ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಸಂವಿಧಾನದ ಶಕ್ತಿ ಅಡಗಿದೆ.
ಚಿತ್ರದುರ್ಗ ಅ.02

ಕೋಡಿಹಳ್ಳಿ.ಟಿ.ಶಿವಮೂರ್ತಿ. ಯುವ ಬರಹಗಾರರು ಅಧ್ಯಕ್ಷರು,
ಡಾ, ಬಿ.ಆರ್. ಅಂಬೇಡ್ಕರ್ ಯುವಕ ಸಂಘ. ಕೋಡಿಹಳ್ಳಿ. ತಾ,ಚಳ್ಳಕೆರೆ.ಜಿಲ್ಲಾ.ಚಿತ್ರದುರ್ಗ
ಹೌದು ದಿನಾಂಕ : 01/08/2024 ಗುರವಾರ ದಂದು ಎಸ್ಸಿ/ಎಸ್ಟಿ ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿದ ಈ ತೀರ್ಪಿನಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ರವರು ನಮ್ಮ ದೇಶಕ್ಕೆ ನೀಡಿದ ಸಂವಿಧಾನವು ಬಹುಮುಖ್ಯ ಪಾತ್ರ ವಹಿಸಿದೆ, ಈ ಸಂವಿಧಾನದಲ್ಲಿ ಎಂತಹ ಅದ್ಭುತ ಶಕ್ತಿ ಅಡಗಿದೆ ಎಂಬುದು ಇಡೀ ಜಗತ್ತಿಗೆ ಮಾದರಿ ಎಂದರೆ ತಪ್ಪಾಗಲಾರದು.ಈ ಮಹತ್ವದ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಒಳಗಿರುವಂತಹ ಸಣ್ಣ ಪುಟ್ಟ ಜಾತಿಗಳ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಅವಕಾಶಗಳು ಸಿಗಲಿವೆ ಮತ್ತು ಎಲ್ಲ ಕುಟುಂಬಗಳು ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳಬಹುದು.ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ನ ಏಳು ಜನ ಸದಸ್ಯರ ಸಾಂವಿಧಾನಿಕ ಪೀಠವು ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಂದ ಅಭೂತಪೂರ್ವ ಗೆಲುವು, ಈ ತೀರ್ಪು ನಮ್ಮ ಭಾರತೀಯ ಸಂವಿಧಾನದ ನಿಯಮಗಳಿಗೆ ಹಾಗೂ ಆಶಯಗಳಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.ಕರ್ನಾಟಕ ರಾಜ್ಯದ ಎಲ್ಲಾ ದಲಿತ ಸಮುದಾಯದ ಸಂಘಟನೆಗಳು ಮೂವತ್ತು ದಶಕಗಳ ಹೋರಾಟದ ಪ್ರತಿಫಲ ಹಾಗೂ ಅದೆಷ್ಟೋ ದೀನ ದಲಿತ ದಮನಿತರು ತಮ್ಮ ಜೀವಗಳನ್ನು ಲೆಕ್ಕಿಸದೇ ನಡೆಸಿದ ನಿರಂತರ ಹೋರಾಟಗಳು ಮತ್ತು ನಮ್ಮನ್ನೆಲ್ಲ ಅಗಲಿದ ಆ ಜೀವಗಳಿಗೆ ಸಂದ ಜಯವೇ ಈ ಒಳ ಮೀಸಲಾತಿಯ ಐತಿಹಾಸಿಕ ತೀರ್ಪು, ಇದು ಎಲ್ಲರಿಗೂ ಅತ್ಯಂತ ಸ್ವಾಗತಾರ್ಹವಾಗಿದೆ.ಡಾ, ಬಿ.ಆರ್ ಅಂಬೇಡ್ಕರ್ ರವರು ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರ ಬುದ್ದಿ ಶಕ್ತಿಯಿಂದ ಕೊಡುಗೆ ನೀಡಿದ ಈ ಸಂವಿಧಾನ ನಮ್ಮ ಭಾರತ ದೇಶಕ್ಕೆ ಅಲ್ಲದೆ ಇಡೀ ಜಗತ್ತಿಗೆ ಮಾದರಿಯಾಗಿ ಅದನ್ನು ಒಪ್ಪಿಕೊಳ್ಳುವಂತಹ ಹಾಗೂ ಅಪ್ಪಿ ಕೊಳ್ಳುವಂತಹ ಸಾಮರ್ಥ್ಯವಿರುವ ಗ್ರಂಥ ಭಂಡಾರ ಇದಾಗಿದೆ.ನಾನು ಹೋದ ನಂತರ ನಿಮ್ಮಿಂದ ದೂರ ಆಗಿದ್ದಿನಿ ಎಂದು ಕೊಳ್ಳಬೇಡಿ, ಎಲ್ಲಿಯವರೆಗೆ ಸಂವಿಧಾನ ಇರುವುದೋ ಅಲ್ಲಿಯವರೆಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎನ್ನುವ ಈ ಸಂದೇಶ ಇಂದು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು ಸಾಕ್ಷಿಯಾಗಿದೆ, ಅಂದರೆ ಅಂಬೇಡ್ಕರ್ ರವರು ಬಾಹ್ಯವಾಗಿ ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ ಹೊರತು ಯಾವೊಬ್ಬ ಭಾರತೀಯನ ಪ್ರತಿಯೊಬ್ಬರ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿ “ಮಹಾ ನಾಯಕ” ನಾಗಿ ಇಂದಿಗೂ ಉಳಿದಿದ್ದಾರೆ ಎಂಬುದಕ್ಕೆ ಈ ವಿಶ್ವ ಶ್ರೇಷ್ಠ ಸಂವಿಧಾನವೇ ಸಾಕ್ಷಿ ಎಂದರೆ ತಪ್ಪಾಗಲಾರದು.ಹಾಗಾಗಿ ಮೂವತ್ತು ವರ್ಷಗಳ ಕಾಲ ನಿರಂತರವಾಗಿ ಒಳ ಮೀಸಲಾತಿಗಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿರುವ ನಮ್ಮ ಭಾರತ ದೇಶದ ಹಾಗೂ ಕರ್ನಾಟಕ ರಾಜ್ಯದ ಮತ್ತು ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳ ಹಲವು ಸಂಘಟನೆಗಳ ಮುಖಂಡರಿಗೆ, ಹೋರಾಟಗಾರರಿಗೆ, ಕಾರ್ಯಕರ್ತರಿಗೆ, ಎಲ್ಲಾ ಪದಾಧಿಕಾರಿಗಳಿಗೆ ಆತ್ಮೀಯವಾಗಿ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ಈಗಲಾದರೂ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಈ ಒಳ ಮೀಸಲಾತಿಯನ್ನು ಅನುಷ್ಠಾನಕ್ಕೆ ತಂದು ಎಲ್ಲಾ ಎಸ್ಸಿ, ಎಸ್ಟಿ ಹಿಂದುಳಿದ ಸಮುದಾಯಗಳ ಸರ್ವೋತೋಮುಖ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದು ಅವರಿಗೆ ನಿಷ್ಪಕ್ಷಪಾತವಾಗಿ ಹಾಗೂ ನ್ಯಾಯ ಸಮ್ಮತವಾಗಿ ತಲುಪಿಸಿ ಅವರ ಮನೆ ಮನಗಳಲ್ಲಿ ಸದಾ ಬೆಳಗುವ ದಿವ್ಯ ಜ್ಯೋತಿಯಂತೆ ನಮ್ಮ ಕರ್ನಾಟಕ ಸರ್ಕಾರ ಬೇರೆ ರಾಜ್ಯಗಳಿಗೆ “ಮಾದರಿ ಸರ್ಕಾರವಾಗಲಿ” ಎಂಬುದೇ ನಮ್ಮ ಹಾರೈಕೆ ಪ್ರತಿಯೊಬ್ಬರ ಆಶಯವಾಗಿದೆ.
ವರದಿ:ಶಿವಮೂರ್ತಿ.ಟಿ.ಕೋಡಿಹಳ್ಳಿ.ಚಿತ್ರದುರ್ಗ.