ಪೂಜ್ಯ ಶ್ರೀ ಮಹಾಂತ ಶಿವ ಯೋಗಿಗಳ ಜನ್ಮ ದಿನ ವ್ಯಸನ ಮುಕ್ತ ದಿನ ಜಾಗೃತಿ.
ಗುಂಡನಪಲ್ಲೆ ಅ.01

ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ವತಿಯಿಂದ ಬೆನಕಟ್ಟಿ ಉಪಕೇಂದ್ರ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಗುಡಿ ಆವರಣದಲ್ಲಿ ಪೂಜ್ಯ ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ “ವ್ಯಸನ ಮುಕ್ತ ದಿನ” ಜಾಗೃತಿ ಆಯೋಜಿಸಲಾಗಿತ್ತು. ಗ್ರಾಮದ ಮುಖಂಡರು ಯುವಕರು ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಎಸ್ ಎಸ್ ಅಂಗಡಿಯವರು ಪೂಜ್ಯ ಮಹಾಂತ ಶಿವಯೋಗಿಗಳು ಆಶಯದಂತೆ ವ್ಯಸನ ಮುಕ್ತ ಸಮಾಜಕ್ಕೆ ನಾವೆಲ್ಲರೂ ಕೈಜೋಡಿ ಸೋಣ.”ವ್ಯಸನ ಹಾಸನ ಮಾಡೋಣ” “ಮಾನವನ ದುಶ್ಚಟಗಳು ಪರಿಸರ ಕುಟುಂಬ ಸಮಾಜಕ್ಕೆ ಮಾರಕ” ಪೂಜ್ಯ ಮಹಾಂತ ಶಿವಯೋಗಿಗಳು ಜೋಳಿಗೆಗೆ ನಿಮ್ಮ ದುಶ್ಚಟಗಳನ್ನು ಹಾಕಿ ನಿರೋಗಿಗಳಾಗಿ ಬದುಕು ಸಾಗಿಸಿ ಎಂದು ಮಹಾತ್ಮರು ಜನರಾ ರೋಗ್ಯಕ್ಕಾಗಿ ಶ್ರಮಿಸಿದರು. ತಂಬಾಕು ಸಿಗರೇಟ್ , ಗುಟ್ಕಾ ಮಧ್ಯಪಾನ ಸೇವನೆ ಆರೋಗ್ಯಕ್ಕೆ ಮಾರಕ ದುಶ್ಚಟಗಳನ್ನು ದೂರ ತಳ್ಳಲು ಮನಸ್ಸಿನ ದೃಢ ನಿರ್ಧಾರವೇ ಮದ್ದು ತಂಬಾಕು ಮನುಷ್ಯನನ್ನು ನರಕ ಕೂಪಕ್ಕೆ ತಳ್ಳುವುದು. ತಂಬಾಕಿನಲ್ಲಿ ಸುಮಾರು 4000 ವಿಷಕಾರಕಗಳು ಮನುಷ್ಯನಿಗೆ ಕ್ಯಾನ್ಸರ್ ನರದೌರ್ಬಲ್ಯ ಪಾರ್ಶ್ವವಾಯು ಮನೋರೋಗ ದಂತಗಳ ರೋಗ ರಕ್ತದೊತ್ತಡ ಮಧುಮೇಹ ರಕ್ತ ಹೀನತೆ ಅನೇಕ ಕಾಯಿಲೆಗಳು ಕಾಡಬಹುದು. ತಂಬಾಕು ಬೇಡ ಆರೋಗ್ಯ ಬೇಕು. ಕುಡಿತ ಬದುಕು ನಾಶ ಮಾಡುವುದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ, ಗ್ರಾಮದ ಶಿವಪ್ಪ ಮಾದರಿ, ವಿಠ್ಠಲ ಮೇಲಿನಮನಿ, ಬಸಪ್ಪ ದೊಡಮನಿ, ಬಸಪ್ಪ ದುರ್ಗಪ್ಪ ದೊಡಮನಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.