ಸ್ಪೂರ್ತಿದಾಯಕ ಕಥೆ ; ದಿನಗೂಲಿ ಮಾಡಿ ಅಣ್ಣನ ಜೊತೆ ಫ್ಯಾಕ್ಟರಿಯಲ್ಲಿ ಬಿಡಿ ಸುತ್ತುತಿದ್ದ ಭಾರತದ ಈ ವ್ಯಕ್ತಿ ಈಗ ಅಮೆರಿಕಾದ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ…..!

ವಾಷಿಂಗ್ಟನ್ :

ಭಾರತದಲ್ಲಿ ಬೀಡಿ ಸುತ್ತುತ್ತಿದ್ದ ಬಾಲಕನೊಬ್ಬ ಅಮೆರಿಕದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಇವರ ಹೆಸರು ಸುರೇಂದ್ರನ್ ಕೆ ಪಟ್ಟೆಲ್‌.

ಜನವರಿ 1 ರಂದು ಟೆಕ್ಸಾಸ್‌ನ ಫೋರ್ಟ್ ಬೆಂಡ್ ಕೌಂಟಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ಪಟ್ಟೆಲ್‌ ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ವರ್ಷ ನವೆಂಬರ್ 8 ರಂದು ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಎಡ್ವರ್ಡ್ ಕ್ರೆನೆಕ್ ಅವರನ್ನು ಸೋಲಿಸಿದರು ಎಂದು ‘ದಿ ವೀಕ್’ ವರದಿ ಮಾಡಿತ್ತು.

ಕಡುಬಡತನದಲ್ಲಿ ಬೆಳೆದ ಸುರೇಂದ್ರನ್‌ ಪಟ್ಟೆಲ್‌
ಕಡು ಬಡತನದ ಕೇರಳದ ಕಾಸರಗೋಡಿನಲ್ಲಿನ ಕುಟುಂಬವೊಂದರಲ್ಲಿ ಜನಿಸಿದರು. ಅವರ ಪೋಷಕರು ದಿನಗೂಲಿ ಕೆಲಸಗಾರರಾಗಿದ್ದು. ಪಟ್ಟೆಲ್ ಶಾಲೆ ಮತ್ತು ಕಾಲೇಜುಗಳಿಗೆ ತೆರಳುತ್ತಿದ್ದಾಗಲೇ ದಿನ ಗೂಲಿ ಕೆಲಸಗಳನ್ನು ಮಾಡುತ್ತಿದ್ದರು.

ಇದಲ್ಲದೆ ಕೂಲಿ ಕೆಲಸ ಮಾಡುತ್ತಿದ್ದ ಸುರೇಂದ್ರನ್‌, ಹಣವನ್ನು ಸಂಪಾದಿಸಲು ತಮ್ಮ ಸಹೋದರಿಯೊಂದಿಗೆ ಕಾರ್ಖಾನೆಯಲ್ಲಿ ಬೀಡಿ ಸುತ್ತುತ್ತಿದ್ದರು. ಅವರು ತಮ್ಮ 10 ನೇ ತರಗತಿಯಲ್ಲಿ ಶಾಲೆಯನ್ನು ತೊರೆದು, ಕೆಲಸ ಮಾಡಲು ಪ್ರಾರಂಭಿಸಿದರು.

ಆ ವರ್ಷದಲ್ಲಿ ಅವರ ಜೀವನದ ದೃಷ್ಟಿಕೋನ ಬದಲಾಯಿತು. ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಲು ಶಾಲೆಗೆ ಮತ್ತೇ ಮರಳಿದರು. ನಂತರ ಕಾಲೇಜು ಸೇರಿದರು. ಮತ್ತೊಂದು ಕಡೆ ಬೀಡಿ ಸುತ್ತುವ ಕೆಲಸವೂ ಮುಂದುವರೆಯಿತು.

  • ವಕೀಲನಾಗುವ  ಸ್ವಪ್ನ..

ಪಟ್ಟೆಲ್‌ರಿಗೆ ವಕೀಲರಾಗುವ ಕನಸು ಇತ್ತು . ಆದರೆ ಅವರಿಗೆ ಮುಂದಿನ ದಾರಿ ತಿಳಿದಿರಲಿಲ್ಲ. ಅವರು ರಾಜಕೀಯ ವಿಜ್ಞಾನ(political science) ಕೋರ್ಸ್ ತೆಗೆದುಕೊಂಡರು. ಆದರೆ, ಕೆಲಸದ ಕಾರಣ ತರಗತಿಗಳನ್ನು ಮಿಸ್‌ ಮಾಡಿಕೊಳ್ಳಬೇಕಿರುವ ಅನಿವಾರ್ಯತೆಯು ಅವರಿಗೆ ಬಂದೊದಗಿತು. ಅವರ ಸಹಪಾಠಿಗಳು ತಮ್ಮ ನೋಟ್ಸ್‌ಗಳನ್ನು ನೀಡಿ ಸಹಾಯ ಮಾಡಿದರು.

ಸುರೇಂದ್ರನ್‌ ಅವರ ನಿರಾಶಾದಾಯಕ ಹಾಜರಾತಿಯು ಪ್ರಾಧ್ಯಾಪಕರನ್ನು ಕೆರಳುವಂತೆ ಮಾಡಿತು. ಅವರನ್ನು ಸೋಮಾರಿ ಎಂದು ಭಾವಿಸಿ ಪರೀಕ್ಷೆಗೆ ಅನುಮತಿಸಬಾರದು ಎಂದು ನಿರ್ಧರಿಸಿದರು.

‘ನಾನು ಬೀಡಿ ಸುತ್ತುವವನು. ಇದನ್ನು ಬಹಿರಂಗವಾಗಿ ಹೇಳಿದರೆ, ನನ್ನ ಮೇಲೆ ಸಹಾನುಭೂತಿ ಬರುತ್ತದೆ. ಇದನ್ನು ಹೊಂದಲು ನಾನು ಇಚ್ಛಿಸಲ್ಲ. ಹಾಗಾಗಿ, ನನಗೆ ಒಂದು ಅವಕಾಶ ನೀಡುವಂತೆ ನಾನು ಪ್ರಾದ್ಯಾಪಕರಲ್ಲಿ ಮನವಿ ಮಾಡಿದ್ದೆ. ಸರಿಯಾಗಿ ಅಂಕಗಳನ್ನು ತೆಗೆದುಕೊಳ್ಳದಿದ್ದರೆ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದೆ’ ಎಂದು ‘ದಿ ವೀಕ್‌’ ಗೆ ಹೇಳಿದ್ದಾರೆ.

  • ಭಾವನಾತ್ಮಕ ಹತಾಶೆ ಮತ್ತು ಖಿನ್ನತೆ….

2007 ರಲ್ಲಿ, ನರ್ಸ್ ಆಗಿದ್ದ ಅವರ ಪತ್ನಿಗೆ ಅಮೆರಿಕದ ಪ್ರಮುಖ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಉದ್ಯೋಗಾವಕಾಶ ಸಿಕ್ಕಿತು. ದಂಪತಿ ಹೂಸ್ಟನ್‌ಗೆ ಹೋಗಲು ನಿರ್ಧರಿಸಿದರು.

ಆಗ ಸುರೇಂದ್ರ ಅವರಿಗೆ ಕೆಲಸ ಇರಲಿಲ್ಲ. ಪತ್ನಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಮಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ಕಿರಾಣಿ ಅಂಗಡಿಯಲ್ಲಿ ದಿನಗೂಲಿ ಕೆಲಸವನ್ನು ತೆಗೆದುಕೊಂಡರು. ಆದರೆ ಅದು ಸುಲಭವಾಗಿರಲಿಲ್ಲ ಎಂದು ಸುರೇಂದ್ರ ಅವರೇ ಹೇಳಿಕೊಂಡಿದ್ದಾರೆ.

‘ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಯಶಸ್ವಿ ವಕೀಲನಾಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬ ಅಂಗಡಿಯಲ್ಲಿ ದಿನಗೂಲಿ ನೌಕರನಾಗಿ ದುಡಿಯುವುದು ಕಷ್ಟವಾಗತೊಡಗಿತು. ನಾನು ಸಾಕಷ್ಟು ಭಾವನಾತ್ಮಕ ಹತಾಶೆ ಮತ್ತು ಖಿನ್ನತೆಯನ್ನು ಅನುಭವಿಸಿದೆ’ ಎಂದು ಹೇಳಿದ್ದಾರೆ.

ಆಗ ಅವರು ಯುಎಸ್‌ನಲ್ಲಿ ಕಾನೂನು ಅಭ್ಯಾಸ ಮಾಡುವ ಸಾಧ್ಯತೆಯನ್ನು ಕಂಡುಕೊಂಡರು. ಬಾರ್ ಪರೀಕ್ಷೆಗೆ ಹಾಜರಾದರು. ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರು. ಅವರು 100 ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದರು. ಆದರೆ, ಸಂದರ್ಶನಕ್ಕೆ ಯಾವುದೇ ಕರೆಗಳು ಬರಲಿಲ್ಲ.

ಆಗ ಅಂತರರಾಷ್ಟ್ರೀಯ ಕಾನೂನು ಅಧ್ಯಯನ ಮಾಡಲು ಹೂಸ್ಟನ್ ವಿಶ್ವವಿದ್ಯಾಲಯಕ್ಕೆ ಸೇರಿದರು. ಅವರು 2011 ರಲ್ಲಿ ಪದವಿ ಪಡೆದರು. ಕೌಟುಂಬಿಕ ಕಾನೂನು, ಕ್ರಿಮಿನಲ್ ರಕ್ಷಣೆ, ಸಿವಿಲ್ ಮತ್ತು ವಾಣಿಜ್ಯ ವ್ಯಾಜ್ಯಗಳು, ರಿಯಲ್ ಎಸ್ಟೇಟ್ ಮತ್ತು ವಹಿವಾಟಿನ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವ ಗುತ್ತಿಗೆ ಕೆಲಸವನ್ನು ವಹಿಸಿಕೊಂಡರು.

  • ಜಿಲ್ಲಾ ನ್ಯಾಯಾಧೀಶನಾಗಿ ಸುರೇಂದ್ರನ್‌ ಆಯ್ಕೆ.

ಪಟೇಲ್ 2017 ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದರು. ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಜಿಲ್ಲಾ ನ್ಯಾಯಾಧೀಶರಾಗಲು ಅವರ ಮೊದಲ ಪ್ರಯತ್ನವನ್ನು 2020 ರಲ್ಲಿ ಮಾಡಿದರು . ಆದರೆ ಅವರು ಯಶಸ್ವಿಯಾಗಿರಲಿಲ್ಲ . ಗುರಿ ಮುಟ್ಟುವ ವರೆಗೂ ನಿಲ್ಲದ ಅವರ ಮತ್ತೇ 2022 ರಲ್ಲಿ ಮತ್ತೆ ಸ್ಪರ್ಧಿಸಲು ಬಯಸಿದರು. ಇದರಲ್ಲಿ ಸುರೇಂದ್ರನ್ ಪಟೇಲ್ ಯಶಸ್ವಿಯೂ ಆದರು. ಈಗ ಅವರು ಅಮೇರಿಕಾದಲ್ಲಿ ಉನ್ನತ ಜಿಲ್ಲಾ ನ್ಯಾಯಾಧೀಶರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button