Vaishnavi Gowda: ಮೊದಲ ಬಾರಿ ಮೌನ ಮುರಿದ ವೈಷ್ಣವಿ ಗೌಡ ತಾನು ಡಿಪ್ರೆಷನ್‍ಗೆ ಹೋಗಿಲ್ಲ ಅಂದ್ರು
ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಅವರು ತಮ್ಮ ಮದುವೆ ವಿಚಾರವಾಗಿ ಮೊದಲ ಬಾರಿ ಮೌನ ಮುರಿದಿದ್ದಾರೆ. ನಾನು ಡಿಪ್ರೆಷನ್‍ಗೆ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸನ್ನಿಧಿ ಅಂದ್ರೆ ವೈಷ್ಣವಿ ಗೌಡ ಎಲ್ಲರಿಗೂ ಅಚ್ಚು ಮೆಚ್ಚು. ಧಾರಾವಾಹಿ ಮೂಲಕ ಪ್ರಸಿದ್ದಿ ಪಡೆದಿದ್ದರು. ಸನ್ನಿಧಿ ನೋಡಲು ಎಷ್ಟೋ ಜನ ಕಾಯ್ತಾ ಇರ್ತಾರೆ. (ಚಿತ್ರಗಳು ಕೃಪೆ: ವೈಷ್ಣವಿ ಇನ್ಸ್ಟಾಗ್ರಾಂ ಖಾತೆ)
ವೈಷ್ಣವಿ ಮದುವೆ ಆಗ್ತಾರೆ ಅಂತೆ, ನಿಶ್ಚಿತಾರ್ಥ ಆಗಿದೆ ಎಂದು ಒಂದು ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಆದ್ರೆ ಅವರು ಅದಕ್ಕೆ ಒಪ್ಪಿರಲಿಲ್ಲ ಎಂದು ತಿಳಿದು ಬಂತು.
ವೈಷ್ಣವಿ ಅವರ ಜೊತೆ ನಿಶ್ಚಿತಾರ್ಥ ಆಗಿತ್ತು ಎನ್ನಲಾದ ಹುಡುಗನ ಬಗ್ಗೆ ಆಡಿಯೋವೊಂದು ವೈರಲ್ ಆಗಿತ್ತು. ನನಗೆ ಮೋಸ ಮಾಡ್ತಿದ್ದಾರೆ ಎಂದು ಹುಡುಗಿ ಆಡಿಯೋ ಸಂದೇಶ ಕಳಿಸಿದ್ದರು.
ವಿದ್ಯಾಭರಣ್ ಅವರ ಬಗ್ಗೆ ಆಡಿಯೋ ಲೀಕ್ ಆಗಿತ್ತು, ವೈಷ್ಣವಿ ಗೌಡ ಅವರು ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆದ್ರೆ ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಆದ್ರೆ ಮೊದಲ ಬಾರಿ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಡಿಪ್ರೆಶನ್‍ನಲ್ಲಿದ್ದೆ, ಬೇಜಾರಾಗಿ ಟ್ಯಾಟೋ ಹಾಕಿಸಿಕೊಂಡೆ ಅಂತ ಎಲ್ಲರೂ ಹೇಳ್ತಾ ಇದ್ದಾರೆ. ನನಗೆ ಬೇಜಾರು ಆಗಿದ್ದು ನಿಜ. ಆದ್ರೆ ನಾನು ಡಿಪ್ರೆಶನ್ ಗೆ ಹೋಗಿರಲಿಲ್ಲ. ಈ ಘಟನೆ ನಡೆಯುವ ಮೊದಲೇ ನಾನು ಟ್ಯಾಟೋ ಹಾಕಿಸಿಕೊಂಡಿದ್ದೆ ಎಂದು ವೈಷ್ಣವಿ ಅವರು ಹೇಳಿದ್ದಾರೆ.
ಜೀವನದಲ್ಲಿ ಏನೂ ಬಂದ್ರೂ ನಾನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಯಾವುದಕ್ಕೂ ಕುಗ್ಗುವುದಿಲ್ಲ. ನನಗೆ ಮದುವೆ ಅಂದ್ರೆ ಒಂದು ಕನಸು ಎಂದು ನಟಿ ವೈಷ್ಣವಿ ಹೇಳಿದ್ದಾರೆ.
ಅಷ್ಟಕ್ಕೂ ನಾನು ಇನ್ನೂ ಮದುವೆಗೆ ಒಪ್ಪಿರಲಿಲ್ಲ. ನಾನು ತುಂಬಾ ಸ್ಟ್ರಾಂಗ್ ಹುಡುಗಿ. ಈ ವಿಷಯಕ್ಕೆಲ್ಲಾ ಡಿಪ್ರೆಶನ್ ಗೆ ಹೋಗಲ್ಲ ಎಂದು ವೈಷ್ಣವಿ ಸ್ಪಷ್ಟಡಿಸಿದ್ದಾರೆ.
ನಾನು ಜೀವನವನ್ನು ನಂಬುತ್ತೇನೆ. ಜೀವನಕ್ಕೆ ನಮಗೆ ಏನು ಕೊಡಬೇಕು? ಏನು ಕೊಡಬಾರದು ಅಂತ ಗೊತ್ತು. ನಾನಾ? ಜೀವನಾನಾ ಅಂತ ನೋಡೇಬಿಡುವೆ. ಕನಸನ್ನು ನನಸು ಮಾಡಿಕೊಳ್ತೀನಿ. ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ ಎಂದು ವೈಷ್ಣವಿ ಗೌಡ ಹೇಳಿದ್ದಾರೆ.