ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಮತ್ತು ಶ್ರೀ ನಿತ್ಯಾನಂದ ವಿಜಯದುರ್ಗ ಯುವಕ ಮಂಡಳಿ ವತಿಯಿಂದ ಫಂಡರಾಪುರಕ್ಕೆ ಹೋಗುವ ಪಾದಯಾತ್ರೆಯ ದಿಂಡಿ ಯಾತ್ರಿಗಳಿಗೆ ಉಪಹಾರ ಮತ್ತು ದೇಣಿಗೆ ಸಂಗ್ರಹಿಸಿ ಸಲ್ಲಿಸಲಾಯಿತು.
ಗದಗ ನವೆಂಬರ್.9

ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕ ಹಾಗೂ ಶ್ರೀ ನಿತ್ಯಾನಂದ ವಿಜಯದುರ್ಗ ಯುವಕ ಮಂಡಳಿ ವತಿಯಿಂದ ಗದಗ ನಗರದ ಡಿಸಿ ಮಿಲ್ ರೋಡ್ ತಳಗೇರಿ ಓಣಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 49ನೇ ವರ್ಷದ ಹರಪನಹಳ್ಳಿ ಯಿಂದ ಶ್ರೀ ಕ್ಷೇತ್ರ ಪಂಢರಾಪೂರಕ್ಕೆ ಪಾದಯಾತ್ರೆ ದಿಂಡಿ ಕರ್ನಾಟಕ ಭಕ್ತ ಮಂಡಳಿ ಅವರು ಪಂಢರಾಪೂರಕ್ಕೆ ಹೋಗುವಾಗ ಗದಗ ನಗರದ ಡಿಸಿ ಮಿಲ್ ರೋಡ್ ತಳಗೇರಿ ಓಣಿಯಲ್ಲಿ ಆಗಮಿಸಿದಾಗ ಮಾದಿಗ ಸಮಾಜದ ಗುರುಹಿರಿಯರು, ತಾಯಂದಿರು, ಅಕ್ಕಂದಿರು ಯುವಕರು, ಯುವತಿಯರು ಎಲ್ಲರೂ ಸೇರಿಕೊಂಡು ಪೂಜೆ ಸಲ್ಲಿಸುವ ಮುಖಾಂತರ ಪಾದಯಾತ್ರೆ ಮಾಡುವವರಿಗೆ ಉಪಹಾರ ವ್ಯವಸ್ಥೆ ಮಾಡಿ ಹಣ್ಣು, ಹಂಪಲ, ಹಾಲು ನೀಡಿ ಮತ್ತು ದೇಣಿಗೆ ಸಂಗ್ರಹಿಸಿ ಕೊಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾಧ್ಯಕ್ಷರಾದರಾಘವೇಂದ್ರ ಪರಾಪೂರ ಮಾತನಾಡಿ ನಮ್ಮ ಓಣಿಯಲ್ಲಿ ಪಂಡರಪೂರಕ್ಕೆ ಪಾದಯಾತ್ರೆಯಮೂಲಕ ಹೋಗುವ ಭಕ್ತಾಧಿಗಳಿಗೆ ನಮ್ಮ ಸಮಾಜದ ಸೇವೆ ಮಾಡುತ್ತಿರುವುದು ಸಂತಸ ತಂದಿದೆಇಂತಹ ಧಾರ್ಮಿಕ ಕಾರ್ಯಗಳಲ್ಲಿ ನಮ್ಮ ಮಕ್ಕಳು ಇಂದಿನ ಯುವ ಪೀಳಿಗೆ ಭಾಗವಹಿಸುವ ಮೂಲಕ ತಿಳುವಳಿಕೆ ಮೂಡುತ್ತದೆ ಅವರ ಮನೋಬಲ ಹೆಚ್ಚಾಗುತ್ತದೆ ಎಂದು ಹೇಳುತ್ತಾ ಆ ವಿಠಲ ದೇವರುರಾಜ್ಯದಲ್ಲಿ ಮಳೆ, ಬೆಳೆ ಸರಿಯಾಗಿ ಆಗುವಂತೆ ಮತ್ತು ಸರ್ವ ಜನಾಂಗಕ್ಕೂ ಸುಖವನ್ನು ನೀಡಲಿಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ರಾಘವೇಂದ್ರ ಪರಾಪೂರ
98801 61018