21 ರ ಯುವತಿ ದಿನಕ್ಕೆ 7000 , ಐಷಾರಾಮಿ ಜೀವನ….!
ಕೊಚ್ಚಿ (ಜನವರಿ 13) :
ಎರ್ನಾಕುಲಂನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಿಂದ, ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೂ ಅಪಾಯಕಾರಿ MDMA ಡ್ರಗ್ಸ್ ಮಾರಾಟ ಮಾಡುತ್ತಿದ್ದಳು, ಈಕೆ ವಯಸ್ಸು 21 ವರ್ಷ ವಾಗಿದ್ದು ಯುವತಿಯ ಹೆಸರನ್ನು ಬೈಸ್ಸಿಎಂದು ಗುರುತಿಸಲಾಗಿದ್ದು ಈಗ ಪೋಲಿಸರ ಅತಿಥಿಯಾಗಿದ್ದಾಳೆ.
ತಿಂಗಳುಗಳ ಸುಧೀರ್ಘ ತನಿಖೆಯ ನಂತರ ಕೇರಳದ ಅಬಕಾರಿ ಅಧಿಕಾರಿಗಳು ಯುವತಿಯನ್ನು ಬಂಧಿಸಿದ್ದು,
ಆರೋಪಿಯನ್ನು ಕೊಲ್ಲಂ ಮೂಲಕ ಬೈಸ್ಸಿ ಎಂದು ಗುರುತಿಸಲಾಗಿದೆ. ಈಕೆ ಎರ್ನಾಕುಲಂನ ಖಾಸಗಿ ಕಾಲೇಜಿನ ಓದುತ್ತಿದ್ದು.ಡ್ರಗ್ಸ್ಅನ್ನು ಬೇಕಾಗಿರುವವರಿಗೆ , ಲೋಕೇಶ ಎಂಬ ಯುವಕನ ಸ್ಕೂಟರ್ ಮೂಲಕ ತಲುಪಿಸುತ್ತಿದ್ದಳು. ಒಟ್ಟು 7 ಮಂದಿ ಈ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು ಇದೀಗ ಅಬಕಾರಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬೆಸ್ಸಿ ಓರ್ವ ಮೀನುಗಾರನ ಮಗಳು. ವಾಯುಯಾನ ಕೋರ್ಸ್ ಮಾಡಲೆಂದು ಕೊಚ್ಚಿಗೆ ಬಂದ ಈಕೆ, ತರಗತಿಗೆ ಹೋಗದೆ ಸ್ಪಾ ನಲ್ಲಿ ಕೆಲಸಕ್ಕೆ ಸೇರಿಕೊಂಡಳು, ಕೆಲಸ ಕಳೆದುಕೊಂಡಾಗ ಆಕೆ ಡ್ರಗ್ಸ್ ವ್ಯವಹಾರಕ್ಕೆ ಸೇರಿಕೊಂಡಳು. ಕೋಯಿಕ್ಕೋಡ್ ಮೂಲದವರೊಬ್ಬರು ಆಕೆಗೆ ಫ್ಲ್ಯಾಟ್ ಅನ್ನು ಬಾಡಿಗೆಗೆ ನೀಡಿದ್ದರು. ಇದಲ್ಲದೇ ಎರಡು ಫ್ಲ್ಯಾಟ್ ಗಳನ್ನೂ ಬಾಡಿಗೆಗೆ ಪಡೆದಿದ್ದಾರೆ. ಇನ್ನಷ್ಟು ಮಂದಿ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.ಮಂಗಳವಾರ ಆಕೆಯ ಮನೆಗೆ ತೆರಳಿ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಒಂದು ದಿನಕ್ಕೆ 7 ಸಾವಿರ ಸಂಪಾದನೆ ಮಾಡುತಿದ್ದ ಈಕೆ, ಪ್ರತಿದಿನ ತಡರಾತ್ರಿ 2.30ಕ್ಕೆ ಡ್ರಗ್ಸ್ ವ್ಯವಹಾರ ಶುರು ಮಾಡಿ ಬೆಳಗ್ಗೆ 7 ಗಂಟೆಗೆ ಅಷ್ಟರಲ್ಲಿ ಮುಗಿಸುತ್ತಿದ್ದಳು. ಕನಿಷ್ಠ 7 ಸ್ಥಳಗಳಿಗೆ ಪ್ರತಿದಿನ ಡ್ರಗ್ಸ್ ಪೂರೈಸುತ್ತಿದ್ದಳು. ದಿನಕ್ಕೆ 7 ಸಾವಿರ ರೂ. ಸಂಪಾದನೆ ಮಾಡುತ್ತಿದ್ದ ಈಕೆ ಐಷಾರಾಮಿ ಜೀವನ ಸಾಗಿಸುತ್ತಿದ್ದಳು, ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಕುಟುಂಬದ ಬಳಿ ಸುಳ್ಳು ಹೇಳಿಕೊಂಡು ಅವರನ್ನು ಯಾಮರಸುತಿದ್ದಳು. ತನ್ನ ಕೆಲಸ ಮುಗಿಸಿದ ಬಳಿಕ ಇಡೀ ದಿನ ಮಲಗುತ್ತಿದ್ದಳು.
ಕಲೂರಿನಲ್ಲಿ MDMA ಸಮೇತ ಸಿಕ್ಕಿಬಿದ್ದ ಯುವಕನಿಂದ ದೊರೆತ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಿದಾಗ ಬೆಸ್ಸಿ ಸಿಕ್ಕಿಬಿದ್ದಿದ್ದಾಳೆ,ಪ್ರತಿದಿನ ಇನ್‌ಸ್ಟಾಗ್ರಾಂ ಮೂಲಕ ವ್ಯವಹಾರವನ್ನು ನಡೆಸುತ್ತಿದ್ದರು. ಪೊಲೀಸರಿಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ಹೆಚ್ಚಾಗಿ ಸಿಮ್ ಬಳಸದೇ ಹಾಟ್‌ಸ್ಪಾಟ್ ಮೂಲಕ ನೆಟ್ ಬಳಸುತ್ತಿದ್ದಳು. ಸದ್ಯ ಕ್ಲಿಪ್ಪಿಯನ್ನು ಬಂಧಿಸಲಾಗಿದ್ದು, ಆಕೆಯ ವಿಚಾರಣೆ ಬಳಿಕ ಇನ್ನಷ್ಟು ಮಹತ್ವದ ಮಾಹಿತಿ ಅಬಕಾರಿ ಅಧಿಕಾರಿಗಳಿಗೆ ಸಿಗುವ ಸಾಧ್ಯತೆ ಇದೆ.