ಕಂದಾಯ ಇಲಾಖೆಯ ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳು ಈಡೇರಿಸುವಂತೆ ದಿ.11-12-2023 ಬೆಳಗಾವಿ ಅಧಿವೇಶನದಲ್ಲಿ ಅನುಮತಿಗೆ ಆಗ್ರಹಿಸಿ.
ಕೊಟ್ಟೂರು ಡಿಸೆಂಬರ್.2

ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಕೇಂದ್ರ ಸಂಘ ಬೆಂಗಳೂರು ಇವರ ನಿರ್ದೇಶನದಂತೆ ದಿನಾಂಕ 11.12.2023 ಬೆಳಗಾಂ ಅಧಿವೇಶನದ ಸಂದರ್ಭದಲ್ಲಿ ಕಿತ್ತೂರಾಣಿ ಚೆನ್ನಮ್ಮ ಅರಮನೆ ಮೈದಾನದಿಂದ ವಿಧಾನ ಸೌಧದ ವರೆಗೆ ಪಾದಯಾತ್ರೆ ಮೂಲಕ ರಾಜ್ಯ ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳು ಮತ್ತು ಹಕ್ಕೊತ್ತಾಯಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಸರ್ಕಾರದ ಗಮನವನ್ನು ಸೆಳೆದು ನಮ್ಮ ಸೇವೆಯನ್ನು ಡಿ ಗ್ರೂಪ್ ಎಂದು ಪರಿಗಣಿಸುವವರೆಗೂ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿರುತ್ತೇವೆ.

ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ತಹಶೀಲ್ದಾರರು ಕೊಟ್ಟೂರು ಇವರಿಗೆ ಮನವಿ ಪತ್ರವನ್ನು ಕೊಟ್ಟು ಅನುಮತಿ ಕೋರಲಾಗಿದೆ🙏🏻ಈ ಸಂದರ್ಭದಲ್ಲಿಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಕುಮಾರ ಎಂ.ತಾಲೂಕು ಅಧ್ಯಕ್ಷರು. ಪಕ್ಕಿರಪ್ಪ ಉಪಾಧ್ಯಕ್ಷ T ಹನುಮಂತಪ್ಪ. ಗೌರವಾಧ್ಯಕ್ಷರು ಭರಮಪ್ಪ. ತಾಲೂಕು ಖಜಾಂಚಿ ಶಿವರಾಜ್ ಹೆಚ್ ಪ್ರಧಾನ ಕಾರ್ಯದರ್ಶಿ ಚಿದಾನಂದಹಾಗೂ ಸದಸ್ಯರಾದ ಸ್ವಾಮಿ ಭೀಮ ಸೇನಾ ಹುಲಿಗೇಶ ವೆಂಕಟೇಶ B.ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು