ಸುಳ್ಳು ಪ್ರಮಾಣ ಪತ್ರ ಮತ್ತು ಮೀಸಲಾತಿಯ ದುರುಪಯೋಗವನ್ನು ವಿರೋಧಿಸಿ DSS ರಾಜ್ಯ ಸಂಘಟನಾ ಸಂಚಾಲಕ ಶಿವಾನಂದ್ ಸಾವಳಗಿ ಅವರ ನೇತೃತ್ವದಲ್ಲಿ ಪ್ರತಿಭಟನೆ…!


ಕಲಬುರ್ಗಿ:
ರಾಜ್ಯ ಸಂಘಟನಾ ಸಂಚಾಲಕ ಶಿವಾನಂದ್‌, ಸಾವಳಗಿ ಅವರ ನೇತೃತ್ವದಲ್ಲಿ , ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆಂದು ಸುಳ್ಳು ಪ್ರಮಾಣಪತ್ರಗಳನ್ನು ಸೃಷ್ಟಿಸಿ ಸರಕಾರದ ಹಲವು ಪ್ರಯೋಜನಗಳನ್ನು ಪಡೆದಿರುವ ಹಾಗೂ ಬೇಡ ಜಂಗಮ ಮತ್ತು ಹಲವು ಹೆಸರಿನಲ್ಲಿ ಮೀಸಲಾತಿಯನ್ನು ಕಬಳಿಸುತ್ತಿರುವ ಕೆಲವು h ಸಂವಿಧಾನ ಹಿತಾಸಕ್ತಿ ವಿರೋಧಿ ನೀತಿಯನ್ನು ಖಂಡಿಸಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (DSS) ಕಾಯ೯ಕರ್ತರು ಕಲಬುರ್ಗಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನ ಮಾಡಿದರು.
ಈ ಪ್ರತಿಭಟನಾ ರ್ಯಾಲಿಯಲ್ಲಿ ಭೀಮಾಶಂಕರ್, ಕದಮ್, ಸಾಯಬಣ್ಣ ಬಡಿಗೇರ್, ಗಂಗಾವರ್, ಸತೀಶ್, ಬಟರ್ಕಿ, ಮಲ್ಲಪ್ಪ ಚಿನ್ನುರ, ಸಾತಪ್ಪ ಆರ್, ತೆಗನೂರ್, ಎಂ.ಡಿ. ಸಚಿನ್ , ಶಿವಪುತ್ರ ಆರ್ಯ, ಬಾಬುರಾವ್ ಸಿಂಗೆ, ರಾಜಕು ಮಾರ್, ನಾಟೀಕಾರ್, ರವೀಂದ್ರ ನಾಥ್ ಸಂಗಾವಿ, ಆಕಾಶ್ ಹೊಸಳ್ಳಿ ಮುತಾದವರು ಪಾಲ್ಗೊಂಡು ಈ ಪ್ರತಿಭಟನೆಯ ಭಾಗವಾಗಿದ್ದರು.

ನಂತರ ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು , ಡಾ. ಅಂಬೇಡ್ಕರ್ ಅವರು ಮೂಲ ಅಸ್ಪೃಶ್ಯರಿಗೆ
ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಲು ಸಂವಿಧಾನದ ಆತ್ಮವಾದ ಮೂಲಭೂತ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಆದಾಗ್ಯೂ, ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 101 ಇತರೆ ಉಪ ಜಾತಿಗಳನ್ನು ಸೇರಿಸಿ ನಿಜವಾದ ಮೂಲ ಅಸ್ಪಶ್ಯ ಜನಾಂಗಕ್ಕೆ ಮೂಲಭೂತ ಸೌಲಭ್ಯಗಳಿಂದ ವಂಚಿತಗೊಳಿಸ ಲಾಗುತ್ತಿದೆ ಎಂದು DSS ರಾಜ್ಯ ಸಂಘಟನಾ ಸಂಚಾಲಕ ಶಿವಾನಂದ. ಸಾವಳಗಿ ನೇತೃತ್ವದ ಪ್ರತಿಭಟನೆ ಆರೋಪಿಸಿತು.ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜೇವರ್ಗಿ ತಾಲ್ಲೂಕಿನ ಗಂವಾರ ಗ್ರಾಮ ಪಂಚಾಯಿತಿ 14 ಮತ್ತು 15ನೇ ಹಣಕಾಸು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಕಾರ್ಯಕ್ರಮಗಳಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗ ಪಡೆಸಿಕೊಂಡ ಗ್ರಾಮ ಪಂಚಾಯಿತಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದರು.

ಜಿಲ್ಲೆಯಾದ್ಯಂತ ಮತ್ತು ಆಳಂದ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕನಕ ಭವನ, ಹೂಗಾರ ಭವನ, ನೇಕಾರ ಭವನ ಗಳ ಕಾಮಗಾರಿ ಕಳಪೆಯಾಗಿವೆ. ಸಂಬಂಧಿಸಿದ ನಿರ್ಮಿತಿ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರಿಂದ ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ್, ಜೇರಟಗಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿದ್ದು, ಅವರು ತನಿಖೆ ಮಾಡದೆ ಕಾಲಹರಣ ಮಾಡಿ ಕಾಮಗಾರಿ ಕಳಪೆ ಮಾಡಿದ ಅಧಿಕಾರಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸುವುದರೊಂದಿಗೆ ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಡಾ. ಬಿ.ಆರ್. ಅಂಬೇಡ್ಕ‌ರ್ ಅಭಿವೃದ್ಧಿ ನಿಗಮದಲ್ಲಿ ಭೂ ಒಡೆತನ ಯೋಜನೆಯಲ್ಲಿ ಖರೀದಿಸಿದ ಜಮೀನುಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button