ಸತ್ಯ ಅಹಿಂಸೆಯ ಮಹಾತ್ಮ ಗಾಂಧೀಜಿ…

ಸತ್ಯ ಅಹಿಂಸೆ ಇವರ ಎರಡು ಮೂಲ




ಮಂತ್ರಗಳು
ಗೋಪಾಲಕೃಷ್ಣ ಗೋಖಲೆ ರಾಜಕೀಯ
ಗುರುಗಳು
ಒಟ್ಟಿಗೆ ಸೇರಿಸಿದರು ಹಲವು ಸ್ವಾತಂತ್ರ್ಯದ
ಹೃದಯಗಳು
ಆದರ್ಶವಾದವು ಸತ್ಯಹರಿಶ್ಚಂದ್ರ
ಶ್ರವಣಕುಮಾರ ನಾಟಕಗಳು
ಯೇಸು ಕ್ರಿಸ್ತನಾಗಿ ಕಂಡರೂ ಮೌಂಟ್
ಬ್ಯಾಟನ ದೃಷ್ಟಿಯದಿ
ದೇವರಾಗಿ ಬದುಕಿದರು ಮಾರ್ಟಿನ್ ಲೂಥರ್
ನೋಟದಿ
ಮಹಾತ್ಮರಾಗಿ ಬೆಳಗಿದರು ರವೀಂದ್ರನಾಥರ
ಮನದಿ
ಹತ್ಯೆಯಾದರೂ ಆದರ್ಶವಾದರೂ
ಗೋಡ್ಸೆಯವರ ಪುಸ್ತಕದಿ
ಮಾಡು ಇಲ್ಲವೇ ಮಡಿ ಎಂದ ಮಹಾತ್ಮ
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಹುತಾತ್ಮ
ವಿಶ್ವವೇ ಪೂಜಿಸುವಂತಹ ಮನುಕುಲದ
ಪರಮಾತ್ಮ
ಭಾರತೀಯರ ಹೃದಯದಿ ಎಂದೂ ಮಾಸದ
ಆತ್ಮ
ಅಮೇರಿಕಾದ ಒಂದು ರಾಜ್ಯಕ್ಕೆ ಹೆಸರಾದವರು
ಲಂಡನ್ ನ ಒಂದು ಪ್ರದೇಶದಿ ಪ್ರತಿಮೆಯಾಗಿ
ನಿಂತವರು
ದಕ್ಷಿಣ ಆಫ್ರಿಕಾದ ಒಂದು ರೈಲಿಗೆ
ನಾಮಕರಣವಾದವರು
ವಿಶ್ವಕ್ಕೆ ಮಾದರಿಯಾದ ಭಾರತಕ್ಕೆ
ರಾಷ್ಟ್ರಪಿತರಾದವರು
ನೆನಪಿರಲಿ ಅಣ್ಣಾ ಹಜಾರೆ ಆಧುನಿಕ ಗಾಂಧಿ
ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಗಾಂಧಿ
ಹರ್ಡೇಕರ್ ಮಂಜಪ್ಪ ಕರ್ನಾಟಕದ ಗಾಂಧಿ
ಮಾರ್ಟಿನ್ ಲೂಥರ್ ಅಮೆರಿಕಾದ ಗಾಂಧಿ
ಶ್ರೀ ಮುತ್ತು.ಯ. ವಡ್ಡರ
(ಶಿಕ್ಷಕರು,ಹಿರೇಮಾಗಿ)
ಬಾಗಲಕೋಟ
Mob-9845568484