ಮತದಾನ ಮಾಡಿದೋನೆ ಮಹಾಶೂರ
ಕೂಡ್ಲಿಗಿ ಏ.13

ವಿಜಯನಗರ ಜಿಲ್ಲಾ ಕೂಡ್ಲಿಗಿ ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗದಿಂದ ಬೈಕ್ ರ್ಯಾಲಿಯ ಮೂಲಕ ಸ್ವೀಪ್ ಸಮಿತಿ, ತಾಲೂಕು ಆಡಳಿತ ಕೂಡ್ಲಿಗಿ, ತಾಲೂಕು ಚುನಾವಣಾಧಿಕಾರಿಗಳು ಕೂಡ್ಲಿಗಿ ಇವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ” ಮತದಾನದ ಜಾಗೃತಿ” ಗಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಕೂಡ್ಲಿಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾರ್ವಜನಿಕರಿಗೆ ಮತದಾನ ಮಾಡುವವನು ಮಹಾಶೂರ ಎಂಬ ಮುಖ್ಯ ಪ್ರಕಟಣೆಯೊಂದಿಗೆ ತಾಲೂಕಿನ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸುವುದರ ಮೂಲಕ ರಾಷ್ಟ್ರೀಯ ಹುತಾತ್ಮರ ಮಹಾತ್ಮ ಗಾಂಧಿ ಚಿತಾಬಸ್ಮದ ಹತ್ತಿರ ಬೈಕ್ ರ್ಯಾಲಿ ಮುಕ್ತಾಯಗೊಳಿಸಲಾಯಿತು.

ಪಟ್ಟಣದಲ್ಲಿ ಸ್ಥಳೀಯ ವಾಸ ಇರುವವರು & ಸುತ್ತಮುತ್ತಲಿನ ಗ್ರಾಮದ ಹಾಗೂ ಎಲ್ಲಾ ಯುವಕರು ನೋಂದಾಣಿ ಹಾಗೂ ಜಾಗೃತಿ ಅಭಿಯಾನಾದೊಂದಿಗೆ ಮತದಾನವನ್ನು ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್ ರವರು ಕಳೆದ ಚುನಾವಣೆಯಲ್ಲಿ ತಾಲೂಕಿನ ಮತದಾನ ಪ್ರಮಾಣ ಶೇಖಡ 72% ಗಿಂತ ಕಡಿಮೆ ಇದ್ದು ಈ ಬಾರಿ 100% ರಷ್ಟು ಮತದಾನದ ಆಗುವಂತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು, ಹಾಗೂ ಸ್ವಿಫ್ ಸಮಿತಿಯ ಚುನಾವಣಾ ಅಧಿಕಾರಿಗಳ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶಿವರಾಜ್ ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ,ಪ್ರದೀಪ್ ಬಿಸಿಎಂ ಇಲಾಖೆಯ ಪಂಪಾಪತಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ್ ನಾಯ್ಕ್ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ನಾಗನಗೌಡ್ರು ಹಾಗೂ ಫ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು,ಸಿದ್ಧಾರಾಧ್ಯ ಹಾಗೂ ಹಾತ್ತಾರು ಸಿಬಂದಿ ವರ್ಗದವರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ