ವಿರಾಟ್ ಕೊಹ್ಲಿ : ದಾಖಲೆ ವೀರ ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ…!

ಗುವಾಹಟಿ :

ಗುವಾಹಟಿಯ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ (ACA Stadium)  ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ತನ್ನ 50 ಓವರ್‌ಗಳಲ್ಲಿ 373/7 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ರೋಹಿತ್‌ ಶರ್ಮಾ (83) ಮತ್ತು ಶುಭಮನ್‌ ಗಿಲ್‌ (70) ಮೊದಲ ವಿಕೆಟ್‌ಗೆ 143 ರನ್‌ಗಳ ಜೊತೆಯಾಟವಾಡಿ ಭಾರತದ ಬೃಹತ್‌ ಮೊತ್ತಕ್ಕೆ ಭದ್ರ ಅಡಿಪಾಯ ಹಾಕಿದರು.

 

ಮೊದಲ ವಿಕೆಟ್ ನಂತರ ಬಂದ ವಿರಾಟ್ ಅತ್ಯುತ್ತಮ ಆಟವಾಡಿದರು. ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ್ದಂತಿದ್ದ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದ ಪಿಚ್‌ನಲ್ಲಿ ಮನಮೋಹಕ ಆಟವಾಡಿದ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನ 73ನೇ ಶತಕ ಬಾರಿಸಿದರು. ಏಕದಿನ ಕ್ರಿಕೆಟ್‌ ಒಂದರಲ್ಲೇ ವಿರಾಟ್‌ 44 ಶತಕಗಳನ್ನು ಸಿದಿಸಿದ್ದರು ಇವತ್ತಿನ ಪಂದ್ಯದಲ್ಲಿ ವಿರಾಟ್ ಇನ್ನೊಂದು ಸೆಂಚುರಿ ಸಿಡಿಸುವ ಮೂಲಕ 45 ಕ್ಕೆ ಎರಿಸಿಕೊಂಡಿದ್ದಾರೆ.

 

ಓಪನರ್‌ಗಳ ನಿರ್ಗಮನದ ಬಳಿಕ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಡುವ ಜವಾಬ್ದಾರಿ ಹೊತ್ತು ಬ್ಯಾಟ್‌ ಬೀಸಿದ ವಿರಾಟ್‌ ಕೊಹ್ಲಿ, ಇನಿಂಗ್ಸ್‌ ಮಧ್ಯದಲ್ಲಿ ಸಿಕ್ಕ ಒಂದೆರಡು ಜೀವದಾನಗಳ ಸಂಪೂರ್ಣ ಲಾಭ ತೆಗೆದುಕೊಂಡು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿನ 73ನೇ ಶತಕ ಸಿಡಿಸಿದರು. ಏಕದಿನ ಕ್ರಿಕೆಟ್‌ ಒಂದರಲ್ಲೇ ಕೊಹ್ಲಿ ಬಾರಿಸಿದ 45ನೇ ಶತಕ ಇದಾಗಿದೆ. ಬಿರುಸಿನ ಬ್ಯಾಟಿಂಗ್‌ ನಡೆಸಿದ ಕೊಹ್ಲಿ, ಎದುರಿಸಿದ 87 ಎಸೆತಗಳಲ್ಲಿ 12 ಫೋರ್‌ ಮತ್ತು 1 ಸಿಕ್ಸರ್‌ಗಳೊಂದಿಗೆ 113 ರನ್‌ ಸಿಡಿಸಿ 49ನೇ ಓವರ್‌ನಲ್ಲಿ ಔಟಾದರು.

 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ವರ್ಷಗಳ ಕಾಲ ಶತಕದ ಬರ ಎದುರಿಸಿದ್ದ ಕೊಹ್ಲಿ ಇದೀಗ ತಮ್ಮ ಬರವನ್ನು ನೀಗಿಸಿಕೊಂಡಿದ್ದಾರೆ. 2023ರ ವರ್ಷದ ಆಟವನ್ನು ಶತಕದೊಂದಿಗೆ ಆರಂಭಿಸಿರುವ ವಿರಾಟ್‌, ಮುಂದೆ ನಡೆಯುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅಬ್ಬರಿಸುವ ಸುಳಿವು ನೀಡಿದ್ದಾರೆ. ಪ್ರವಾಸಿ ಶ್ರೀಲಂಕಾ ಎದುರು ನಡೆಯುತ್ತಿರುವ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಮೂರಂಕಿಯ ಸ್ಕೋರ್‌ ಮಾಡಿದ ವಿರಾಟ್‌ ಹಲವು ದಾಖಲೆಗಳನ್ನು ಬರೆದಿದ್ದಾರೆ.ಅಲ್ಲದೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಮೊದಲಿನಿಂದಲೂ ಇದ್ದ ದೊಡ್ಡ ದಾಖಲೆ ಒಂದನ್ನು ಅಳಿಸಿ ಹಾಕಿ ಈಗ ತಮ್ಮದಾಗಿಸಿಕೊಂಡಿದ್ದಾರೆ ಹಾಕಿದ್ದಾರೆ.

ಅಂದಹಾಗೆ ಶ್ರೀಲಂಕಾ ಎದುರು ಕೊಹ್ಲಿ ಬಾರಿಸಿದ 9ನೇ ಏಕದಿನ ಶತಕ ಇದಾಗಿದೆ. ಈ ಮೂಲಕ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿದ್ದ ಬಹುದೊಡ್ಡ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 8 ಶತಕಗಳೊಂದಿಗೆ ಶ್ರೀಲಂಕಾ ಎದುರು ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಕ್ರಿಕೆಟ್ ದೇವರು ಸಚಿನ್‌ ತೆಂಡೂಲ್ಕರ್‌ ಹೊಂದಿದ್ದರು. ಈಗ ಈ ದಾಖಲೆ ಕ್ರಿಕೆಟ್ ಲೋಕದ ಕಿಂಗ್ ಕೊಹ್ಲಿ ಪಾಲಾಗಿದೆ. 2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಎದುರು ಮಿಂಚಿನ ಶತಕ ಬಾರಿಸಿದ್ದ ವಿರಾಟ್‌, ಇದೀಗ ಶ್ರೀಲಂಕಾ ಬ್ಯಾಕ್‌ ಟು ಬ್ಯಾಕ್‌ ಶತಕದ ಸಿಡಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button