ಹೊಸಹಳ್ಳಿ ನಾಡ ಕಚೇರಿಯಲ್ಲಿ ಅಂಬೇಡ್ಕರ್ ಅವರ 67.ನೇ ಮಹಾಪರಿ ನಿರ್ವಾಣ ದಿನಾಚರಣೆ.
ಕಾನಾ ಹೊಸಹಳ್ಳಿ ಡಿಸೆಂಬರ್.8

ಇಲ್ಲಿನ ನಾಡ ಕಚೇರಿಯಲ್ಲಿ ಡಾ ಬಿ.ಆರ್. ಅಂಬೇಡ್ಕರ್ ಅವರ 67.ನೇ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಪುಷ್ಪ, ನಮನ, ಪೂಜೆ ಸಲ್ಲಿಸಿದರು. ಈ ವೇಳೆ ಕಂದಾಯ ಪರವೀಕ್ಷಕ ಮುರಳಿ ಕೃಷ್ಣ ಮಾತನಾಡಿ ಈ ದಿನದಂದು ಭಾರತ ದೇಶಕ್ಕೆ ಬಹುದೊಡ್ಡ ಸಂವಿಧಾನದ ಕೊಡುಗೆ ನೀಡಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ ರವರ ಪುಣ್ಯತಿಥಿ ದಿನ. ಅವರ 67.ನೇ ಮಹಾಪರಿ ನಿರ್ವಾಣ ದಿನದ ಪುಣ್ಯ ಸ್ಮರಣೆ ನಾವೆಲ್ಲ ಮಾಡಬೇಕಿದೆ. ಅಂಬೇಡ್ಕರ್ ರವರನ್ನು ಕೇವಲ ಅವರ ಜನ್ಮ ದಿನದಂದು ಮಾತ್ರ ನೆನೆಯದೇ ಅವರ ಪುಣ್ಯ ತಿಥಿ ದಿನವು ಸಹ ನೆನೆದು, ಅವರನ್ನು ಸ್ಮರಿಸಲಾಗುತ್ತದೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ, ಇತರೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳು ಎಂದು ಸಹ ಮಾಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಚೆನ್ನಬಸಯ್ಯ, ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜಾರಿ, ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರಪ್ಪ, ನಾಡ ಕಚೇರಿ ಆಪರೇಟರ್ಗಳಾದ ಮಂಜುನಾಥ್, ಸಿದ್ದೇಶ್. ಗ್ರಾಮದ ಮುಖಂಡರು ನಡಲು ಮನೆ ತಿಪ್ಪೇಸ್ವಾಮಿ, ಹೇಮಂತ್, ಮಾರಪ್ಪ, ಎಂ ಬಸವರಾಜ್, ಕೆಂಚನಹಳ್ಳಿ ಓಬಳೇಶ್, ಬಣಕಲ್ ವೀರೇಶ್, ಸೇರಿದಂತೆ ದಲಿತ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ