ಚುನಾವಣಾ ಅಧಿಕಾರಿಗಳ ಮೌಖಿಕ ಆದೇಶ – ಪಿ.ಡಿ.ಓ ಗಳ ಪ್ರಾಣ ಸಂಕಟ.
ಕೊಟ್ಟೂರು ಮೇ.06

ಮತಗಟ್ಟೆಗಳಿಗೆ ಶಾಮಿಯಾನ ಕುರ್ಚಿ ಫ್ಯಾನ್ ಮತ್ತಿತರ ಅಗತ್ಯ ಸೌಕರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಮತಗಟ್ಟೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಚುನಾವಣೆ ಅಧಿಕಾರಿಗಳ ಒತ್ತಡ, ಮೌಖಿಕ ಆದೇಶ ನೀಡುವರಂತೆ ಏಕೆಂದರೆ ಮತಗಟ್ಟೆಗಳಲ್ಲಿ ಯಾವುದೇ ರೀತಿಯ ತೊಂದರೆಯಾದರೆ ಚುನಾವಣೆ ಅಧಿಕಾರಿಗಳು ಪಿಡಿಓ ಗಳ ಮೇಲೆನೆ ದರ್ಪ ನಡೆಸುವವರಂತೆ ಅದಲ್ಲದೆ ಸ್ವಲ್ಪ ವ್ಯತ್ಯಾಸವಾದರೂ ಪಿಡಿಓ ಗಳಿಗೆ ಅಮಾನತು ನೋಟಿಸ್ ನೀಡುವರಂತೆ ಮತಗಟ್ಟೆಗಳಿಗೆ ಬಿಡುಗಡೆ ಆದ ಹಣ ಎಲ್ಲಿ ಹೋಗುವುದು ಎಂಬುದು ನಿಖರವಾದ ಮಾಹಿತಿ ಸಿಗುತ್ತಿಲ್ಲವಂತೆ. ಹೀಗಾಗಿ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿರುವುದಂತೆ.ಆದರೆ ಗ್ರಾಮ ಪಂಚಾಯತಿಗಳಲ್ಲಿ ಪಿಡಿಓ ಗಳು ಯಾವುದೇ ವೆಚ್ಚ ಬರಿಸಬೇಕಾದರೆ ಗ್ರಾಪಂ ಸಾಮಾನ್ಯ ಸಭೆ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಬೇಕು. ಅಲ್ಲದೆ ಯಾವುದೇ ಹಣಕಾಸು ವ್ಯವಹಾರ ಮಾಡಿದರು ಅಧ್ಯಕ್ಷರು ಮತ್ತು ಪಿಡಿಓ ಜಂಟಿಯಾಗಿ ಸಹಿ ಮಾಡಬೇಕಾಗುತ್ತದೆ.

ಅಧ್ಯಕ್ಷರು/ ಸಮಿತಿ ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕಾಗುತ್ತದೆ. ಆದರೆ ಚುನಾವಣಾ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಸಭೆ ಮಾಡಲು ಅವಕಾಶ ಇಲ್ಲದಿರುವುದರಿಂದ ಖರ್ಚು ಮಾಡುವ ಹಣಕ್ಕೆ ಅನುಮೋದನೆ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಘಟನೋತ್ತರ ಮಂಜೂರಾತಿ ನೀಡಲು ಗ್ರಾಪಂ ಆಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸುತ್ತವೆ. ಈ ಎಲ್ಲಾ ಜಂಜಾಟಗಳ ನಡುವೆ ಪಿಡಿಓ ಗಳು ಕಿರುಕುಳ ಅನುಭವಿಸಬೇಕಾಗಿದೆ.ಗ್ರಾಮ ಪಂಚಾಯಿತಿಗಳು ಮತಗಟ್ಟೆಗಳಿಗೆ ಅಗತ್ಯ ಸೌಲತ್ತು ಒದಗಿಸಲು ವೆಚ್ಚ ಬಯಸುವಂತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸೃಷ್ಟಿ ಪಡಿಸಿದರು ಜಟಾಪಟಿ ಮಂತ್ರ ನಿಂತಿಲ್ಲ.ಜಿಲ್ಲಾ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಮತ್ತು ತಹಸೀಲ್ದಾರ್ ಗಳು ಪಿಡಿಓ ಗಳಿಗೆ ಮೇಲಿಂದ ಮೇಲೆ ಮೌಖಿಕವಾಗಿ ಸೂಚಿಸುತ್ತಿರುವುದು ಪಿಡಿಓ ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಒಟ್ಟಿನಲ್ಲಿ ಯಾವುದೇ ಚುನಾವಣೆ ಬಂದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಕಿರುಕುಳ ಅನುಭವಿಸುವುದು ಅನಿವಾರ್ಯವಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.