ಬ್ಯಾಂಕ್ ವಹಿವಾಟು 28 ರ ಒಳಗೆ ಬಗೆಹರಿಸಿ ಕೊಳ್ಳಿ, ದೇಶದಾದ್ಯಂತ ಬ್ಯಾಂಕ್ ನೌಕರರ ಮುಷ್ಕರ….!
ಮುಂಬೈ ( ಜನವರಿ 13 ) :
ಜನವರಿ 28 ರಿಂದ ಜನವರಿ 31 ರವರೆಗೆ ದೇಶಾದ್ಯಂತ ಬ್ಯಾಂಕಿಂಗ್ ಕೆಲಸದಲ್ಲಿ ವ್ಯತ್ಯಯ. ಆದ್ದರಿಂದ ,ಈ ತಿಂಗಳ ಕೊನೆಯಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ಅದನ್ನು ಮೊದಲೇ ಬಗೆಹರಿಸಿಕೊಳ್ಳಿ
ಬ್ಯಾಂಕ್ ಗ್ರಾಹಕರೇ, ಒಂದು ವೇಳೆ ಈ ತಿಂಗಳ ಕೊನೆಯಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ಅದನ್ನು ಈಗಲೇ ಬಗೆಹರಿಸಿಕೊಳ್ಳಿ. ಏಕೆಂದರೆ, ಜನವರಿ 28 ರಿಂದ ಜನವರಿ 31 ರವರೆಗೆ, ಬ್ಯಾಂಕಿಂಗ್ ಕೆಲಸವನ್ನು ನಿಭಾಯಿಸುವಲ್ಲಿ ವ್ಯತ್ಯಯವನ್ನು ಕಾಣಬಹುದು. ಏಕೆಂದರೆ, ಬ್ಯಾಂಕ್ ಒಕ್ಕೂಟ ( ಬ್ಯಾಂಕ್ ಯೂನಿಯನ್) 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿದೆ.
ಮುಂಬೈನಲ್ಲಿ ನಡೆದ UFBU (ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ) ಸಭೆಯಲ್ಲಿ ತಮ್ಮ ಬೇಡಿಕೆ ಈಡೇರಿಕೆಗೆ ಎರಡು ದಿನಗಳ ಕಾಲ ಮುಷ್ಕರ ನಡೆಸಲು ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸುತ್ತಿವೆ.
ಬೇಡಿಕೆ ಏನು?
ಈ ಕುರಿತು ಮಾತನಾಡಿದ ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ C.H.ವೆಂಕಟಾಚಲಂ, ‘ಯುನೈಟೆಡ್ ಫೋರಂನ ಸಭೆ ನಡೆಸಲಾಗಿದ್ದು, 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ‘ ಎಂದು ತಿಳಿಸಿದ್ದಾರೆ. “ವಾರಕ್ಕೆ 5 ದಿನಗಳ ಕಾಲ ಬ್ಯಾಂಕಿಂಗ್ ಕೆಲಸ ಮಾಡಬೇಕು” ಎಂಬುದು ಬ್ಯಾಂಕ್ ಒಕ್ಕೂಟಗಳ ಬೇಡಿಕೆಯಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಪಿಂಚಣಿಯನ್ನೂ ಸಹ ನವೀಕರಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ
ಇದರೊಂದಿಗೆ NPS ರದ್ದುಪಡಿಸುವುದರ ಮೂಲಕ ವೇತನವನ್ನು ಹೆಚ್ಚು ಮಾಡಬೇಕು , ಇದರ ಸರ್ಕಾರ ಮಾತುಕತೆ ನಡೆಸಬೇಕು ಎಂಬುದು ಸಂಘದ ಆಗ್ರಹವಾಗಿದೆ. ಇದೆಲ್ಲದರ ಹೊರತಾಗಿ ಎಲ್ಲ ಕೇಡರ್ ಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ಆಗ್ರಹ ಕೂಡ ಕೇಳಿ ಬಂದಿದೆ. ಜೊತೆಗೆ ಈ ಎಲ್ಲ ಈ ಬೇಡಿಕೆಗಳು ಕೂಡ ಈಡೇರಬೇಕು ಎಂದು ಮುಷ್ಕರ ಮಾಡಲಾಗುವುದು ಎಂದು ಹೇಳಿದ್ದಾರೆ.