40 ವರ್ಷ ಬಾಹ್ಯಕಾಶದಲ್ಲಿದ್ದ ನಾಸಾದ ಅತ್ಯಂತ ಹಳೆಯ ಉಪಗ್ರಹ ಭೂಮಿಗೆ ಬಿದ್ದಿದೆ…!

 

ಅಮೆರಿಕ (ಕೇಪ್ ಕ್ಯಾನವೆರಲ್) ಜನವರಿ 10:


ಭೂಮಿಯ ಸುತ್ತ ಸುತ್ತ ಸುಮಾರು 40 ‌ ವರ್ಷಗಳ ಕಾಲ ಸುತ್ತುತ್ತಿದ್ದ, ನಿಷ್ಕ್ರಿಯ ಉಪಗ್ರಹವು ನಿರೀಕ್ಷೆಯಂತೇ ಭೂಮಿಗೆ ಬಿದ್ದಿದೆ ಎಂದು ನಾಸಾ ಮಂಗಳವಾರ ತಿಳಿಸಿದೆ.

1984 ರಲ್ಲಿ ಭೂ ಕಕ್ಷೆ ಸೇರಿದ್ದ ಉಪಗ್ರಹವು ಅಲಾಸ್ಕಾದಿಂದ ಕೆಲವು ನೂರು ಮೈಲುಗಳಷ್ಟು ದೂರದ ಬೇರಿಂಗ್ ಸಮುದ್ರಕ್ಕೆ ಭಾನುವಾರ ತಡರಾತ್ರಿ ಬಿದ್ದಿದೆ ಎಂದು ರಕ್ಷಣಾ ಇಲಾಖೆ ದೃಢಪಡಿಸಿತು . ಅದರ ಅವಶೇಷಗಳಿಂದ ಯಾರಿಗೂ ಕೂಡ ಹಾನಿಯಾಗಿಲ್ಲ ಎಂದು ಕೂಡ ನಾಸಾ ಸ್ಪಷ್ಟಪಡಿಸಿದೆ .

ಉಪಗ್ರಹದ ತೂಕ :

ಈ ಉಪಗ್ರಹವು ಒಟ್ಟು 2,450 ಕಿಲೋ ಗ್ರಾಂ ತೂಕ ಇದ್ದು,ಭೂಮಿಗೆ ಬೀಳುತ್ತಿರುವುದಾಗಿ ನಾಸಾ ಕಳೆದ ವಾರವೇ ಹೇಳಿತ್ತು ಮತ್ತು ಭೂಮಿಯ ವಾತಾವರಣ ಪ್ರವೇಶಿಸುತ್ತಲೇ ಉಪಗ್ರಹ ಉರಿದುಹೋಗಲಿದೆ ಎಂದು ಕೂಡ ತಿಳಿಸಿತ್ತು. ಅದರ ಕೆಲವು ತುಣುಕುಗಳು ಯಾರಿಗಾದರೂ ತೊಂದರೆ ಕೊಟ್ಟರೂ ಕೊಡಬಹುದು ಎಂದು ಮುನ್ನೆಚ್ಚರಿಕೆಯನ್ನೂ ನೀಡಿತ್ತು. ಈಗ ಅವರು ಹೇಳಿದಂತೆ ಯಾವುದೇ ಸಮಸ್ಯೆಗಳಿಲ್ಲದೇ ಉಪಗ್ರಹವು ಸಾಗರದಲ್ಲಿ ತೆಕ್ಕೆಗೆ ಬಿದ್ದಿದೆ.

ಉಪಗ್ರಹ ಹಾರಿ ಬಿಟ್ಟ ಕಾರಣ :

ERBS ಎಂದು ಕರೆಯಲಾಗುವ ‘ಅರ್ತ್‌ ರೇಡಿಯೇಷನ್‌ ಬಜೆಟ್‌ ಸ್ಯಾಟಿಲೆಟ್‌’ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್‌ ಮೂಲಕ ಬಾಹ್ಯಾಕಾಶಕ್ಕೆ ಹಾರಿಸಲಾಗಿತ್ತು. ಅದರ ನಿರೀಕ್ಷಿತ ಜೀವಿತಾವಧಿಯು ಎರಡು ವರ್ಷಗಳಷ್ಟೇ ಆಗಿದ್ದವು. ಆದರೆ, 2005ರಲ್ಲಿ ನಿಷ್ಕ್ರಿಯವಾದ ಉಪಗ್ರಹ, ಅಲ್ಲಿಯವರೆಗೂ ಓಝೋನ್ ಮತ್ತು ವಾತಾವರಣದ ಇತರ ಮಾಪನಗಳನ್ನು ಮಾಡುತ್ತಲೇ ಇತ್ತು. ಭೂಮಿಯು ಸೂರ್ಯನಿಂದ ಹೀರಿಕೊಳ್ಳುವ ಶಕ್ತಿ ಮತ್ತು ಹೊರಸೂಸುವ ಶಕ್ತಿಯನ್ನು ಅಧ್ಯಯನ ಮಾಡುವ ಉಪಗ್ರಹವನ್ನು ‘ಅರ್ತ್‌ ರೇಡಿಯೇಷನ್‌ ಬಜೆಟ್‌ ಸ್ಯಾಟಿಲೆಟ್‌’ ಎನ್ನಲಾಗುತ್ತದೆ. ಅದನ್ನೇ ಈ ಉಪಗ್ರಹವೂ ಮಾಡಿತ್ತು.

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button