42 ವರ್ಷಗಳ ಬಳಿಕ ಕಾಂಗ್ರೇಸ್ ಪಕ್ಷದ ಚಿಹ್ನೆಯನ್ನು ಬದಲಿಸಲು ಮುಂದಾದ D.K. ಶಿವಕುಮಾರ್….!

 

ಬೆಂಗಳೂರು (ಫೆ.07):

ರಾಜ್ಯದ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಕಾಂಗ್ರೆಸ್‌ನಲ್ಲಿ ಅದೃಷ್ಟ ಹಾಗೂ ದೈವದ ಮೊರೆ ಹೋಗಿರುವ ಡಿ.ಕೆ. ಶಿವಕುಮಾರ್‌, ಸಂಖ್ಯಾಶಾಸ್ತ್ರಜ್ಞರ ಸಲಹೆಯ ಮೇರೆಗೆ ತಮಗೆ ಅದೃಷ್ಟ ಕಾಂಗ್ರೆಸ್‌ನ ಹಸ್ತದ ಗುರುತಿನ ಚಿಹ್ನೆಯಲ್ಲಿದ್ದ ರೇಖೆಯನ್ನೇ ಬದಲಿಸಿದ್ದಾರೆ.

ರಾಜ್ಯದ ಚುಕ್ಕಾಣಿ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳು ವಿವಿಧ ಹಂತದ ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಈ ಬಾರಿ ಶತಾಯ ಗತಾಯ ಕಾಂಗ್ರೆಸ್‌ ಅಧಿಕಾರಕ್ಕೆ ತರಲೇಬೇಕು ಎಂದು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರಲ್ಲಿಯೂ ಈಗಾಗಲೇ ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ .

ರಾಜ್ಯದ ಕುಬೇರ ಮೂಲೆಯಲ್ಲಿರುವ ಕುರುಡುಮಲೆ ಗಣೇಶನ ಸನ್ನಿಧಾನದಿಂದಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್‌ , ಈಗ ಸಂಖ್ಯಾಶಾಸ್ತ್ರದ ಮೊರೆ ಹೋಗಿರುವ ಅವರು ಕಾಂಗ್ರೆಸ್‌ ಹಸ್ತದ ಗುರುತನ್ನೇ ಬದಲಾವಣೆ ಮಾಡಲು ಮುಂದಾಗಿದ್ದಾರೆ.

1980ರಲ್ಲಿ ರಚಿಸಲಾದ ಹಸ್ತದ ಗುರುತು ಬದಲು:

ದೇಶದಲ್ಲಿ 1980 ರಲ್ಲಿ ಕಾಂಗ್ರೆಸ್‌ ಪಕ್ಷದ ಅಧಿಕೃತ ಚಿಹ್ನೆಯಾಗಿ ಹಸ್ತದ ಗುರುತನ್ನು ರಚನೆ ಮಾಡಿ ಚಾಲ್ತಿಗೆ ತರಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಯಾರೊಬ್ಬರೂ ಕೂಡ ಹಸ್ತದ ಗುರುತನ್ನು ಬದಲು ಮಾಡಲು ಮುಂದಾಗಿಲ್ಲ. ಆದರೆ, KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಕ್ಷದ ಗೆಲುವಿಗಾಗಿ ಕಚ್ಚೆ ಕಟ್ಟಿ ನಿಂತಂತೆ,ತಮ್ಮ ಅದೃಷ್ಟದ ಕಾರಣಕ್ಕೆ ಪಕ್ಷದ ಕೈ ರೇಖೆಯನ್ನೇ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬರೋಬ್ಬರಿ 42 ವರ್ಷಗಳ ಬಳಿಕ ಕಾಂಗ್ರೆಸ್‌ ಹಸ್ತದ ಗುರುತು ಬದಲಾವಣೆ ಮಾಡಲಾಗಿದೆ. ಹಲವಾರು ರಾಜಕೀಯ ವಿದ್ಯಮಾನಗಳ ನಡುವೆ ಕಾಂಗ್ರೆಸ್‌ನ ಹಸ್ತದ ಗುರುತಿನ ರೇಖೆಗಳನ್ನು ಬದಲಿಸಲಾಗಿದೆ. ಈ ಹಿಂದಿನ ಹಸ್ತದಲ್ಲಿ ಒಟ್ಟು ಮೂರು ಗೆರೆಗಳು ಇದ್ದವು. ಈಗ ಮತ್ತೊಂದು ಗೆರೆಯನ್ನು ಎಳೆಯಲಾಗಿದೆ.

ಹಸ್ತದಲ್ಲಾದ ಬದಲಾವಣೆಗಳು ಏನು.?

  • ಈ ಹಿಂದಿನ ಹಸ್ತದಲ್ಲಿ ಒಟ್ಟು ಮೂರು ಗೆರೆಗಳು ಇದ್ದವು.
  • ಈಗ ಮತ್ತೊಂದು ಗೆರೆಯನ್ನು ಎಳೆಯಲಾಗಿದೆ.
  • ಡಿ.ಕೆ. ಶಿವಕುಮಾರ್ ಬದಲಾವಣೆ ಮಾಡಿರುವ ಹಸ್ತದಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ.
  • ಹೊಸದಾದ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯ ತಲುಪುತ್ತದೆ.
  • 42 ವರ್ಷಗಳ ಬಳಿಕ ಕಾಂಗ್ರೆಸ್‌ ಹಸ್ತದ ಗುರುತು ಬದಲಾವಣೆ

ಡಿಕೆಶಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಬಳಕೆ :

ಹೊಸದಾಗಿ ಡಿ.ಕೆ. ಶಿವಕುಮಾರ್‌ ಅವರು ಬದಲಾವಣೆ ಮಾಡಿರುವ ಹಸ್ತದಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ. ಈ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯ ತಲುಪುತ್ತದೆ. ಇದನ್ನು ಖ್ಯಾತ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಹಸ್ತದಲ್ಲಿ ರೇಖೆ ಬದಲಾವಣೆ  ಮಾಡಲಾಗಿದೆ ಎಂದು ಕೇಳಿಬರುತ್ತಿದೆ. ಇನ್ನು ಈ ಬದಲಾವಣೆಯ ಹೊಸ ಮಾದರಿಯ ಹಸ್ತದ ಗುರುತನ್ನು ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಬಳಕೆಯಾಗುತ್ತಿದೆ.

ಹಳೆಯ ಚಿಹ್ನೆಯನ್ನೇ ಬಳಸುತ್ತಿರುವ ಸಿದ್ದರಾಮಯ್ಯ:

ರಾಜ್ಯದಲ್ಲಿ ಎರಡು ತಂಡಗಳಾಗಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಮಾಡಲಾಗುತ್ತಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಹಳೆಯ ಹಸ್ತದ ಗುರುತು ಬಳಸಲಾಗುತ್ತಿದೆ. ಇನ್ನು ಡಿ.ಕೆ. ಶಿವಕುಮಾರ್‌ ಮಾತ್ರ ಸಂಖ್ಯಾಶಾಸ್ತ್ರದ ಮೊರೆ ಹೋದ ಕಾಂಗ್ರೆಸ್ ಚಿಹ್ನೆಯನ್ನು ಬಳಸುತ್ತಿದ್ದಾರೆ. ಆದರೆ, ಈ ಹಸ್ತದ ರೇಖೆ ಬದಲಿಸಿರುವ ಚಿಹ್ನೆಯ ಬಳಕೆಗೆ ಕಾಂಗ್ರೆಸ್ ಹಲವು ಚರ್ಚೆಗಳು ಆರಂಭವಾಗಿವೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button