ಶ್ರೀ ಶರಣ ಬಸವೇಶ್ವರ ರಥೋತ್ಸವದ ಪ್ರಯುಕ್ತ ಶಾಂತಿ ಸಭೆ.
ಕಾನಾಮಡುಗು ಡಿಸೆಂಬರ್.20

ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವ ಕಾನ ಮಡಗು ಗ್ರಾಮದಲ್ಲಿ ದಿನಾಂಕ21-12-2023 ರಿಂದ23-12-2023.ರ ವರೆಗೆ ನಡೆಯಲಿರುವ ಶ್ರೀ ಶರಣ ಬಸವೇಶ್ವರ ರಥೋತ್ಸವದ ಪ್ರಯುಕ್ತ ಮಂಗಳವಾರ ದೇವಸ್ಥಾನದ ಆವರಣದಲ್ಲಿ ಶಾಂತಿ ಸಭೆ ಜರಿಗಿತು. ಈ ಶಾಂತಿ ಸಭೆಯಲ್ಲಿ ಕೊಟ್ಟೂರು ವೃತ್ತದ ಸಿಪಿಐ ವೆಂಕಟಸ್ವಾಮಿ ಯವರು ಮಾತನಾಡಿ, ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಇಸ್ಪೀಟು ಜೂಜು, ಮದ್ಯಪಾನ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ, ಅಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬ ನಾಗರಿಕರು, ಊರಿನ ಗ್ರಾಮಸ್ಥರು ಮುಖಂಡರು ರಥೋತ್ಸವದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಆಗದಂತೆ ಶಾಂತಿ ಸೌಹಾರ್ದತೆಯಿಂದ ಎಲ್ಲರೂ ಐಕ್ಯತೆಯಿಂದ ಶ್ರೀ ಶರಣ ಬಸವೇಶ್ವರ ರಥೋತ್ಸವದ ಕಾರ್ಯ ಕ್ರಮಗಳನ್ನು ನಡೆಸಿ ಶರಣೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗಿ, ಇಂತಹ ಕಾರ್ಯ ಕ್ರಮಗಳಿಗೆ ಗ್ರಾಮಸ್ಥರ ಸಹಕಾರ ಅತಿ ಮುಖ್ಯ ನಮ್ಮ ಇಲಾಖೆಯೂ ಕೂಡ ನಿಮ್ಮ ಜೊತೆಯಲ್ಲಿ ಇರುತ್ತದೆ ಕಾರಣ ಪ್ರತಿಯೊಬ್ಬರೂ ಶಾಂತಿಯಿಂದ ಜಾತ್ರೆಯನ್ನು ಆಚರಣೆ ಮಾಡಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.

ಕಾನಾಮಡಗು ದಾಸೋಹ ಮಠದ ಧರ್ಮಾಧಿಕಾರಿಗಳಾದ ಐ. ಮುಡಿ. ಶರಣಾರ್ಯರು ಮಾತನಾಡಿ ನಾಡಿನಾದ್ಯಂತ ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿ ವರ್ಷದಂತೆ ಗ್ರಾಮಸ್ಥರು, ಬರುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ರೊಂದಿಗೆ ಸಹಕರಿಸಿರಿ ಎಂದು ಈ ಶಾಂತಿ ಸಭೆಯಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ, ಕಾನಾ ಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಎಚ್ ನಾಗರತ್ನಮ್ಮ ಮತ್ತು ಪೊಲೀಸ್ ಸಿಬ್ಬಂದಿ. ಕಾನಮಡಗು ನಿವೃತ್ತ ಶಿಕ್ಷಕ ನೀರಗಂಟಿ ಶರಣಪ್ಪ. ಬಿ ಚನ್ನಪ್ಪ, ಚನ್ನವೀರ ಸ್ವಾಮಿ ನಿವೃತ್ತಿ ಶಿಕ್ಷಕ ಗಂಗಣ್ಣ , ಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಣ್ಣ ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಕಾನಮಡಗು ಗ್ರಾಮದ ದೈವಸ್ಥರು, ಮುಖಂಡರು ದಲಿತ ಕೇರಿಯ ಮುಖಂಡರು, ಗ್ರಾಮಸ್ಥರು ಸಾರ್ವಜನಿಕರು ಉಪಸಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ