ಆಪರೇಷನ್ ಥಿಯೇಟರ್ ನಲ್ಲಿ ರೋಗಿಯ ನಿಷ್ಕಾಳಜಿ …..!

ಆಪರೇಷನ್ ಥಿಯೇಟರ್ ನಲ್ಲಿ ರೋಗಿಯ ಶಸ್ತ್ರಚಿಕಿತ್ಸೆಗಿಂತ ಈ ವೈದ್ಯರಿಗೆ ತಮ್ಮ ತಮ್ಮ ಮಾತೆ ಹೆಚ್ಚಾಯಿತು...!

 

ನವದೆಹಲಿ (ಜನವರಿ 13):

ಅಪರೇಷನ್ ಥಿಯೇಟರ್ ಒಳಗಡೆ ಬೆಡ್ ಮೇಲೆ ಮಲಗಿರುವ ರೋಗಿಗಿಂತ ಈ ವೈದ್ಯರಿಗೆ ತಮ್ಮ ವಾಗ್ವಾದವೆ ಹೆಚ್ಚು, ಈ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಟ್ಟಿದೆ.

ಆಪರೇಷನ್ ಥಿಯೇಟರ್ ಅಂದರೆ ಹುಡುಗಾಟದ ಸ್ಥಳವಲ್ಲ ಅಲ್ಲಿ ತುಂಬಾ ಗಂಭೀರತೆ ಕಾಪಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ಅಲ್ಲಿ ಮಲಗಿರುವ ರೋಗಿಯ ಜೀವ ಅಲ್ಲಿನ ವೈದ್ಯರ ಕೈಯಲ್ಲಿ ಇರುತ್ತದೆ. ಹೀಗಾಗಿ ವೈದ್ಯರ ಗಮನವೆಲ್ಲ ರೋಗಿಯ ಮೇಲಿರಬೇಕೇ ಹೊರತು ಬೇರೆಲ್ಲೂ ಅಲ್ಲ ಆದರೆ, ರೋಗಿಯನ್ನೇ ಮರೆತು ವೈದ್ಯರಿಬ್ಬರು ಮಾತಿನ ಚಕಮಕಿ ನಡೆಸಿರುವುದು ಅವರ ವೃತ್ತಿಪರತೆಯನ್ನು ಹಾಗೂ ತಮ್ಮ ವೈದ್ಯಕೀಯ ಶಿಸ್ತನ್ನು ಪ್ರಶ್ನೆ ಮಾಡಿದಂತಿದೆ.

ಆಪರೇಷನ್ ಥಿಯೇಟರ್ನಲ್ಲಿ ವೈದ್ಯರಿಬ್ಬರು ನಿಂತು ಶಸ್ತ್ರಚಿಕಿತ್ಸೆ ಮಾಡುವ ಬದಲು ಮಾತಿನ ಚಕಮಕಿ ನಡೆಸಿದ್ದಾರೆ. ಇಬ್ಬರು ಜಗಳ ಆಡುವುದನ್ನು ಉಳಿದ ವೈದ್ಯರು ಮೂಕ ಪ್ರೇಕ್ಷರಂತೆ ನೋಡುತ್ತಾ ನಿಂತಿದ್ದಾರೆ. ಇನ್ನೊಂದೆಡೆ ರೋಗಿ ಬೆಡ್ ಮೇಲೆ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದಾನೆ.

ಇಬ್ಬರ ನಡುವೆ ಅಹಂ ಭಾವ ಮಾತಿನ ಚಕಮಕಿಗೆ ಕಾರಣ ಆಪರೇಷನ್ ಥಿಯೇಟರ್ ಒಳಗಡೆ ಇದ್ದವರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ರೋಗಿಯು ಹಾಗೂ ಇತರೆ ವೈದ್ಯರು ಕೋರಿ ಕೊಂಡರು ಅದನ್ನು ಕಡೆಗಣಿಸಿ ವೈದ್ಯರಿಬ್ಬರು ತಮ್ಮ ಜಗಳವನ್ನು ಮುಂದುವರೆಸಿದ್ದಾರೆ.

ಘರ್ ಕೆ ಕಲೇಶ್ (Ghar Ke Kalesh) ಎಂಬುವರು ತಮ್ಮ ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದು ಈವರೆಗೂ 70 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಈ ಮೂಲಕ ವೈದ್ಯರನ್ನು ಜನ ಕಾಮೆಂಟ್ಸ್ ಗಳ ಮೂಲಕ ತರಾಟೆ ತೆಗೆದುಕೊಂಡಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button