ಕಾರ್ಖಾನೆ ಯಿಂದ ರೈತರಿಗಾಗುವ ಸಮಸ್ಯೆ ಬಗೆ ಹರಿಸುವಂತೆ – ಸಿ.ಇ.ಓ ಅವರಿಗೆ ಮನವಿ.
ನಾದ ಕೆ.ಡಿ ಡಿ.18

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮ ವ್ಯಾಪ್ತಿಗೆ ಸಂಬಂಧಿಸಿದ ಜಮಖಂಡಿ ಸುಗರ್ ಕಾರ್ಖಾನೆಯ ಅನೇಕ ಸಮಸ್ಯೆಗಳಿಂದ ಬೇಸತ್ತು ರೈತರು ಕಾರ್ಖಾನೆ ಪ್ರಾರಂಭದ ತಳಹದಿ ಯಿಂದಲೂ ಸುತ್ತ ಮುತ್ತಲಿನ ರೈತರ ಜಮೀನುಗಳ ಬೆಳೆ, ಆರೋಗ್ಯ, ಸಾಕು ಪ್ರಾಣಿಗಳ ಮೇಲೆ ಕಾರ್ಖಾನೆ ಧೂಳಿನಿಂದಾಗಿ, ರಸ್ತೆಗಳ ಅವ್ಯವಸ್ಥೆಗೆ ಅನೇಕ ಸಮಸ್ಯೆಗಳಿಂದ ನೊಂದ ರೈತರು ಸಂಬಂಧಿಸಿದ ಕಾರ್ಖಾನೆಯ ಅಧಿಕಾರಿಗಳ ಗಮನಕ್ಕೂ ತಂದರು ಇನ್ನೂವರೆಗೆ ಯಾವುದೇ ಸಮಸ್ಯ ಬಗೆ ಹರಿದಿರುವುದಿಲ್ಲ ಇಂತಹ ದುಷ್ಪರಿಣಾಮ ಕುರಿತು ಸರ್ಕಾರ ಈ ಕಾರ್ಖಾನೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು.

ರೈತರಿ ಗಾಗುವ ಸಮಸ್ಯೆಗಳನ್ನು ಬಗೆ ಹರಿಸಬೇಕು. ಕಾರ್ಖಾನೆಗೆ ಸಂಬಂಧಿಸಿದ ರಸ್ತೆಗಳ ಕುರಿತು ಮಾಲೀಕರಿಗೆ ನೋಟಿಸ್ ಜಾರಿಗೊಳಿಸ ಬೇಕು. ಕಾರ್ಮಿಕರಿಗೆ ಸಿಗುವ ಸರ್ಕಾರದ ಕಾಯ್ದೆ ಪ್ರಕಾರ ಕನಿಷ್ಠ ವೇತನ ಪ್ರತಿಯೊಬ್ಬರಿಗು ಸಿಗುವಂತಾಗ ಬೇಕು. ಶಬ್ದ ಮಾಲಿನ್ಯ ತಡೆಯುವ ವ್ಯವಸ್ಥೆ ಮಾಡಬೇಕು. ಸುತ್ತ-ಮುತ್ತಲೂ ಗ್ರಾಮಗಳ ಮೇಲೆ ಚಿಕ್ಕ-ಚಿಕ್ಕ ಧೂಳು ಬರದಂತೆ ಎಚ್ಚರಿಕೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಬೇಕೆಂದು.

ಗ್ರಾಮಸ್ಥರು ಇಂದು ಕಾರ್ಖಾನೆಯ ಸಿ.ಇ.ಓ ಅವರಿಗೆ ಮನವಿ ಸಲ್ಲಿಸಿದರು. ಒಂದು ವೇಳೆ ಸಮಸ್ಯೆ ಬೇಗನೆ ಬಗೆ ಹರಿಯದಿದ್ದರೆ ಕಾರ್ಖಾನೆಯ ಎದುರು ಅನಿರ್ದಿಷ್ಟಾವಧಿ ವರೆಗೆ ಧರಣಿ ಸತ್ಯಾಗ್ರಹ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಕೆಯ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆರ್.ಪಿ.ಐ (ಅಂಬೇಡ್ಕರ್) ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗಳಾದ ಶಿವಾನಂದ ಹರಿಜನ. ಪ್ರಗತಿಪರ ರೈತರಾದ ಶ್ರೀ ಜಡದಾರಿ ಪಾಟೀಲ. ಸುರೇಶ ಹಿರೇಮಠ. ಪುಂಡಲಿಕ ಕೆರುಟಗಿ. ಸಂತೋಷ .ಡಂಗಿ. ಕೇದಾರ ಬಿರಾದಾರ. ನಿಂಗಪ್ಪ.ಡಂಗಿ. ಕನ್ನಗೊಂಡ. ಡಂಗಿ. ಸಿದ್ದು ಕೆರುಟಗಿ. ಯಲ್ಲಪ್ಪ.ಕೆರುಟಗಿ. ಗಂಗಪ್ಪ. ಕೆರುಟಗಿ. ಇತರರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ. ಹರಿಜನ.ಇಂಡಿ.ವಿಜಯಪುರ