ಹೊಲಗಳಿಗೆ ಹೋಗಲು ದಾರಿ ಅನುವು ಮಾಡಿ ಕೊಡಲು ಎಸಿಯವರಿಗೆ ಮನವಿ.
ಇಂಡಿ ಡಿಸೆಂಬರ್.8

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಡಿಗ್ಗಿ ಭಾವಿಯ ಹತ್ತಿರದ ಹೊಲಗಳಿಗೆ ಹೋಗಲು ಅನುವು ಮಾಡಿ ಕೊಡಲು ಅಲ್ಲಿಯ ನಿವಾಸಿಗಳು ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.ಡಿಗ್ಗಿಬಾವಿಯಿಂದ ಕಳೆದ ಅನೇಕ ವರ್ಷಗಳಿಂದ ರಸ್ತೆ ಇತ್ತು. ಮತ್ತು ಸಾರ್ವಜನಿಕರು ಅಲ್ಲಿಂದಲೇ ಹಾಯ್ದು ತಮ್ಮ ಹೊಲಗಳಿಗೆ ಹೋಗುತ್ತಿದ್ದರು.ನಿನ್ನೆಯ ದಿನ ಹೊಲದ ಮಾಲೀಕರು ತಮ್ಮ ಹೊಲದಲ್ಲಿ ಹಾಯಬಾರದೆಂದು ತಕರಾರು ತೆಗೆದು ದಾರಿಯನ್ನು ಹಾಳು ಮಾಡಿದ್ದಾರೆ. ಮತ್ತು ಅಲ್ಲಿಂದ ಯಾರು ಹೋಗದಂತೆ ತಡೆ ಮಾಡಿದ್ದಾರೆ. ಹೀಗಾಗಿ ಮುಂದಿನ ಹೊಲ ಇರುವವರಿಗೆ ಅತೀವ ತೊಂದರೆ ಯಾಗುತ್ತದೆ ಎಂದು ಅಶೋಕ ಶಿವೂರ, ದೀಪಲು ರಾಠೋಡ, ಸುರೇಶ ಕರಂಡೆ, ಲಾಲು ರಾಠೋಡ, ಸಿದ್ದು ಕರಂಡೆ, ಸಂಜಯ ಉಪ್ಪಾರ,ಬಸವರಾಜ ಉಪ್ಪಾರ,ಜಟ್ಟೆಪ್ಪ ಮುಧೋಳ,ಸಿದ್ರಾಮ ನರಳೆ, ಪಾಂಡು ಚವ್ಹಾಣ,ರೂಪು ರಾಠೋಡ ಮತ್ತಿತರರು ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ