ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಮುಳ್ಳೂರು ಜೂನ್.19

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಳ್ಳೂರು ಗ್ರಾಮದಲ್ಲಿ ಕೆರೆ ಹೊಳೆತ್ತುವ ಕಾಮಗಾರಿ ನಡೆಯುತ್ತಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜಲ ಸಂಜೀವಿನಿ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗವೇಣಿ ನಾಯಕ್, ಇತ್ತೀಚೆಗೆ ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡುವರರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಜನರು ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಜೊತೆಗೆ ಮಹಿಳೆಯರು ಮುಟ್ಟಿನ ಬಗ್ಗೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅದು ಆಗಬಾರದು ನೀವು ಹಿಂದೇಟು ಹಾಕಿದಷ್ಟು ಕ್ಯಾನ್ಸರ್ ನಂತಹ ಹೆಮ್ಮಾರಿ ಖಾಯಿಲೆಗೆ ತುತ್ತಾಗುತ್ತಿರಿ ಎಂದು ಎಚ್ಚರಿಸಿದರು. ಬಳಿಕ ಕೂಲಿ ಕಾರ್ಮಿಕರಿಗೆ ಬಿಪಿ, ಶುಗರ್, ಟಿ.ಬಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಲು ಸೂಚಿಸಿದರು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌರಮ್ಮ ಶಿರೂರ , ಡಾಟಾ ಎಂಟ್ರಿ ಆಪರೇಟರ್ ಅಜಿತ್ ಗಗನದ , ತಾಂತ್ರಿಕ ಸಹಾಯಕ ಅಜಿತ್ ಕೊಣ್ಣೂರ, ಆರೋಗ್ಯ ನಿರೀಕ್ಷಕರಾದ ಅನಿಲ್ ಪೂಜಾರಿ, ಆರ್. ಬಿ ಪಾಟೀಲ, ಪಿ. ಡಿ . ಮುರಕುಂಬಿ, ಪಿಎಚ್ ಸಿಒ ರಾದ ಸಾವಿತ್ರಿ ಗಾಣಿಗೇರ, ಚೇತನ್ ಎಸ್. ಕೆ, ಸಿಎಚ್ ಓ ಪುಷ್ಪಾ, ಬಿಎಫ್’ಟಿ ಸಂಗಪ್ಪ ಮೇಲಿನಮನಿ, ಬ್ರಹ್ಮಲಿಂಗೇಶ್ ಅಂತರಗೊಂಡ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಕೆಎಚ್ ಪಿಟಿ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.