ಸ್ನ್ಯಾಪ್ಚಾಟ್ ಆಯ್ತು, ಇನ್ಸ್ಟಾಗ್ರಾಮ್ ಆಯ್ತು ಇದೀಗ ವಾಟ್ಸಪ್ನಲ್ಲೂ ಬರ್ತಿದೆ ‘ಅವತಾರ್’ ಫೀಚರ್
ಇದುವರೆಗೆ ನಾವೆಲ್ಲರೂ ಸ್ನ್ಯಾಪ್ಚಾಟ್ ಮೂಲಕ ಅವತಾರ್ ಫೀಚರ್ ಅನ್ನು ನೋಡಿದ್ದೆವು. ಈ ಅವತಾರ್ ಮೂಲಕ ಕ್ಯಾರೆಕ್ಟರೈಸೇಷನ್ ಮಾಡಿ ಅವತಾರ್ನಂತೆ ಮಾಡಿಕೊಳ್ಳಬಹುದಿತ್ತು. ಇದೀಗ ಈ ಫೀಚರ್ ವಾಟ್ಸಪ್ನಲ್ಲೂ ಬರುತ್ತಿದೆ.

ಇದುವರೆಗೆ ನಾವೆಲ್ಲರೂ ಸ್ನ್ಯಾಪ್ಚಾಟ್ ಮೂಲಕ ಅವತಾರ್ ಫೀಚರ್ ಅನ್ನು ನೋಡಿದ್ದೆವು. ಈ ಅವತಾರ್ ಮೂಲಕ ಕ್ಯಾರೆಕ್ಟರೈಸೇಷನ್ ಮಾಡಿ ಅವತಾರ್ನಂತೆ ಮಾಡಿಕೊಳ್ಳಬಹುದಿತ್ತು. ಇದೀಗ ಈ ಫೀಚರ್ ವಾಟ್ಸಪ್ನಲ್ಲೂ ಬರುತ್ತಿದೆ.
ಇದುವರೆ ಸ್ನ್ಯಾಪ್ಚಾಟ್ನಲ್ಲಿದ್ದಂತಹ ಅವತಾರ್ ಫೀಚರ್ ಇನ್ನುಮುಂದಿನ ದಿನಗಳಲ್ಲಿ ವಾಟ್ಸಪ್ ಬಳಕೆದಾರರಿಗೂ ಲಭ್ಯವಾಗುತ್ತದೆ ಎಮದು ಮೆಟಾ ಕಂಪನಿ ತಿಳಿಸಿದೆ. ಅವತಾರ್ ಫೀಚರ್ ಬಳಸಿಕೊಂಡು ಬಳಕೆದಾರರು 36 ಕಸ್ಟಮ್ ಸ್ಟಿಕ್ಕರ್ಗಳನ್ನು ರಚಿಸಬಹುದಾಗಿದೆ. ಈ ರೀತಿ ರಚಿಸಲಾದಂತಹ ಸ್ಟಿಕ್ಕರ್ಗಳನ್ನು ಪ್ರೊಫೈಲ್ ಚಿತ್ರವನ್ನಾಗಿ ಕೂಡ ಹಾಕಿಕೊಳ್ಳಬಹುದು.
ಸದ್ಯಕ್ಕೆ ಐಒಎಸ್ ಮತ್ತು ಆ್ಯಂಡ್ರಾಯ್ಡ್ ಡಿವೈಸ್ಗಳ ಬೀಟಾ ವರ್ಷನ್ನಲ್ಲಿ ಅವತಾರ್ ಫೀಚರ್ ಕೆಲವು ಸಮಯದಲ್ಲಿ ದೊರೆಯಲಿದೆ. ನಂತರದಲ್ಲಿ ಎಲ್ಲಾ ಸ್ಮಾರ್ಟ್ಫೋನ್ ಬಳಕೆದಾರರಿಗೂ ಅವತಾರ್ ಫೀಚರ್ ದೊರೆಯುತ್ತದೆ ಎಂದು ಕೆಲವು ವರದಿಗಳು ತಿಳಿಸಿದೆ.
ವಾಬೀಟಾಇನ್ಫೋದ ವರದಿಯ ಪ್ರಕಾರ, ವಾಟ್ಸಪ್ನಲ್ಲಿ ಮೆಸೇಜ್ ಮಾಡಲು ಅವತಾರ್ ಉತ್ತಮ ಆಯ್ಕೆಯಾಗಿರಲಿದೆ. ಇದೀಗ ಮೊದಲ ಬಾರಿಗೆ ವಾಟ್ಸಪ್ನಲ್ಲಿ ಪ್ರಾರಂಭವಾಗುವುದರಿಂದ ಮೊದಲಿಗೆ ಕೆಲವು ತೊಂದರೆಗಳು ಬರಬಹುದು ತದನಂತರದಲ್ಲಿ ಸರಿಹೋಗಬಹುದು ಎಂದಿದ್ದಾರೆ. ಇನ್ನು ಕೆಲವು ಮಂದಿಗೆ ಈ ಫೀಚರ್ಸ್ ವಾಟ್ಸಪ್ ಅಪ್ಡೇಟ್ ಮಾಡಿದ ನಂತರ ಬರುತ್ತದೆ.
ಇನ್ನು ಈ ಫೀಚರ್ನಲ್ಲಿ ಲೈಟಿಂಗ್, ಹೇರ್ ಡಿಸೈನ್, ಇತರ ಡಿಸೈನ್ಗಳು, ಶೇಡಿಂಗ್ ಮತ್ತು ಇತರ ಹಲವು ಆಯ್ಕೆಗಳು ‘ಅವತಾರ್’ನಲ್ಲಿ ಲಭ್ಯವಿವೆ. ಇದನ್ನು ಎಡಿಟ್ ಮಾಡಬಹುದಾಗಿದೆ.
ಐಒಎಸ್ನಲ್ಲಿ ವಾಟ್ಸಪ್ ಚಾಟ್ ಓಪನ್ ಮಾಡಿ ಸ್ಟಿಕ್ಕರ್ಸ್ ಆಯ್ಕೆಯನ್ನು ಓಪನ್ ಮಾಡಬೇಕು. ಆಂಡ್ರಾಯ್ಡ್ ಮೊಬೈಲ್ನಲ್ಲಾದ್ರೆ ಇಮೋಜಿ ಸಿಂಬಲ್ ಅನ್ನು ಟ್ಯಾಪ್ ಮಾಡಿದಾಗ ಅಲ್ಲಿ ಜಿಫ್ ಆಯ್ಕೆಯ ನಂತರದಲ್ಲಿ ಸ್ಟಿಕ್ಕರ್ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ನಲ್ಲಿರುವಂತಹ ‘ಅವತಾರ್’ ಆಯ್ಕೆ ಅಲ್ಲಿ ಕಾಣಿಸುತ್ತದೆ.
ಅಲ್ಲಿ ನಿಮಗೆ ಬೇಕಾದ ಒಂದು ‘ಅವತಾರ್’ ಅನ್ನು ಸೆಲೆಕ್ಟ್ ಮಾಡಬೇಕು. ಆಗ ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ ‘ಗೆಟ್ ಸ್ಟಾರ್ಟೆಡ್’ ಆಯ್ಕೆ ಮಾಡುವ ಮೂಲಕ ‘ಅವತಾರ್’ ಸ್ಟಿಕ್ಕರ್ ರಚಿಸಬಹುದು. ಒಮ್ಮೆ ಸ್ಟಿಕ್ಕರ್ ರಚಿಸಿದ ನಂತರ ಅದನ್ನು ಸೇವ್ ಮಾಡಿ. ಅದನ್ನು ವಾಟ್ಸಪ್ನಲ್ಲಿ ಆ್ಯಡ್ ಮಾಡ್ಬೇಕು. ಈ ಮೂಲಕ ನಿಮ್ಮ ವಾಟ್ಸಪ್ ಅಕೌಂಟ್ ಅನ್ನು ಹೊಸದಾಗಿ ಕಾಣುವಂತೆ ಮಾಡಬಹುದು.
ಈ ಫೀಚರ್ ಮೊದಲಿಗೆ ಕೇವಲ ಸ್ನ್ಯಾಪ್ಚಾಟ್ನಲ್ಲಿ ಮಾತ್ರ ಇತ್ತು. ಅದರ ನಂತರ ಇದು ಇನ್ಸ್ಟಾಗ್ರಾಮ್ನಲ್ಲಿ ಬಂತು. ಇದೀಗ ಈ ಫೀಚರ್ ವಾಟ್ಸಪ್ನಲ್ಲಿ ಬರುತ್ತಿದೆ ಎಂಬ ಸುದ್ದಿಯಾಗುತ್ತಿದೆ.