ವಿಶ್ವದಾಖಲೆ ಬರೆದ ಕರ್ನಾಟಕ ಜನತೆ ; ಸುಮಾರು 6 ಲಕ್ಷ ಜನ ಯೋಗಾಥಾನ್ ನಲ್ಲಿ ಭಾಗಿಯಾಗಿ ವಿಶ್ವ ದಾಖಲೆ ಬರೆದ ಕರ್ನಾಟಕ…!

ಕರ್ನಾಟಕ ( ಜನವರಿ 16):

ನಿನ್ನೆ( J.15 ) ಕರ್ನಾಟಕದಲ್ಲಿ ಗಿನ್ನಿಸ್ ದಾಖಲೆಯ ಯೋಗಥಾನ ನಡೆದಿದೆ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಯೋಗಥಾನ್ ವಿಶ್ವದಾಖಲೆ ನಿರ್ಮಿಸಿದೆ .

ನಿನ್ನೆ ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವದಾಖಲೆ ಬರೆಯಲಾಗಿದೆ. ಈ ಮೂಲಕ ರಾಜಸ್ಥಾನದಲ್ಲಿ ಈ ಮೊದಲು 1.60 ಲಕ್ಷ ಜನರ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಕರ್ನಾಟಕ ನಿನ್ನೆ ಅಳಿಸಿ ಹಾಕಿದೆ. ಈ ಬಗ್ಗೆ ಮಾತನಾಡಿದ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಡಾ.ನಾರಾಯಣಗೌಡ ಯೋಗಥಾನ್ ಅನ್ನು ಉದ್ಘಾಟಿಸಿದರು. 

ಯೋಗಾಥಾನದಲ್ಲಿ ಭಾಗವಹಿಸಲು ರಾಜ್ಯದ ಸುಮಾರು 14 ಲಕ್ಷ ಯೋಗಪಟುಗಳು, ಯೋಗಾಸಕ್ತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಆದ್ದರಿಂದ ನಿನ್ನೆ ಜರುಗಿದ್ದ ಜರುಗಿದ ಯೋಗಾಥಾನದಲ್ಲಿ ಏಕಕಾಲಕ್ಕೆ ರಾಜ್ಯದ 6ಲಕ್ಷಕ್ಕೂಅಧಿಕ ಜನ ಭಾಗವಹಿಸಿ ಯೋಗಾಥಾನದಲ್ಲಿ ಗಿನ್ನೇಸ್ ದಾಖಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಧಾರವಾಡ :

ಇಂದಿನ ಬೃಹತ್ ಯೋಗಾಥಾನ್‍ನಲ್ಲಿ, ಧಾರವಾಡ ಜಿಲ್ಲೆಯ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮೈದಾನದಲ್ಲಿ 5904 ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಮೈದಾನದಲ್ಲಿ 3405, RN ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ 4769 ಹಾಗೂ ವಿದ್ಯಾಗಿರಿಯ JSS ಕಾಲೇಜು ಮೈದಾನದಲ್ಲಿ 3769 ಹಾಗೂ ಹುಬ್ಬಳ್ಳಿಯ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ 6076 ಸೇರಿ ಒಟ್ಟು ಧಾರವಾಡ ಜಿಲ್ಲೆಯ 5 ಸ್ಥಳಗಳಿಂದ 23,923 ಜನ ಏಕಕಾಲದಲ್ಲಿ ಯೋಗಾಸನ ಪ್ರದರ್ಶನ ಮಾಡಿದ್ದಾರೆ.

ಬಾಗಲಕೋಟೆ :

ನಿನ್ನೆ ಬಾಗಲಕೋಟೆ ಜಿಲ್ಲಾಡಳಿತ ಹಾಗೂ B.V.V. ಸಂಘ ಕ್ರೀಡಾಂಗಣದಲ್ಲಿ ಬೆಳಗ್ಗೆ ಗಿನ್ನಿಸ್ ದಾಖಲೆಯ ಯೋಗಾಭ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. BVVS ಕಾಲೇಜು ಮೈದಾನದಲ್ಲಿ ಸುಮಾರು16,632 ಜನ ಯೋಗಥಾನಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ, ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಶಾಖೆಯು 15 ಸಾವಿರಕ್ಕೂ ಹೆಚ್ಚು ಫೇಸ್ ಮಾಸ್ಕ್‌ ಗಳನ್ನ ಯೋಗಾಭ್ಯಾಸದಲ್ಲಿ ಪಾಲ್ಗೊಂಡವರಿಗೆ .

 ಬೆಳಗಾವಿಯ ಆರ್ಮಿ ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,914 ಹಾಗೂ ಸುವರ್ಣಸೌಧದ ಮುಂದೆ 17,712 ಮತ್ತು ಬಳ್ಳಾರಿಯ ಏರ್‍ಪೋರ್ಟ್ ಮೈದಾನಲ್ಲಿ 11,847 ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ 8,446, ರೇವಾ ವಿಶ್ವವಿದ್ಯಾಲಯ ಆವರಣದಲ್ಲಿ 4,798 ಬೀದರದ ಜಿಲ್ಲಾ ಕ್ರೀಡಾಂಗಣದಲ್ಲಿ 1,980, ಚಾಮರಾಜನಗರ ಜಿಲ್ಲಾ ಕ್ರೀಡಾಂಗಣದಲ್ಲಿ 6,843, ಚಿಕ್ಕಬಳ್ಳಾಪುರ ಎಸ್‍ಜೆಸಿಐಟಿ ಕಾಲೇಜು ಮೈದಾನದಲ್ಲಿ 9256, ಚಿತ್ರದುರ್ಗ ಜಿಲ್ಲಾ ಕ್ರೀಡಾಂಗಣದಲ್ಲಿ 8,675 ಮಂದಿ ಯೋಗಾಸನ ಮಾಡಿದರು.

ದಕ್ಷಿಣ ಕನ್ನಡ ಮೂಡಬಿದರೆ ಆಳ್ವಾಸ ಕಾಲೇಜು ಮೈದಾನದಲ್ಲಿ 31,986, ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ 11,808, ಗದಗ ಎಎಸ್‍ಎಸ್ ಆರ್ಟ್ಸ್ ಕಾಲೇಜು ಮೈದಾನದಲ್ಲಿ 7842, ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ 6,544, ಕಲಬುರ್ಗಿಯ ಪೊಲೀಸ್ ಪೆರೆಡ್ ಮೈದಾನದಲ್ಲಿ 16,064 ಮತ್ತು ಎನ್‍ವಿ ಕಾಲೇಜು ಮೈದಾನದಲ್ಲಿ 4,461, ಕೋಲಾರದ ಶ್ರೀ ಎಂ.ವಿ. ಕ್ರೀಡಾಂಗಣದಲ್ಲಿ 16,451, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 9781, ಮಂಡ್ಯ PES ಕ್ರೀಕೇಟ್ ಮೈದಾನದಲ್ಲಿ 8,892, ಮೈಸೂರು ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,042 ಮಂದಿ ಯೋಗಾಸನ ಮಾಡಿದರು.

ಈ ಕಾರ್ಯಕ್ರಮ ಯಶಸ್ವಿಗೊಳಿಸಿದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಸರ್ಕಾರಿ ನೌಕರರು, ಅಧಿಕಾರಿಗಳು, ಯೋಗಪಟುಗಳು ಸೇರಿದಂತೆ ಎಲ್ಲರಿಗೂ ಸಚಿವರು ಅಭಿನಂದನೆಗಳನ್ನು ಸಲ್ಲಿಸಿದರು.

 

 

 

 

 

 

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button