ಮೈಕ್ರೋ ಫೈನಾನ್ಸ್ ಗಳ ಕಿರುಕುಳ ದಿಂದ ಬೇಸತ್ – ಮಹಿಳೆ ಆತ್ಮಹತ್ಯೆಗೆ ಪ್ರಯತ್ನ.
ಕೊಟ್ಟೂರು ಫೆ.04

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗಳಿಂದ ಬೇಸತ್ ಮಹಿಳೆ ದಿನಾಂಕ ಫೆಬ್ರವರಿ 03 ಸೋಮವಾರ ದಂದು ಆತ್ಮಹತ್ಯೆ ಪ್ರಯತ್ನ ಮಾಡಿ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಣ ನವ ಚೇತನ ಆದರ್ಶ ಮತ್ತು ಧರ್ಮಸ್ಥಳ ಸಂಘದಿಂದ ಸಾಲವನ್ನು ಪಡೆದಿದ್ದು ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ತಾಳಲಾರದೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಸರ್ಕಾರ ಮತ್ತು ಆರ್‌ಬಿಐ ಮಾರ್ಗ ದರ್ಶನದಂತೆ ಮೈಕ್ರೋ ಫೈನಾನ್ಸ್ ನವರು ಗ್ರಾಹಕರೊಂದಿಗೆ ವ್ಯವಹರಿಸ ಬೇಕು ಆದರೆ ಕೊಟ್ಟೂರಿನ ಬಳ್ಳಾರಿ ಕ್ಯಾಂಪಿನಲ್ಲಿರುವ ಆಫ್ರಿನಾ ಬಿ ಗಂಡ ಅಕ್ರಂ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದಿದ್ದರಿಂದ ಒಂದು ವರ್ಷದ ವರೆಗೆ ಸರಿಯಾಗಿ ಕಟ್ಟಿ ಕೊಂಡು ಬಂದಿದ್ದೇವೆ.
ಆದರೆ ನನಗೆ ಊಟ ಮಾಡಲು ಸಹ ತೊಂದರೆ ಯಾಗುತ್ತದೆ ಮೈಕ್ರೋ ಫೈನಾನ್ಸ್ ನವರು ಫೋನಿನಲ್ಲಿ ಮತ್ತು ಮನೆ ಮುಂದೆ ಬಂದು ಎಲ್ಲಾ ಒಂದೇ ಸಲಕ್ಕೆ ಬಂದು ನನಗೆ ತುಂಬಾ ತೊಂದರೆ ಕೊಡುತ್ತಾರೆ ಅವರ ಕಾಟ ತಾಳಲಾರದೆ ನಾನು ಸಾಯಲು ಪ್ರಯತ್ನಿಸಿದ್ದೇನೆ ಎಂದು ನಮ್ಮ ಸುದ್ದಿ ವಾಹಿನಿಯೊಂದಿಗೆ ತಿಳಿಸಿದರು.
ಈ ಕಾರಣದಿಂದಾಗಿ ಗಂಗಾಧರ ಸ್ವಾಮಿ ತಂದೆ ಆದಯ್ಯಸ್ವಾಮಿ ಜಗದೀಶ್ ತಂದೆ ನಾಗಪ್ಪ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಸಂಘದ ಸೇವಾ ಪ್ರತಿ ನಿಧಿಗಳು ಇವರುಗಳ ಮೇಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಇವತ್ತಿನ ಕಾಲದಲ್ಲಿ ಬಡವರು ಮೈಕ್ರೋ ಫೈನಾಸಿನಿಂದ ಯಾವ ರೀತಿ ಕಷ್ಟ ಅನುಭವಿಸುತ್ತಾರೆ.
ಕೆಲವರಿಗೆ ಮಾತ್ರ ಅನುಕೂಲ ವಾಗುತ್ತದೆ ಮತ್ತೆ ಕೆಲವರಿಗೆ ಅವರ ಯೋಗ್ಯತೆಗೆ ಮೀರಿ ಸಾಲ ನೀಡಿ ವಸೂಲಿ ಮಾಡುತ್ತಿದ್ದಾರೆ ಹೀಗಾಗಿ ಮಕ್ಕಳನ್ನು ಶಾಲೆ ಬಿಡಿಸಿ ಗೂಳೆ ಹೋಗಿ ಸಂಘ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಮಕೃಷ್ಣರವರು ನಮ್ಮ ಸಿದ್ದಿ ವಾಹಿನಿಯೊಂದಿಗೆ ಮಾತನಾಡಿದರು ಇದಕ್ಕೆ ಮೈಕ್ರೋ ಫೈನಾನ್ಸ್ಗಳ ಹಾವಳಿಗಳಿಂದ ಸಾರ್ವಜನಿಕರಿಗೆ ಅನಾಹುತ ಆಗದೆ ಹೇಗೆ ಕಾಪಾಡುತ್ತಾರೆ ಎಂದು ಕಾಯ್ದು ನೋಡ ಬೇಕಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು