ಆಲಮಟ್ಟಿ – ಹೇರಕಲ್ – ಬಾಗಲಕೋಟೆ ಮಧ್ಯೆ ಜಲಸಾರಿಗೆಗೆ ಕೇಂದ್ರ ಸರ್ಕಾರ ಅನುಮೋದನೆ…!
ಆಲಮಟ್ಟಿ:
ಆಲಮಟ್ಟಿಯ ಹಿನ್ನೀರು ಸುಂದರ ಪರಿಸರ ಹಾಗೂ ದೇಶ ವಿದೇಶ ವಿವಿಧ ಪಕ್ಷಿ ಸಂಕುಲಗಳ ತಾಣವಾಗಿದೆ. ಹಿನ್ನೀರಿನ ಸುಂದರ ದೃಶ್ಯ,ವಿವಿಧ ಪಕ್ಷಿ ಸಂಕುಲ ವೀಕ್ಷಣೆಗೆ ಅನುಕೂಲವಾಗಿದೆ. ಹಿನ್ನೀರಿನಲ್ಲಿ ನಾನಾ ರೀತಿಯ ದ್ವೀಪದ ಪ್ರದೇಶಗಳಿದ್ದು, ಅಲ್ಲಿ ಪ್ರವಾಸಿ ಚಟುವಟಿಕೆ ವಿಸ್ತರಿಸಲು, ಜಲ ಆಧಾರಿತ ಕ್ರೀಡೆಗಳ ಬೆಳವಣಿಗೆ ಮುಂತಾದ ಅನುಕೂಲವಾದ ಹಾಗೂ ಅರ್ಥಿಕ ಬೆಳೆವಣಿಗೆಯ ಕಾರ್ಯಗಳನ್ನು ಮುಂದೆ ಇಟ್ಟು ಕೊಂಡು, ಭಾರತ ಸರ್ಕಾರ ಜಲ ಸಾರಿಗೆ ಅಭಿವೃದ್ಧಿಗೆ ಅನುಮೋದಿಸಿದೆ.
2020ರಲ್ಲಿ ದೇಶವ್ಯಾಪಿ ಜಲ ಸಾರಿಗೆ ಅಭಿವೃದ್ಧಿಗೆ ಸರ್ವೆ ಮಾಡಿದಾಗ, ಜಲಸಾರಿಗೆಯ ಸರ್ವೆ ಮಾರ್ಗ ಸಮೀಕ್ಷೆಗೆ ಬ್ಲಾಕ್ ಬ್ರಿಕ್ಸ್ ಕಂಪನಿಯವರು ಆಗಮಿಸಿದ್ದು. ಆಗ, ಇಲ್ಲಿ ಜಲಸಾರಿಗೆ ಆರಂಭಿಸುವುದರಿಂದ ಆಗುವ ಪ್ರಯೋಜನ, ಪ್ರವಾಸಿ ಚಟುವಟಿಕೆಯ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಇದರಿಂದಾಗಿ ಈ ಜಲ ಮಾರ್ಗದ ಸರ್ವೆ ನಡೆಸಿ, ಭಾರತ ಸಾಗರಮಾಲಾ ಯೋಜನೆಯಡಿ ಸೇರಿತು ಎಂದು ಆಲಮಟ್ಟಿ ಅರಣ್ಯ ಇಲಾಖೆಯ RFI ಮಹೇಶ ಪಾಟೀಲ ಹೇಳಿದರು.
ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರೀ ಜಲಾಶಯದ ಹಿನ್ನೀರಿನಿಂದ ಬಾಗಲಕೋಟೆಯ ನಡುವೆ ಕೃಷ್ಣಾ ನದಿಯಲ್ಲಿ ಜಲಸಾರಿಗೆ ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮೂಲಭೂತ ಸೌಕರ್ಯ ಕಲ್ಪಿಸಲು 12 ಕೋಟಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮೊದಲ ಹಂತದಲ್ಲಿ ಆಲಮಟ್ಟಿಯಿಂದ ಬೀಳಗಿ ತಾಲೂಕಿನ ಹೆರಕಲ್‌ವರೆಗೆ ಕೃಷ್ಣಾ ನದಿಯಲ್ಲಿ 25 ಕಿಮೀ ಉದ್ದದವರೆಗೆ ಜಲಸಾರಿಗೆ ನಿರ್ಮಾನಗೊಂಡರೆ , ಎರಡನೇ ಹಂತದಲ್ಲಿ ಹೆರಕಲ್ ಮತ್ತು ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ 6 ಕಿಮೀ ಉದ್ದದವರೆಗೆ ಜಲಸಾರಿಗೆ ನಿರ್ಮಾಣಗೊಳ್ಳಲಿದೆ . ಈಗಾಗಲೇ ಮೊದಲ ಹಂತದ ಕಾಮಗಾರಿ ಆರಂಭಗೊಂಡಿವೆ.