ಬೆಂಗಳೂರು : HBR ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕಬ್ಬಿಣದ ರಾಡುಗಳು ಬಿದ್ದು ತಾಯಿ- ಮಗು ಸಾವು…!
ಬೆಂಗಳೂರು ( ನಾಗವಾರ) ಜನವರಿ 10 :
ಮಂಗಳವಾರ HBR ಲೇಔಟ್ ಬಳಿಯ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ರಸ್ತೆಯಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ಹೊರಟಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಒಂದು ಕುಟುಂಬವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅದರಲ್ಲಿ, ಮಹಿಳೆ ಮತ್ತು ಆಕೆಯ ಮೂರು ವರ್ಷದ ಮಗ ಮೃತಪಟ್ಟರೆ, ಆಕೆಯ ಪತಿ ಮತ್ತು ಮತ್ತೊಬ್ಬ ಮಗ ಗಾಯಗೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತರನ್ನು 25 ವರ್ಷದ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗ ವಿಹಾನ್ ಎಂದು ಗುರುತಿಸಲಾಗಿದೆ. ಸಿವಿಲ್ ಎಂಜಿನಿಯ ಲೋಹಿತ್ ಕುಮಾರ್ ತನ್ನ ಪತ್ನಿ ತೇಜಸ್ವಿನಿಯನ್ನು ಕೆಲಸಕ್ಕೆ ಮತ್ತು ಮಕ್ಕಳನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಬಿಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಹಿತ್ ಕುಮಾರ್ ಮತ್ತು ಇನ್ನೊಬ್ಬ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದು. ತೇಜಸ್ವಿನಿ ಮತ್ತು ವಿಹಾನ್ ತಲೆಗೆ ತೀವ್ರ ರಕ್ತಸ್ರಾವದಿಂದ ತೀವ್ರ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ತೇಜಸ್ವಿನಿ ಅವರು ಮೂಲತಃ ಧಾರವಾಡದವರಾಗಿದ್ದರು.
ಈ ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದಿಂದ ನಿರ್ಮಾಣ ಕಾರ್ಯದ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುವುದಾಗಿ ಹೇಳಿದರು. ಪೊಲೀಸರು. ಹೆಚ್ಚಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.