ಒಳ ಮೀಸಲಾತಿ ವರ್ಗೀಕರಣ ಮಂಡಿಸಿದ ತೆಲಂಗಾಣ ಮುಖ್ಯಮಂತ್ರಿ – ರೇವಂತ ರೆಡ್ಡಿ.
ಬಾಗಲಕೋಟೆ ಫೆ.05

ತೆಲಂಗಾಣ ರಾಜ್ಯದ ಮುಖ್ಯ ಮಂತ್ರಿಗಳಾದ ರೇವಂತ ರೆಡ್ಡಿ ಅವರು ಫೆಬ್ರುವರಿ/4/2025 ರಂದು ವಿಧಾನ ಸಭಾ ಅಧಿವೇಶನದಲ್ಲಿ ಒಳ ಮೀಸಲಾತಿ ವರ್ಗಿಕರಣವನ್ನು ಮಂಡಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಬೆಣ್ಣೂರು ರವರು ತೆಲಂಗಾಣ ಮುಖ್ಯ ಮಂತ್ರಿಗಳು ನಮ್ಮ ಸಮುದಾಯದ ಬಹು ದಿನದ ಬೇಡಿಕೆಯಾದ ಒಳ ಮೀಸಲಾತಿ ವರ್ಗಿಕರಣವನ್ನು ಎ.ಬಿ.ಸಿ.ಡಿ ಯಲ್ಲಿ ವರ್ಗಿಕರಣ ಮಾಡಿ ಸದನದಲ್ಲಿ ಒಪ್ಪಿಗೆ ಪಡೆದು ಎಸ್.ಸಿ ಗಳಲ್ಲಿ ಬರುವ 59 ಜಾತಿಗಳಲ್ಲಿ ಮೂರು ವಿಭಾಗಗಳನ್ನು ಮಾಡಿ ಎ ಗುಂಪಿನಲ್ಲಿ ಬರುವ 15 ಉಪ ಜಾತಿಗಳಿಗೆ 1% ಬಿ ಗುಂಪಿನಲ್ಲಿ ಬರುವ 18 ಉಪ ಜಾತಿಗಳಿಗೆ 9% ಸಿ ಗುಂಪಿನಲ್ಲಿ ಬರುವ 25 ಉಪ ಜಾತಿಗಳಿಗೆ 5% ಒಳ ಮೀಸಲಾತಿ ಹಂಚಿಕೆ ಮಾಡಿ ಭಾರತದ ಇತಿಹಾಸದಲ್ಲಿ ಫೆಬ್ರುವರಿ/4/2025 ರ ದಿನವನ್ನು ಚರಿತ್ರೆಯಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಸಲ್ಲುತ್ತದೆ ಅವರಿಗೆ ಮಾದಿಗ ಸಮುದಾಯದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಪತ್ರಿಕಾ ಮಾಧ್ಯಮದ ಮೂಲಕ ಅರ್ಪಿಸಿದರು.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಯಮನೂರ.ಸಿ.ಹಲಗಿ.ಶಿರೂರು. ಬಾಗಲಕೋಟೆ