ಬಯಲಾಗುತ್ತಲೇ ಇದೆ ಸ್ಯಾಂಟ್ರೊ ರವಿ ಕರಾಳ ಮುಖ, ಮುಗಿಯದ ಕಥೆ…!
ಸ್ಯಾಂಟ್ರೋ ರವಿ. ಸದ್ಯ ಈ ಹೆಸರು ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈತನ ಬಗ್ಗೆ ಹೇಳಲು ಶುರುಮಾಡಿದ್ರೆ ಕೊನೆಯಿಲ್ಲ. ಎಷ್ಟು ಹೇಳಿದ್ರೂ ಮುಗಿಯುತ್ತಿಲ್ಲ. ಮಹಾ ಪಾಕಡಾ ಸ್ಯಾಂಟ್ರೋ ರವಿಯ ಲೀಲೆಗಳು ಒಂದಲ್ಲ ಎರಡಲ್ಲ, ಬಗೆದಷ್ಟೂ ರೋಚಕ ಭಯಾನಕ ಮುಖ ತೆರೆದುಕೊಳ್ಳುತ್ತಲೇ ಇದೆ.. ಸ್ಯಾಂಟ್ರೋ ರವಿಯ ಪಲ್ಲಂಗ ಸೇವೆಯ ಕರಾಳ ಕಥೆಗಳು ಹೊರಬರ್ತಿವೆ.
ಸ್ಯಾಂಟ್ರೋ ರವಿಯ ಲೀಲೆಗಳು ಒಂದಲ್ಲ ಎರಡಲ್ಲ, ಬಗೆದಷ್ಟೂ ಈ ರೋಚಕ ಭಯಾನಕ ಮುಖ ತೆರೆದುಕೊಳ್ಳುತ್ತಲೇ ಇವೆ. ಗರ್ಲ್ಸ್ ಸಪ್ಲೈಗೆ ‘ಕಾರ್ ಕೋಡ್‌ವರ್ಡ್’ಗಳನ್ನ ಇಟ್ಟಿದ್ದ ಈ ಸ್ಯಾಂಟ್ರೋ ರವಿ ಹುಡುಗಿಯರಿಗೆಲ್ಲಾ ಅಡ್ಡ ಹೆಸರಿನಲ್ಲಿ ಕರೆಯುತ್ತಿದ್ದನಂತೆ.
ಸ್ಯಾಂಟ್ರೋ ರವಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹುಡುಗಿಯರ ಫೋಟೋ ಶೇರ್ ಮಾಡಿ ಒಬ್ಬರನ್ನ ಚಿನ್ನು, ಇನ್ನೊಬ್ಬರನ್ನ ವಿಜಯಲಕ್ಷ್ಮೀ, ಮತ್ತೊಬ್ಬರನ್ನ ಬಂಗಾರ ಎಂದು ಹೀಗೆ ಈತನ ವ್ಯಾಪ್ತಿಯಲ್ಲಿರುವ ಎಲ್ಲಾ ಹುಡುಗಿಯರಿಗೆ (ಕೋಡ್ ವರ್ಡ್) ಅಡ್ಡಹೆಸರಿನಲ್ಲಿ ಕರೆಯುತ್ತಿದ್ದನಂತೆ. ಈತನ ಕಾಂಟ್ಯಾಕ್ಟ್‌ನಲ್ಲಿರೋ ಹಿರಿಯ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ದೊಡ್ಡ ದೊಡ್ಡವರು ಫೋಟೋ ನೋಡಿ ಸೆಲೆಕ್ಟ್ ಮಾಡ್ತಿದ್ರಂತೆ. ಆಮೇಲೆ ಶುರುವಾಗ್ತಿತ್ತಂತೆ ಈ ಸ್ಯಾಂಟ್ರೋ ರವಿಯ ಆಟ.
ಲೋಕಲ್ ಮಾತ್ರವಲ್ಲ, ಫಾರಿನ್ ಹುಡುಗಿಯರ ಸಪ್ಲೈ ಮಾಡ್ತಿದ್ದ ಅನ್ನೋ ಸತ್ಯ ಬಯಲು!
ಈತನ ನೆಟ್‌ವರ್ಕ್ ಎಷ್ಟು ದೊಡ್ಡದಾಗಿದೆ ಅಂದ್ರೆ, ವಿದೇಶದಲ್ಲೂ ಈತ ಲಿಂಕ್ ಹೊಂದಿದ್ದ ಎನ್ನಲಾಗಿದೆ. ತನ್ನ ಕಸ್ಟಮರ್‌ಗಳಿಗೆ ಸರ್ವಿಸ್ ಕೊಡಲು ಬರೀ ಲೋಕಲ್ ಹುಡುಗಿಯರು ಮಾತ್ರವಲ್ಲ, ರಷ್ಯಾ ಮತ್ತು ಇರಾನ್, ದೆಹಲಿ, ಮುಂಬೈ ಕೋಲ್ಕತ್ತಾ ಹೀಗೆ ಹಲವಾರ ವಿದೇಶದಿಂದಲೂ ಯುವತಿಯರನ್ನ ಕರೆಸ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.
ಐಷಾರಾಮಿ ಮನೆಗಳೇ ಈತನ ವೇಶ್ಯಾವಾಟಿಕೆ ಅಡ್ಡೆಗಳು.
ಮೊಬೈಲ್ ಫೋನಲ್ಲೇ ಚೆಂದದ ಯುವತಿಯರು ಬುಕಿಂಗ್ ಆಗ್ತಿದ್ರೆ, ದೊಡ್ಡ ದೊಡ್ಡ ಬಂಗಲೆ, ಡ್ಯೂಪ್ಲೆಕ್ಸ್ ಮನೆಗಳು, ಪೆಂಟ್‌ಹೌಸ್‌ಗಳು, ವಿಲ್ಲಾಗಳು ಹೀಗೆ, ಐಷಾರಾಮಿ ಮನೆಗಳನ್ನ ಬಾಡಿಗೆ ಪಡೀತಿದ್ದನಂತೆ. ಇದೇ ಐಷಾರಾಮಿ ಮನೆಗಳನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡು ಪಲ್ಲಂಗ ಸೇವೆಗೆ ವ್ಯವಸ್ಥೆ ಮಾಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿವೆ.
ದಂಧೆಗೆ ಸಹಕರಿಸಿದ ಯುವತಿಯರಿಗೆ ದುಬಾರಿ ಗಿಫ್ಟ್ ಕೊಡ್ತಿದ್ದ!
ಚೆಂದದ ಯುವತಿಯರನ್ನ ಬಳಸಿಕೊಂಡು ಈ ಜಗತ್ ಕಿಲಾಡಿ ಸ್ಯಾಂಟ್ರೋ ರವಿ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಸಾಧಿಸ್ತಿದ್ದ.. ತನ್ನ ಬ್ಯುಸಿನೆಸ್‌ಗೆ ಸಹಕರಿಸಿದ್ದ ಯುವತಿಯೊಬ್ಬಳಿಗೆ ಬರೋಬ್ಬರಿ 1 ಲಕ್ಷ 83 ಸಾವಿರ ರೂಪಾಯಿ ಮೌಲ್ಯದ ರ್ಯಾಡೋ ವಾಚ್‌ನ್ನು ಸ್ಯಾಂಟ್ರೋ ರವಿ ಗಿಫ್ಟ್ ಮಾಡಿದ್ದನಂತೆ.. ಯುವತಿ ಜೊತೆಗೆ ವಾಚ್ ಖರೀದಿಸುವ ಫೋಟೋ, ದೃಶ್ಯವನ್ನೂ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದನಂತೆ.
ಇಷ್ಟೇ ಅಲ್ಲ , ಸ್ಯಾಂಟ್ರೋ ರವಿ ವಿರೋಧಿಗಳನ್ನ ಹೆದರಿಸಲು ಪಿಸ್ತೂಲಿನ ಫೋಟೋಗಳನ್ನ ಕೂಡ ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ್ದ. ಪಾಯಿಂಟ್ 32 ,ಕಪ್ಪು ಬಣ್ಣದ ಪಿಸ್ತೂಲು ಮತ್ತು ಬುಲೆಟ್‌ಗಳ ಫೋಟೋವನ್ನ ಶೇರ್ ಮಾಡಿದ್ದ. ಇನ್ನು ಸ್ಯಾಂಟ್ರೋ ರವಿಯ ಅಸಲಿ ನಾಮ K.S. ಮಂಜುನಾಥ್. ಅಷ್ಟೇ ಅಲ್ಲ K.S. ಮಂಜುನಾಥ್ ಎಂಬ ನಿಜ ನಾಮದಿಂದ ಪತ್ರಕರ್ತನ ಐಡಿ ಕಾರ್ಡ್ ಕೂಡ ಪತ್ತೆಯಾಗಿದೆ. ‘ಸಂಚಲನ ಅನ್ನೋ ವಾರಪತ್ರಿಕೆ’ಯ Sub Editer ಎಂದು ಐಡಿ ಕಾರ್ಡ್ ಮೇಲೆ ನಮೂದಾಗಿದೆ. ಹೀಗಾಗಿ, ಪತ್ರಕರ್ತನ ಸೋಗಿನಲ್ಲೂ ಸ್ಯಾಂಟ್ರೋ ರವಿ ವಂಚನೆ ಮಾಡಿದ್ದಾನಾ ಅನ್ನೋ ತನಿಖೆ ನಡೆಯುತ್ತಿದೆ.
ವಿವಾದದಲ್ಲಿ ಹೆಸರು ಹೊರಬರುತ್ತಿದ್ದಂತೆ ಸ್ಯಾಂಟ್ರೋ ರವಿ ನಾಪತ್ತೆಯಾಗಿದ್ದಾನೆ. 6 ದಿನಗಳು ಕಳೆದ್ರೂ ಸ್ಯಾಂಟ್ರೋ ರವಿ ಪತ್ತೆಯಿಲ್ಲ. ಪೊಲೀಸರು ಕೂಡ ಸ್ಯಾಂಟ್ರೋ ರವಿ ಬಂಧನಕ್ಕೆ ಬಲೆ ಬೀಸಿದ್ದಾರೆ.