ಯಾವುದೇ ಜಾತಿ ಭೇದ ಭಾವ ಮಾಡದೆ ಅಂಬೇಡ್ಕರರ ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ಕೊಡಬೇಕು – ಪ್ರಾಚಾರ್ಯ ಸಿ.ಬಿ ಪೊಲೀಸ್ ಪಾಟೀಲ್.

ರೋಣ ಜ.26

ಪ್ರತಿಷ್ಠಿತ ಕನಕದಾಸ ಶಿಕ್ಷಣ ಸಮಿತಿಯ ಅಂಗ ಸಂಸ್ಥೆಗಳಾದ ರೋಣ ನಗರದ ಶ್ರೀ ಶರಣ ಬಸವೇಶ್ವರ ಪ್ರೌಢ ಶಾಲೆ ಪದವಿ ಪೂರ್ವ ಹಾಗೂ ಕೆ.ಎಸ್.ಎಸ್ ಮಹಾವಿದ್ಯಾಲಯ ಎಲ್ಲ ಸಂಸ್ಥೆಗಳ ಅಡಿಯಲ್ಲಿ 76 ನೇ. ಗಣರಾಜ್ಯೋತ್ಸವದ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಪ್ರಾರಂಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಡಾ, ಬಿ.ಆರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಸಂಪ್ರದಾಯ ಬದ್ಧವಾಗಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಂತರ ಸಂಸ್ಥೆಯ ಸ್ಥಾನಿಕ ಮುಖ್ಯಸ್ಥರಾದ ಐ.ಬಿ ದಂಡಿನ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ನಂತರ ರಾಷ್ಟ್ರಗೀತೆ ಯೊಂದಿಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೌರವ ಸಲ್ಲಿಸಲಾಯಿತು. ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಪಥ ಸಂಚಲನ ಕಾರ್ಯಕ್ರಮ ನೆರವೇರಿತು. ಈ ಸಮಯದಲ್ಲಿ ಕೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿ.ಬಿ ಪೊಲೀಸ್ ಪಾಟೀಲ್ ಇವರು ಕಾರ್ಯಕ್ರಮ ಉದ್ದೇಶಿಸಿ ನಾವಿಂದು 76 ನೇ. ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ ಹಾಗೂ ಭಾರತದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ವಿರುತ್ತದೆ. 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನದ ನೆನಪಿನಲ್ಲಿ ಈ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ದಿನ ದಂದು ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಜ್ಯವೆಂದು ಘೋಷಿಸಿ ಕೊಂಡಿತು. ವಿಶೇಷವಾಗಿ ಗಣ ರಾಜ್ಯಕ್ಕಾಗಿ ಮುಖ್ಯ ಪಾತ್ರ ವಹಿಸಿರುವ ಅಂಬೇಡ್ಕರರ ಸಂವಿಧಾನ ಎಲ್ಲದಕ್ಕೂ ಮೂಲ ಅಸ್ತಿ ಬಾರ ಯಾವುದೇ ಜಾತಿ ಭೇದ ಭಾವ ಮಾಡದೆ ಸಂವಿಧಾನಕ್ಕೆ ಗೌರವವನ್ನು ಸಲ್ಲಿಸಬೇಕು ಎಂದು ಮಾತನಾಡಿದರು. ನಂತರ ಈ ಸಮಯದಲ್ಲಿ ಬಿ.ಇ.ಡಿ ಪ್ರಶಿಕ್ಷಣಾರ್ಥಿಯಾದ ಮುದಿಯಪ್ಪ ಹುಡೇದ್ ರವರು ಜನವರಿ 26, 1950 ರಂದು ಭಾರತೀಯ ಸಂವಿಧಾನವು ಜಾರಿಗೆ ಬಂದಿತು. ಭಾರತದ ಸಂವಿಧಾನವನ್ನು ರಚಿಸುವ ಉದ್ದೇಶದಿಂದ ಸಂವಿಧಾನ ಸಭೆಯು ತನ್ನ ಮೊದಲ ಅಧಿವೇಶನವನ್ನು ಡಿಸೆಂಬರ್ 9, 1946 ರಂದು ನಡೆಸಿತು. ಕೊನೆಯ ಅಸೆಂಬ್ಲಿ ಅಧಿವೇಶನವು ನವೆಂಬರ್ 26, 1949 ರಂದು ಕೊನೆ ಗೊಂಡಿತು ಮತ್ತು ನಂತರ ಒಂದು ವರ್ಷದ ನಂತರ ಸಂವಿಧಾನವನ್ನು ಅಂಗೀಕರಿಸ ಲಾಯಿತು ಎಂದು ಮಾತನಾಡಿದರು. ಈ ಸಮಯದಲ್ಲಿ ಎಸ್.ಎಸ್.ಬಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಎ.ಎಚ್ ನಾಯ್ಕರ್ ಎಸ್.ಬಿ ಸಿರಗುಂಪಿ, ಎಸ್.ವಿ ಶಂಕನಗೌಡ್ರ, ಡಾ, ಎಸ್.ಆರ್ ನದಾಫ್, ಎಮ್.ಎಚ್ ನಾಯ್ಕರ್, ಕೆ.ಕೆ ಕಲ್ಲಪ್ಪನವರ್, ಶಿವು ಮಠದ, ಬಸವರಾಜ್ ಜಂಗಣ್ಣವರ್, ಕುಮಾರಿ ಲಲಿತಾ ನಂದೆಪ್ಪಗೌಡ್ರ, ಯು.ಬಿ ಬಸನಗೌಡ ಪದವಿ ಮಹಾವಿದ್ಯಾಲಯದ ಹಾಗೂ ಪ್ರೌಢ ಶಾಲೆ ಸಿಬ್ಬಂದಿ ವರ್ಗ ಪ್ರಶಾಂತ ಹಾಗೂ ಓಲೆಕಾರ್ ಸರ್ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button