎಂದು ಹೇಳಿದರು,ಈ ಸಂದರ್ಭದಲ್ಲಿ ಇನ್ನೂ ಮುಂತಾದ ಅನೇಕ ಗಣ್ಯರು ಸಮಾರಂಭದಲ್ಲಿ ಅವರ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ಮಹಾನಾಯಕ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಯುವಕ ಸಂಘ, ಕೋಡಿಹಳ್ಳಿ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಹಾಗೂ ಹಿರೇಹಳ್ಳಿ ಗ್ರಾಮದ ಅಂಬೇಡ್ಕರ್ ಯುವಕ ಸಂಘದ, ಎಲ್ಲಾ ಪದಾಧಿಕಾರಿಗಳು ಸದಸ್ಯರಿಂದ ಡಾ.ಕೆ.ಎಂ ಸಂದೇಶ್ ರವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು, ಅಲ್ಲದೆ 2023-24 ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಆದ ಶ್ರೀಯುತ ಶಿವಲಿಂಗಪ್ಪ.ಜಿ ಉಪಾಧ್ಯಕ್ಷರಾದ ಸಿದ್ದೇಶ್.ಎಸ್ ಕಾರ್ಯದರ್ಶಿಯಾದ ಮಲ್ಲೇಶ್. ಟಿ ಖಜಾಂಚಿಯಾದ ಮಹೇಂದ್ರ.ಏಚ್.ಎನ್, ದಯಾನಂದ, ನಾಗರಾಜ್ ಫೋಟೋ, ನಿವೃತ್ತ ತಹಶೀಲ್ದಾರ್ ಶ್ರೀ ಮಲ್ಲಿಕಾರ್ಜುನ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಶ್ರೀಯುತ ರಾಜಣ್ಣ.ಜಿ ಮತ್ತು ಉಪದ್ಯಾಕ್ಷರು ಆದ ರವಿ. ಓ , ದುರುಗೇಶ್, ಇತರರು ಉಪಸ್ಥಿತರಿದ್ದರು. ಶ್ರೀ ಬಿ.ಡಿ ನಿಂಗರಾಜು ಶ್ರೀ.ಸಿ.ಆರ್ ನವೀನ್ ಮತ್ತು ಸಂಗಡಿಗರು ಕ್ರಾಂತಿ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಹೆಚ್.ಎನ್ ಮಹೇಂದ್ರ ನಿರೂಪಿಸಿದರು, ಶ್ರೀ.ಎಂ ದುರುಗೇಶ್ ಸ್ವಾಗತಿಸಿದರು, ಟಿ.ಮಲ್ಲೇಶಪ್ಪ ವಂದಿಸಿದರು.ದಲಿತ ಸಮುದಾಯದ ಯಜಮಾನರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಮಹಿಳೆಯರು, ಯುವಕರು ಡಿ.ಜೆ. ಸೌಂಡ್ ಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು ಈ ಕಾರ್ಯಕ್ರಮವು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ವರದಿ:ಕೋಡಿಹಳ್ಳಿ ಶಿವಮೂರ್ತಿ.ಟಿ. ಚಿತ್ರದುರ್ಗ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button