ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿನ್ನರ್ ರಾಕೇಶ ಅಡಿಗ…!!!??
ಹೌದು,ಬಿಗ್ ಬಾಸ್ ಕನ್ನಡ ಸೀಸನ್ 9 ರ ಫಿನಾಲೆ ರೇಸ್‌ನಲ್ಲಿರುವ ಸ್ಪರ್ಧಿಗಳು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ದಿವ್ಯ ಉರುಡಿಗ ಮತ್ತು ರೂಪೇಶ್ ರಾಜಣ್ಣ. BBK9 ಲೈವ್ ಸ್ಪರ್ಧಿಗಳ ಪ್ರಕಾರ, ಅವರು ತಮ್ಮ ಗ್ರ್ಯಾಂಡ್ ಫಿನಾಲೆಗೆ ಹೊಸ ಲುಕ್ ಗಾಗಿ ಹೇರ್ ಕಟ್ಟಿಂಗ್ ಗಾಗಿ ಬಿಗ್ ಬಾಸ್ ಅವಕಾಶವನ್ನು ನೀಡಿದ್ದು ಎಲ್ಲಾ ಫಿನಾಲೆ ಸ್ಪರ್ಧಿಗಳು ಹೊಸ ಗೆಟಪ್, ಹೊಸ ಲುಕ್ ನೊಂದಿಗೆ ಇಂದು ಟಿವಿಯಲ್ಲಿ ಕಾಣಸಿಗುತ್ತಾರೆ, ಉಳಿದಂತೆ ರಾಕೇಶ್ ಅಡಿಗ ಅವರ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು. ರಾಕೇಶ್ ಅಡಿಗ ಅವರ ಹೊಸ ಹೇರ್ ಸ್ಟೈಲ್ ಅವರು ಟ್ರೋಫಿ ಗೆಲ್ಲುವ ಸುಳಿವು ನೀಡುತ್ತಿದೆ ಎನ್ನುತ್ತಾರೆ BBK ಸೀಸನ್ 9 ರ ವೀಕ್ಷಕರು. ಅದೇನೇ ಇರಲಿ, ಬಿಗ್ ಬಾಸ್ ಕನ್ನಡ 9 ರ ವೀಕ್ಷಕರು ರಾಕೇಶ್ ಅಡಿಗ ಅವರಿಗೆ ಶೋ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ವೀಕ್ಷಕರು ಅಭಿಪ್ರಾಯಗಳು ಸದ್ಯ ಕೇಳಿ ಬರುತ್ತಿವೆ. ರಾಕೇಶ್ ಅಡಿಗ ಅಭಿಮಾನಿಗಳು ಅವರ ಹೊಸ ಹೇರ್ ಸ್ಟೈಲ್‌ಗಾಗಿ ಅವರನ್ನು ಟ್ರೆಂಡ್ ಮಾಡುತ್ತಿದ್ದಾರೆ ಮತ್ತು ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಅವರ ನೋಟಕ್ಕಾಗಿ ಕಾತುರರಾಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಎಲಿಮಿನೇಟ್ ಆದ ಬಳಿಕ , ರೂಪೇಶ್ ರಾಜಣ್ಣ ಅವರು ಕೂಡಾ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ರಾಜಣ್ಣ ಅವರ ಆಟ ಇದೀಗ ಅಂತ್ಯವಾಗಿದೆ. 5 ಫೈನಲಿಸ್ಟ್‌ಗಳ ಪೈಕಿ ಒಬ್ಬರಾಗಿದ್ದ ರಾಜಣ್ಣ ನಾಲ್ಕನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಬಿಗ್ ಬಾಸ್ ಆಟ ಅಂತಿಮ ಹಂತದಲ್ಲಿದ್ದು, ದೀಪಿಕಾ ದಾಸ್ ಕೂಡಾ ಔಟ್ ಆಗಿದ್ದಾರೆ. 2ನೇ ಬಾರಿಯೂ ನಟಿಗೆ ಅದೃಷ್ಟ ಕೈ ಕೊಟ್ಟಿದೆ. ಮೂರನೇ ರನ್ನರ್ ಅಪ್ ಆಗಿ ದೀಪಿಕಾ ಹೊರಬಂದಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ದೀಪಿಕಾ ಸ್ಪರ್ಧಿಸಿದ್ದರು. ಅಲ್ಲಿಯೂ ಗೆಲುವು ಕಾಣದೆ ಬಿಗ್ ಬಾಸ್ ಸೀಸನ್ 9ಗೆ ಕಾಲಿಟ್ಟಿದ್ದರು. ಆದರೆ ಟ್ರೋಫಿ ಗೆಲ್ಲಲಾಗದೆ ಹೊರನಡೆದಿದ್ದಾರೆ. ಸದ್ಯ ರೂಪೇಶ್ ಶೆಟ್ಟಿ & ರಾಕೇಶ್ ಅಡಿಗ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇನ್ನು ಈ BBK ಸೀಸನ್ 9 ರ ವಿಜೇತರು ಯಾರಾಗಬಹುದು ಎಂದು ಕೆಳಗೆ ಕಮೆಂಟ್ ಮಾಡಿ…