ತಿಮ್ಮಾಪುರದಲ್ಲಿ ಹೃದಯ ವಿದ್ರಾವಕ ಘಟನೆ ; ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ಕೊನೆಗೆ ತಾನು ವಿಷ ಕುಡಿದು ಆತ್ಮಹತ್ಯೆ…..!
ಮಾವಿನಹಣ್ಣಿನ ರಸದಲ್ಲಿ ರಾಸಾಯನಿಕ ಬೆರೆಸಿ ತನ್ನ ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ನಂತರ ತಾಯಿಯೂ ಅದೇ ವಿಷದ ಪಾನಿಯವನ್ನು ಕುಡಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಬಾಗಲಕೋಟೆ ,ತಿಮ್ಮಾಪುರ ( ಜನವರಿ 12 ) :
ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು 28 ವರ್ಷದ ತಾಯಿ ರೇಖಾ ಬಗಲಿ, ಮಕ್ಕಳಾದ 7 ವರ್ಷದ ಸನ್ನಿಧಿ, 4 ವರ್ಷದ ಸಮೃದ್ಧಿ ಹಾಗೂ 2 ವರ್ಷದ ಶ್ರೀನಿಧಿ ಎಂದು ತಿಳಿದುಬಂದಿದೆ.
ಮಾನಸಿಕವಾಗಿ ಬಳಲಿದ್ದ ರೇಖಾ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ಬೆಳೆಸೋದು, ಓದಿಸೋದು ಮತ್ತು ಮುಂದೆ ಅವರ ಮದುವೆ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿತ್ತು. ಬುಧವಾರ ಬೆಳಿಗ್ಗೆ ಬಹಳ ಹೊತ್ತಿನಿಂದ ಮನೆಯ ಬಾಗಿಲು ತೆರೆಯದ್ದರಿಂದ ಪಕ್ಕದ ಮನೆಯವರು ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದಿದೆ.
ಪಕ್ಕದ ಮನೆಯವರು ಮನೆ ಬಾಗಿಲು ಮುರಿದು ಒಳಗೆ ಹೋದಾಗ 2 ವರ್ಷ ಮಗು ಶ್ರೀನಿಧಿ ಮಾತ್ರ ಬದುಕಿದ್ದಳು ಎಂದು ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಿದೆ ಮೃತಳಾಗಿದ್ದಾಳೆ ಎನ್ನಲಾಗಿದೆ.
ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಈ ವಿಷಯವಾಗಿ ನವನಗರದಲ್ಲಿ ಎಸ್. ಪಿ. ಜಯಪ್ರಕಾಶ್ ಅವರು ” ಮನೆಯಲ್ಲಿ ಮಾಜ (maaza) ಬಾಟಲ್ ಸಿಕ್ಕಿದ್ದು ಅದರಲ್ಲಿ ವಿಷ ಬೇರಿಸಿ ಕುಡಿದಿದ್ದಾರೆ ” ಎಂದು ಹೇಳಿಕೆ ನೀಡಿದ್ದಾರೆ