“ಸರ್ಕಾರ ಆದೇಶ ಮಾಡಿದ ಮಹನೀಯರ ಜಯಂತಿಗಳಿಗೆ ಅಧಿಕಾರಿಗಳು ಹಾಜರಾಗದಿದ್ದರೆ”, ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು – ಎಚ್ಚರಿಕೆ ನೀಡಿದ ತಹಶೀಲ್ದಾರ್.
ಕೂಡ್ಲಿಗಿ ಜು.16

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ತಾಲೂಕಾ ಕಚೇರಿಯಲ್ಲಿ ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆ ಕರೆದಿದ್ದು, ಈ ಸಮಯದಲ್ಲಿ ಸಮುದಾಯದ ಮುಖಂಡರುಗಳು ಸಭೆಯಲ್ಲಿ ಎದ್ದು ನಿಂತು ಇಂದಿನ ಬಾರಿ ಹಡಪದ ಅಪ್ಪಣ್ಣ ಜಯಂತಿಯನ್ನು ಮಾಡಿದಾಗ ತಾಲೂಕಿನ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಅನೇಕ ಶಾಲೆಗಳಲ್ಲಿಯೂ ಸಹ ಸರ್ಕಾರ ಮಹನೀಯರ ಜಯಂತಿಯನ್ನು ಮಾಡಲು ಆದೇಶ ಮಾಡಿದರು, ಕೆಲವು ಇಲಾಖೆಯ ಅಧಿಕಾರಿಗಳಿಗೆ ನಿರ್ಲಕ್ಷಿಸುವುದು ಶೋಭೆಯಲ್ಲ ಎಂದು ಹಡಪದ ಸಮುದಾಯದ ಮುಖಂಡ ಹಾಗೂ ಕೂಡ್ಲಿಗಿ ತಾಲೂಕಾ ಅಧ್ಯಕ್ಷರಾದ ಚೌಡಪ್ಪ ರವರು ಆರೋಪ ಮಾಡಿದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಸಹ ಮಾನ್ಯ ತಹಶೀಲ್ದಾರರಿಗೆ ಜುಲೈ 21 ಭಾನುವಾರ ರಂದು ನಡೆಯಲಿರುವ ಹಡಪದ ಅಪ್ಪಣ್ಣ ಜಯಂತಿಯನ್ನು ನಿರ್ಲಕ್ಷ್ಯ ಮಾಡದೆ ತಹಶೀಲ್ದಾರ್ ಕಡೆಯಿಂದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿ ಹಾಗೂ ಎಲ್ಲಾ ಇಲಾಖೆಯಲ್ಲಿ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಬೇಕು ಎಂದು ತಿಳಿಸಿದರು.

ಹಡಪದ ಸಂಘದ ತಾಲೂಕು ಕಾರ್ಯದರ್ಶಿಯಾದ ಹಾರಕ ಬಾವಿ ಕೊಟ್ರೇಶ್ ಸಭೆಯಲ್ಲಿ ಶಾಲಾ ಕಾಲೇಜ್ ಗಳಲ್ಲಿ ಚಾಚು ತಪ್ಪದೆ ಹಡಪದ ಅಪ್ಪಣನ ಭಾವ ಚಿತ್ರ ಇಟ್ಟು ಜಯಂತಿಯನ್ನು ಆಚರಿಸಬೇಕು ಎಂದು ತಿಳಿಸಿದರು. ಈ ಪೂರ್ವಭಾವಿ ಸಭೆಯಲ್ಲಿ ಕೆಲವು ಅಧಿಕಾರಿಗಳು ಮಾತ್ರ ಹಾಜರಿದ್ದರು, ತಹಶೀಲ್ದರಾದ ರೇಣುಕಾ ರವರು ಎಲ್ಲಾ ಇಲಾಖೆಗಳಿಗೆ ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಮಹನೀಯರ ಜಯಂತಿಗಳಿಗೆ ಹಾಜರಾಗದೆ ಇರುವಂತಹ ಅಧಿಕಾರಿಗಳಿಗೆ ಈಗಾಗಲೇ ಎರಡರಿಂದ ಮೂರು ಬಾರಿ ಕೆಲವೊಬ್ಬ ಅಧಿಕಾರಿಗಳಿಗೆ ಸೂಚನೆ ನೋಟಿಸ್ ಕೊಟ್ಟಿದ್ದು, ಸರ್ಕಾರದ ಆದೇಶಗಳನ್ನು ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಪತ್ರವನ್ನು ಸರ್ಕಾರಕ್ಕೆ ಆಯಾ ಇಲಾಖೆಗೆ ಕುರಿತು ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಹಡಪದ ಸಮುದಾಯದ ಮುಖಂಡರುಗಳಾದ ಹೆಚ್. ತಿಪ್ಪೇಸ್ವಾಮಿ ಉಪಾಧ್ಯಕ್ಷರು ಎಂಬಿ ಐಯ್ಯನಹಳ್ಳಿ, ಕರಿಯಪ್ಪ, ತಾಲೂಕು ಮುಖಂಡ ಲಿಂಗಪ್ಪ, ಲಕ್ಷ್ಮಿ ಕೊಟ್ರಪ್ಪ ಗ್ರಾಮ್ ಪಂಚಾಯತಿ ಸದಸ್ಯರು ಹಾರಕ ಬಾವಿ ರಾಜೇಶ್ವರಿ ಮಂಜುನಾಥ ಗ್ರಾಮ ಪಂಚಾಯತಿ ಸದಸ್ಯರು ಹೆಚ್. ರಮೇಶ್ ಜಿಲ್ಲಾ ಸದಸ್ಯರು, ಹೆಚ್. ಲಿಂಗಪ್ಪ ಕೂಡ್ಲಿಗಿ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ ಬಿ.ಸಾಲುಮನೆ. ಕೂಡ್ಲಿಗಿ.