ಶ್ರೀ ಮಂತರ ಪಟ್ಟಿಯಲ್ಲಿ 2 ನೇ ಸ್ಥಾನಕ್ಕಿಳಿದ ಟೆಸ್ಲಾ ಮುಖ್ಯಸ್ಥ..?!

ವಾಷಂಗ್ಟನ್ : ನಂ.1 ಶ್ರೀಮಂತ ಸ್ಥಾನ ಕಳೆದುಕೊಂಡ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್:-ಭಾರತೀಯ ಉದ್ಯಮಿ ಗೌತಮ್ ಅದಾನಿಗೆ ನಂ.3 ಅಂಬಾನಿಗೆ 9 ನೇ ಸ್ಥಾನವಾಷಿಂಗ್ಟನ್:
ಬ್ಲೂಮ್ ಬರ್ಗ್ ಟಾಪ್ -10 ಬಿಲಿಯನೇರ್ ಗಳ ಪಟ್ಟಿಯಲ್ಲಿ ಟ್ವಿಟರ್ ಮತ್ತು ಟೆಸ್ಲಾ ಸಂಸ್ಥೆಯ ಮಾಲೀಕ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ ,ಫ್ರಾನ್ಸ್ ನ ಉದ್ಯಮಿ ಬರ್ನಾಡ್ ಅರ್ನಾಲ್ಟ್ ಮೊದಲ ಸ್ಥಾನಕ್ಕೇರಿದ್ದಾರೆ.

ಐಷಾರಾಮಿ ಫ್ಯಾಷನ್ ಉತ್ಪನ್ನಗಳ ತಯಾರಕರಾದ LVMH ಗ್ರೂಪ್ ಅಧ್ಯಕ್ಷ ಮತ್ತು ಸಿಇಒ ಅರ್ನಾಲ್ಟ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅವರ ಸಂಪತ್ತಿನ ಮೌಲ್ಯ ಸುಮಾರು 13.85 ಲಕ್ಷ ಕೋಟಿ ರೂ.2022ರ ಜನವರಿಯಿಂದ 8.66 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ ಎಲಾನ್ ಮಸ್ಕ್ 13.28 ಲಕ್ಷ ಕೋಟಿ ರೂ. ಒಡೆಯರಾಗಿದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರಿದ್ದು, ಅವರು 10.1 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆ. ಭಾರತೀಯ ಉದ್ಯಮಿ ಮುಕೇಶ್ ಅಂಬಾನಿ 9 ನೇ ಸ್ಥಾನದಲ್ಲಿದ್ದಾರೆ.ಸೋಮವಾರ ಟೆಸ್ಲಾ ಷೇರುಗಳು ಶೇಕಡ 4 ರಷ್ಟು ಕುಸಿದ ನಂತರ ಟೆಸ್ಲಾ ಸಂಸ್ಥಾಪಕ ಮತ್ತು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಕಳೆದುಕೊಂಡರು.ಫೋರ್ಬ್ಸ್ ವರದಿಯ ಪ್ರಕಾರ, ಮಸ್ಕ್‌ನ ಪ್ರಸ್ತುತ ಆಸ್ತಿ ಮೌಲ್ಯ $176.8 ಬಿಲಿಯನ್ ಆಗಿದೆ, ಇದು ಬರ್ನಾರ್ಡ್ ಅರ್ನಾಲ್ಟ್ ಅವರ ಮೌಲ್ಯಕ್ಕಿಂತ $11.8 ಶತಕೋಟಿ ಕಡಿಮೆಯಾಗಿದೆ,