ಭೀರಪ್ಪ ಹೊಸೂರಗೆ ರಾಜ್ಯ ಮಾಧ್ಯಮ ಸೇವಾರತ್ನ – ಪ್ರಶಸ್ತಿ ಪ್ರಧಾನ ಸಮಾರಂಭ.
ಇಂಡಿ ಆ.18

ರವಿವಾರ ಆಗಸ್ಟ್ 17 ರಂದು ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ಕಲರ್ ಫುಲ್ ಸುದ್ದಿ ಕನ್ನಡ ಮಾಸ ಪತ್ರಿಕೆ ಹಾಗೂ ಕನ್ನಡ ಫಿಲಂ ಚೇಂಬರ್ (ರಿ) ವತಿಯಿಂದ ಹಮ್ಮಿಕೊಂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪ್ರಶಸ್ತಿ,ಸನ್ಮಾನ ಸಮಾರಂಭದಲ್ಲಿ ಇಂಡಿ ತಾಲೂಕು ರವಿವಾಣಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ ಪತ್ರಕರ್ತ ಭೀರಪ್ಪ ಹೊಸೂರ ಅವರಿಗೆ ರಾಜ್ಯ ಮಾಧ್ಯಮ ಸೇವಾರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀವೇದಮೂರ್ತಿ ಡ, ಕಾಡಯ್ಯಾ ಶಿವಮೂರ್ತಿ ಹಿರೇಮಠ (ಸ್ವಾಮಿಗಳು) ಶ್ರೀ ದುರ್ಗಾಮಾತಾ ಮತ್ತು ಶ್ರೀ ಕಾಳಿಮಾತಾ ಆರಾಧಕರು, ಕೆ.ಎನ್ ರಮೇಶ್ DYSP, ಪೊಲೀಸ್ ಇಲಾಖೆ ತುಮಕೂರು ಜಿಲ್ಲೆ, ಟಿ.ಎಸ್. ನಾಗಭರಣ ಖ್ಯಾತ ನಟರು, ಲಯಕೋಕಿಲ ಖ್ಯಾತ ಹಾಸ್ಯ ನಟರು ಹಾಗೂ ಸಂಗೀತ ನಿರ್ದೇಶಕರು, ಭೂಮಿಕಾ ಎ.ಕ ಚಲನ ಚಿತ್ರ ನಟಿ, ಸವಿ ಪ್ರಕಾಶ್ ಅಂತಾರಾಷ್ಟ್ರೀಯ ನಿರೂಪಕರು ದೂರದರ್ಶನ ಚಂದನ ವಾಹಿನಿಯ ನಿರೂಪಕಿ, ಎಂ.ಎಸ್ ರವೀಂದ್ರ ಅಧ್ಯಕ್ಷರು, ಡಾ, ಎನ್.ಎನ್ ಪ್ರಹ್ಲಾದ್ ಉಪಾಧ್ಯಕ್ಷರು, ನರಸಿಂಹಯ್ಯ ಎನ್, ಆರ್ಯನ್ ರೆಡ್ಡಪ್ಪ ಎಂ ಆರ್, ಡಾ, ವಿಜಯ ಎಸ್ ಅಗಡಿ, ಅಲ್ಲೂರಿ ಸಿತಾರಾಮರಾಜು ಬಿ ಆರ್,ಪ್ರೊ ಕೆ ವಿ ಐಹಾನ್, ಡಾ, ಮಹಾದೇವಿ, ಸೇರಿದಂತೆ ಅನೇಕ ಗಣ್ಯರಿಗೆ ಪ್ರಶಸ್ತಿ ವಿತರಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ