ಡಿಜಿಟಲ್ ಇಕ್ವಲೈಜರ್ ಸ್ಕಿಲ್ ಬ್ರಿಡ್ಜ್ ಕಾರ್ಯಕ್ರಮದ ಅಡಿಯಲ್ಲಿ – ಶೇರ್ ಔಟ್ ಇವೆಂಟ್ ಆಯೋಜನೆ.
ಕೊಟ್ಟೂರು ಜು.12

ದಿ ಅಮೆರಿಕನ್ ಇಂಡಿಯಾ ಫೌಂಡೇಷನ್ ಟ್ರಸ್ಟ್ ವತಿಯಿಂದ, ಡಿಜಿಟಲ್ ಔಟ್ ಇವೆಂಟ್ ಕಾರ್ಯಕ್ರಮದ ಅಡಿಯಲ್ಲಿ, ಸರಕಾರಿ ಬಾಲಕೀಯರ ಪ್ರೌಢ ಶಾಲೆ ಕೊಟ್ಟುರು ಇವರ ಸಂಯುಕ್ತ ಆಶ್ರಯದಲ್ಲಿ “ಶೇರ್ ಔಟ್ ಇವೆಂಟ್” ಎಂಬ ಕಾರ್ಯಾಗಾರವನ್ನು 11 ಜುಲೈ 2025 ರಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ದಿ ಅಮೆರಿಕನ್ ಇಂಡಿಯಾ ಫೌಂಡೇಷನ್‌ನ ಇವೈ ಸ್ಕಿಲ್ ಬ್ರಿಡ್ಜ್ ಕಾರ್ಯಕ್ರಮವು ವಿಜಯನಗರ ಜಿಲ್ಲೆಯಲ್ಲಿ 2022–23 ನೇ. ಶೈಕ್ಷಣಿಕ ವರ್ಷದಿಂದಲೂ ಕಾರ್ಯ ನಿರ್ವಹಿಸುತ್ತಿದ್ದು. ವಿಜಯನಗರ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹಗರಿಬೋಮ್ಮನಹಳ್ಳಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿನ ಒಟ್ಟು 70 ಸರಕಾರಿ ಪ್ರೌಢ ಶಾಲೆಗಳಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು. ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತೆ, ಲಿಂಗ ಸಮಾನತೆಯ ಅರಿವು, ಸ್ಟೆಮ್ ಕ್ಷೇತ್ರಗಳ ವೃತ್ತಿ ಜ್ಞಾನ, ಭವಿಷ್ಯದ ತಂತ್ರಜ್ಞಾನ, ಕೊಡಿಂಗ್‌ನ ಮೂಲಭೂತ ಪಾಠಗಳು ಮತ್ತು 21 ನೇ. ಶತಮಾನದ ಕೌಶಲ್ಯಗಳ ಕುರಿತ ತರಬೇತಿಯನ್ನು ನೀಡಲಾಗುತ್ತಿದೆ.

ಈ ಕಾರ್ಯಾಗಾರದ ಉದ್ದೇಶವು ವಿದ್ಯಾರ್ಥಿಗಳು ತಮ್ಮ ಕಲಿತ ಕೌಶಲ್ಯಗಳನ್ನು ಮತ್ತು ಸೃಜನಶೀಲ ಕೌಶಲ್ಯಗಳನ್ನು ಚಟುವಟಿಕೆ ಆಧಾರಿತ ಪ್ರದರ್ಶನಗಳ ಮೂಲಕ ತೋರಿಸ ಬೇಕೆಂಬುದಾಗಿದೆ. ವಿದ್ಯಾರ್ಥಿಗಳು ತಮ್ಮ ಕಲಿತ ವಿಷಯಗಳನ್ನು ಜಾಗೃತಿಯಿಂದ ಮತ್ತು ಉತ್ಸಾಹದಿಂದ ಪ್ರಸ್ತುತಪಡಿಸಿದರು. ಈ ಮೂಲಕ ಅವರು ಹೊಂದಿದ ಕೌಶಲ್ಯಗಳ ಅಭಿವೃದ್ದಿಗೆ ಮತ್ತಷ್ಟು ವೇದಿಕೆ ಒದಗಿಸಿತು.ಸ್ಕಿಲ್ ಬ್ರಡ್ಜ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹಣಕಾಸಿನ ಜ್ಞಾನ ಬೆಳೆಸುವಲ್ಲಿ, ಭವಿಷ್ಯದ ತಯಾರಿಗೆ ನೆರವಾಗುವಲ್ಲಿ ಹಾಗೂ ಸೃಜನ ಶೀಲತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಕೆ.ಎಸ್ ಹರೀಶ್ ಮುಖ್ಯ ಗುರುಗಳಾದ ಶ್ರೀ ಎಸ್.ಎ ಬಸವರಾಜ, ಶಿಕ್ಷಕರಾದ ಕೊಟ್ರಸ್ವಾಮಿ, ಮಹಾಂತೇಶ್, ಸುರೇಶ್, ಗೋಣಿಬಸಪ್ಪ, ಬಸಮ್ಮ, ಲತಾ, ಅನಿತ, ಕೊಟ್ರಮ್ಮ, ಕೊಟ್ರಸ್ವಾಮಿ, ಮತ್ತು ಎಐಎಫ್ ಫೌಂಡೇಷನ್ ನ ಜ್ಞಾನೇಶ್ವರ, ಸ್ನೇಹ, ಕಮಲ ರವರು ಭಾಗಿಯಾಗಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

