ಊರಿನ ಮುಖಂಡರಿಂದ ಕವಿ ಶ್ರೀ ಸಿದ್ರಾಮ ಅವರಿಗೆ ಸನ್ಮಾನ…!
ಬಾದಾಮಿ ( ಜನವರಿ 09) :
ಅಮೀನಗಡ ಪಟ್ಟಣದ ನಾಟಕ ರಚನೆಗಾರ,ಕವಿ, ನಟರಾದ ಹಾಗೂ ಪಟ್ಟಣದಲ್ಲಿ ಕವಿ ಎಂದೇ ಕರೆಯಲ್ಪಡುವ ಶ್ರೀ ಸಿದ್ರಾಮ. ತತ್ರಾಣಿ ಇವರು ಬಾದಾಮಿಯಲ್ಲಿ ನಡೆದ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ನಿಮಿತ್ತವಾಗಿ ನಡೆದ ‘ಕುಂಟ ಕೋಣ – ಭಾಗ 2 ‘ ಎಂಬ ನಾಟಕದಲ್ಲಿ ಹಾಸ್ಯ ನಟನಾಗಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದು , ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .

ಈ ಮೂಲಕ ಊರಿನ ಮುಖಂಡರು, ಗಣ್ಯರು ಇವರನ್ನು ಹಾರೈಸಿದ್ದು ಪ್ರೋತ್ಸಾಹಿಸಿ, ಸನ್ಮಾನಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಹಾಗೂ ಕೆಲವು ಸಿನಿಮಾಗಳಲ್ಲು ನಟಿಸಿರುವ ನಟಿ ಶ್ರೀ ಮತಿ ನಯನ ಅವರೂ ಕೂಡಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರು ಶ್ರೀ S. ತತ್ರಾಣಿ, ರವಿ ಅನ್ವಾಲ್ ಮತ್ತು ಇತರರು ಉಪಸ್ಥಿತರಿದ್ದರು..