ಕಾಯಕ ಯೋಗಿ, ಕರ್ಮ ಯೋಗಿ ‘ ಯಂತೆ ತಾಯಿಯ ಅಂತ್ಯಕ್ರಿಯೆ ಬಳಿಕ ಮರಳಿ ಕರ್ತವ್ಯಕ್ಕೆ ಹಾಜರಾದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ..!
ಗಾಂಧಿನಗರ :
ತಾಯಿ ಹೀರಾಬೆನ್ ಅವರ 100 ನೇ ವಯಸ್ಸಿನಲ್ಲಿ ನಿಧನರಾದ ನಂತರ, ಪ್ರಧಾನಿ ಗುಜರಾತ್ ನ ಗಾಂಧಿನಗರದಲ್ಲಿರುವ ಅವರ ನಿವಾಸವನ್ನು ತಲುಪಿದರು.
ಬೆಳಗಿನ ಜಾವ 3:30ಕ್ಕೆ ಹೀರಾ ಬೆನ್ ಅವರು ಅನಾರೋಗ್ಯದಿಂದ ನಿಧನರಾಗಿದ್ದು, 9.30 ಗಂಟೆಯೊಳಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಗಾಂಧಿನಗರದ ಸೆಕ್ಟರ್ 30 ರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ. ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಅಂತಿಮ ವಿಧಿ ವಿಧಾನ ನೆರವೇರಿಸಿದ ನಂತರ ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಯಥಾಸ್ಥಿತಿಯಾಗಿ ತಮ್ಮ ಕರ್ತವ್ಯ ಮುಂದುವರಿಸಿರುವ ಮೋದಿ ನಿಗದಿಯಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಕರ್ತವ್ಯಕ್ಕೆ ಹಾಜರಾದರು. ದಿನವಿಡೀ ಪಶ್ಚಿಮ ಬಂಗಾಳದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದರು.
ಕೊಲ್ಕತ್ತಾದಲ್ಲಿ ಗಂಗಾನದಿ ಸ್ವಚ್ಛತೆ ಸಂಬಂಧ ಸಭೆ ನಡೆಸುವರು. ಪಶ್ಚಿಮ ಬಂಗಾಳದಲ್ಲಿ 2800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ದರು.
ಈ ಸಂಧರ್ಭದಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ವಿಶ್ರಾಂತಿ ಮಾಡಿ ಎಂದು ಸಮಾಧಾನ ಮಾಡಲು ಹೋದರು. ಆದರೂ ಅವರು “ಕರ್ಮ ಯೋಗಿ, ಕಾಯಕ ಯೋಗಿ” ಯಂತೆ ಮರಳಿ ತಮ್ಮ ಕೆಲಸಕ್ಕೆ ಸೇರಿದರು. ಅತ್ತ ಅಭಿಮಾನಿಗಳು ಕೂಡಾ ಮೋದಿಯವರನ್ನು ಪ್ರಶಂಸಿಸಿದರು, ಇಂತಹ ಪ್ರಧಾನಿಯನ್ನು ಪಡೆದ ತಾವೇ ಧನ್ಯರು ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಕಮೆಂಟ್ ಮಾಡುವ ಮೂಲಕ ತಿಳಿಸುತ್ತಿದ್ದಾರೆ. ಅಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಅವರ ತಾಯಿಯ ಅಂತ್ಯಕ್ರಿಯೆ ನಡೆಯಿತು ನೋವನ್ನು ವ್ಯಕ್ತ ಪಡಿಸಿದರು.